Top

ಮತ್ತೆ ಪಬ್ ದಾಳಿ ಮಾಡ್ತೀವಿ : ವಿಹೆಚ್‌ಪಿ ಎಚ್ಚರಿಕೆ

ಮತ್ತೆ ಪಬ್ ದಾಳಿ ಮಾಡ್ತೀವಿ : ವಿಹೆಚ್‌ಪಿ ಎಚ್ಚರಿಕೆ
X

ಮಂಗಳೂರು : ಇಷ್ಟು ದಿನ ತಣ್ಣಗಿದ್ದ ಕಡಲ ತದಿ ಮಂಗಳೂರಿನಲ್ಲಿ ಮತ್ತೆ ಸಂಸ್ಕತಿಯ ರಕ್ಷಣೆಯ ಕೂಗು ಕೇಳಿ ಬಂದಿದೆ. ಲೇಡಿಸ್ ಬಾರ್ ಲೈವ್ ಬ್ಯಾಂಡ್ ಗಳಿಗೆ ಅನುಮತಿ ನೀಡಿರುವುದು ಹಿಂದೂ ಪರ ಸಂಘಟನೆಗಳ ಕಣ್ಣು ಕೆಂಪಾಗಿಸಿದೆ. ಹೀಗಾಗಿ ಮತ್ತೊಂದು ಪಬ್ ದಾಳಿಯ ಸೂಚನೆ ನೀಡಿರುವ ಧರ್ಮ ರಕ್ಷಕ ಸಂಘಟನೆಗಳು ಜಿಲ್ಲಾಡಳಿತಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ. ಅಷ್ಟಕ್ಕೂ ಮತ್ತೆ ಕರಾವಳಿಯಲ್ಲಿ ಆರಂಭವಾದ ಈ ಸಂಘರ್ಷ ಯಾವುದು ಅಂತೀರ..? ಮುಂದೆ ಓದಿ..

ಪಬ್ ದಾಳಿ ಮತ್ತು ಹೋಂ ಸ್ಟೇ ದಾಳಿಗಳ ಮೂಲಕ ಜಾಗತಿಕ ಕುಖ್ಯಾತಿಯ ದಾಳಿಗಳಿಂದ ಹೆಸರಾದ ಕಡಲ ತಡಿ ಮತ್ತೊಂದು ಬೃಹತ್ ಸಂಸ್ಕಂತಿ ರಕ್ಷಣೆಯ ಸಂಘರ್ಷಕ್ಕೆ ಸಾಕ್ಷಿಯಾಗುವ ಅನುಮಾನ ಎದ್ದಿದೆ. ಅಂದು ಪಬ್ ಮತ್ತು ಹೋಂ ಸ್ಟೇಗಳಿಗೆ ದಾಳಿ ಮಾಡಿ ಸುದ್ದಿಯಾಗಿದ್ದ ಕರಾವಳಿಯ ಹಿಂದೂ ಸಂಘಟನೆಗಳೂ ಮತ್ತೊಮ್ಮೆ ಕಾನೂನು ಕೈಗೆತ್ತಿಕೊಳ್ಳುವ ಪರೋಕ್ಷ ಸೂಚನೆ ರವಾನಿಸಿದೆ. ಆದ್ರೆ ಭಾರಿ ಧರ್ಮರಕ್ಷಕರ ಕೆಂಗಣ್ಣಿಗೆ ಗುರಿಯಾಗಿರು ವುದು ಹೊಸ ಲೇಡಿಸ್ ಬಾರ್ ಮತ್ತು ಲೈವ್ ಬ್ಯಾಂಡ್ಗಳು.

