ಬೈಕ್ ಮಾರಾಟ ಮಾಡುವಾಗ ಹುಷಾರ್..!

[story-lines]

ವ್ಯಕ್ತಿಯೋರ್ವ ಬೈಕ್ ಕಳ್ಳತನ ಮಾಡಲು,ಸುಮಾರು 10 ಲಕ್ಷ ರೂಪಾಯಿಯ ಹಾರ್ಲಿ ಡೆವಿಡ್‌ಸನ್ ಬೈಕ್‌ವೊಂದನ್ನ ಬುಕ್ ಮಾಡಿ, ನಂತರ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಅದನ್ನ ಕಳ್ಳತನ ಮಾಡಿದ್ದಾನೆ.
ಆನ್‌ಲೈನ್‌ನಲ್ಲಿ ತನ್ನ ಬೈಕ್ ಮಾರಾಟಕ್ಕಿರುವುದಾಗಿ ಅಜಯ್ ಸಿಂಗ್ ಎಂಬಾತ ಜಾಹೀರಾತು ಪ್ರಕಟಿಸಿದ್ದ. ಮರುದಿನ ಆ ಬೈಕ್ ಕೊಂಡುಕೊಳ್ಳಲು ರಾಹುಲ್ ಎಂಬಾತ ಅಜಯ್‌ಗೆ ಮೆಸೇಜ್ ಮಾಡಿದ್ದಾನೆ. ಇಬ್ಬರೂ ವಾಟ್ಸಪ್‌ನಲ್ಲಿ ಚಾಟಿಂಗ್ ಮಾಡಿ,ಬೈಕ್ ಮಾರುವ ಮತ್ತು ಕೊಂಡುಕೊಳ್ಳುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

ತದನಂತರ ಗುರುಗ್ರಾಮ್ ಎಂಬಲ್ಲಿ ಇಬ್ಬರು ಭೇಟಿ ಮಾಡಿದ್ದು, ರಾಹುಲ್ ತಾನು ಆಗ್ರಾದಿಂದ ಬಂದಿರುವ ಮಾರ್ಬಲ್ಸ್ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೇ ತಾನು ಮಾರ್ಬಲ್ ಕಲ್ಲುಗಳನ್ನು ಕೆನಡಾಗೆ ಎಕ್ಸಪೋರ್ಟ್ ಮಾಡುತ್ತೇನೆಂದು ಹೇಳಿದ್ದಾನೆ.ಅಲ್ಲದೇ ಆಂಗ್ಲ ಭಾಷೆಯಲ್ಲಿ ಸರಾಗವಾಗಿ ಮಾತನಾಡಿದ ರಾಹುಲ್, ತನಗೆ ಬೈಕ್ ಬಗ್ಗೆ ಸಂಪೂರ್ಣ ನಾಲೆಜ್ ಇರುವಂತೆ ನಡೆದುಕೊಂಡಿದ್ದಾನೆ.

ಅಲ್ಲದೇ 7ಲಕ್ಷ ರೂಪಾಯಿ ಹಣ ನೀಡಿ, ಬೈಕ್ ಕೊಂಡುಕೊಳ್ಳುವ ಭರವಸೆ ನೀಡಿದ ರಾಹುಲ್, ಬೈಕ್ ಕೊಳ್ಳುವ ಮುಂಚೆ ಟೆಸ್ಟ್ ಡ್ರೈವ್ ಮಾಡಲು ಅವಕಾಶ ಕೇಳಿ ಏಳು ಸಾವಿರ ರೂಪಾಯಿ ನೀಡಿದ್ದಾನೆ. ರಾಹುಲ್ ಮಾತಿನ ಮೋಡಿಗೆ ಒಳಗಾದ ಅಜಯ್ ಆತನಿಗೆ ಹತ್ತು ಲಕ್ಷ ಬೆಲೆ ಬಾಳುವ ಹಾರ್ಲಿ ಡೆವಿಡ್