ಹೌದು.. ಮಂಗಳೂರಿನಲ್ಲಿ ಜಿಲ್ಲಾಡಳಿತ ಹೊಸ ಲೈವ್ ಬ್ಯಾಂಡ್ ಗಳಿಗೆ ಅನುಮತಿ ನೀಡಿದೆ. ಅದರಂತೆ ನಗರದ ಲಾಲ್ ಬಾಗ್ ಬಳಿಯ ಸಾಯಿಬಿನ್ ಕಾಂಪ್ಲೆಕ್ಸ್, ಪಂಪ್ವೆಲ್ ಮತ್ತು ಹಂಪನಕಟ್ಟೆ ಪ್ರದೇಶದಲ್ಲಿ ಮೂರು ಲೇಡಿಸ್ ಬಾರ್ ಗಳಿಗೆ ಅನುಮತಿ ಸಿಕ್ಕಿದ್ದು ಕಾರ್ಯಾಚರಣೆಗೆ ಸಿದ್ದತೆ ನಡೆದಿದೆ. ಆದ್ರೆ ಸುಸಂಸ್ಕತರ ನಾಡದ ಮಂಗಳೂರಿನಲ್ಲಿ ಇಂತಹ ಅನೈತಿಕ ಅಡ್ಡೆಗಳಿಗೆ ಅನುಮತಿ ನೀಡಿರುವುದು ಸರಿಯಲ್ಲ ಎನ್ನುವುದು ಹಿಂದೂ ಪರ ಸಂಘಟನೆಗಳ ವಾದ. ಹೀಗಾಗಿ ಕಾನೂನು ಮೀರಿ ಕಾರ್ಯಾಚರಿಸುವ ಈ ಮೂರು ಲೈವ್ ಬ್ಯಾಂಡ್ ಗಳ ಅನುಮತಿ ರದ್ದು ಪಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಅಗ್ರಹಿಸಿದೆ. ಒಂದು ವೇಳೆ ಅನುಮತಿ ರದ್ದುಪಡಿಸದೇ ಇದ್ದಲ್ಲಿ ಪಬ್ ದಾಳಿಯಂತಹ ಘಟನೆಗಳು ಮತ್ತೆ ಮರುಕಳಿಸುವ ಸಾಧ್ಯತೆ ಇದೆ ಎಂದು ಪರೋಕ್ಷ ಎಚ್ಚರಿಕೆ ನೀಡಿದೆ.

ಇನ್ನು ಈ ಲೇಡಿಸ್ ಬಾರ್ ಗಳಿಗೆ ಕಾನೂನಿನ ಮಾನ್ಯತೆ ಕೂಡ ಇದ್ದು, ಕೋರ್ಟ್ ಆದೇಶದಂತೆ ಇವುಗಳಿಗೆ ಜಿಲ್ಲಾಡಳಿತ ಅನುಮತಿ ನೀಡುತ್ತೆ. ಅದರಂತೆ ಪೊಲೀಸ್ ಇಲಾಖೆ ಕೂಡ ಆಯಾ ಕಾನೂನುಗಳಡಿಯಲ್ಲಿ ಅವಕಾಶ ಕಲ್ಪಿಸಿದೆ. ಆದ್ರೆ ಕಾನೂನಿನ ಪ್ರಕಾರ ರಾತ್ರಿ 10ಗಂಟೆಯ ವರೆಗೆ ಮಾತ್ರ ಮಹಿಳೆಯರು ಈ ಬಾರ್ ಗಳಲ್ಲಿ ಸೇವೆ ಸಲ್ಲಿಸಬಹುದು. ಅಲ್ಲದೇ ಹಾಡುಗಾರಿಕೆಯಂತಹ ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸಬಹುದು. ಆದ್ರೆ ಹಿಂದೂ ಪರ ಸಂಘಟನೆಗಳು ಮಾತ್ರ ಇಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದೆ.

ಅದರಲ್ಲೂ ಅನೈತಿಕ ಚಟುವಟಿಕೆಗಳು ಯುವತಿಯರ ಮುಖಾಂತರ ಹಾಡು, ನೃತ್ಯ ಆಯೋಜಿಸಿ ತಡ ರಾತ್ರಿ ವೇಶ್ಯಾವಾಟಿಕೆ ನಡೆಸುವ ಆರೋಪವು ಕೇಳಿ ಬಂದಿದೆ. ಇನ್ನು ಈಗಾಗಲೇ ಹಲವು ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿಗಳ ಪೋಷಕರು ಪೊಲೀಸ್ ಇಲಾಖೆಗೆ ಈ ಬಗ್ಗೆ ದೂರು ಕೂಡ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರ್ಗಳ ಅನುಮತಿ ರದ್ದುಪಡಿಸಬೇಕು ಎಂಬುವುದು ಹಿಂದೂ ಪರ ಸಂಘಟನೆಗಳ ಆಗ್ರಹ.

ಈ ಬಗ್ಗೆ ಡಿಸಿ, ಸಸಿಕಾಂತ್ ಸೆಂಥಿಲ್‌, ಪ್ರತಿಕ್ರಿಯಿಸಿದ್ದು, ಕಾನೂನು ಬದ್ಧವಾಗಿ ನಡೆಯುವ ಬಾರ್ ಗಳಿಗೆ ಅನುಮತಿ ನೀಡಲಾಗುತ್ತೆ. ಇನ್ನು ಪೊಲೀಸ್ ಇಲಾಖೆ ಮತ್ತು ಆಯಾ ಸ್ಥಳಿಯಾಡಳಿತಗಳು ಈ ಬಗ್ಗೆ ನಿರ್ಧಾರ ತೆಗೆದುಕೊಂಡಿರುತ್ತದೆ. ಅದನ್ನು ಮೀರಿ ಕಾನೂನು ಉಲ್ಲಂಘಿಸಿ ಲೇಡಿಸ್ ಬಾರ್‌ಗಳು ಕಾರ್ಯಾಚರಣೆ ನಡೆಸಿದ್ದಲ್ಲಿ ದಾಳಿ ನಡೆಸಲಾಗುವುದು. ಇದರ ಹೊರತಾಗಿ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದಾರೆ.

ಒಟ್ಟಾರೆ ಹಲವು ದಾಳಿಗಳನ್ನು ಕಂಡಿರುವ ಮಂಗಳೂರು ಮತ್ತೊಂದು ದಾಳಿಗೆ ಸಾಕ್ಷಿಯಾಗುತ್ತಾ ಎಂಬ ಸಂಶಯ ಎದ್ದಿದೆ. ಸದ್ಯ ಕಾನೂನಿನಡಿಯಲ್ಲೇ ಬೃಹತ್ ಹೋರಾಟ ನಡೆಸುತ್ತೇವೆ ಎನ್ನುತ್ತಿರುವ ಹಿಂದೂ ಸಂಘಟನೆಗಳು ಮತ್ತೆ ಪಬ್ ದಾಳಿಗಳನ್ನು ನೆನಪಿಸಿ ಜಿಲ್ಲಾಡಳಿತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ. ಏನೇ ಆದರೂ ಕಾನೂನಡಿಯಲ್ಲಿ ಎಲ್ಲರೂ ನಡೆದರೆ ಮಂಗಳೂರಿನಂತ ಬುದ್ದಿವಂತರ ಜಿಲ್ಲೆಗೆ ಅದೂ ಶೋಭೆಯೇ ಸರಿ. ಹಾಗೊಂದು ವೇಳೆ ಕಾನೂನು ಕೈ ಮೀರಿದರೆ ಮತ್ತೆ ಮಂಗಳೂರು ಅಪಖ್ಯಾತಿಗೆ ಈಡಾಗುವುದರಲ್ಲಿ ಸಂದೇಹವೇ ಇಲ್ಲ.

ವರದಿ : ಪ್ರಜ್ವಲ್ ಅಮಿನ್, Tv5 ಮಂಗಳೂರು

Next Story

RELATED STORIES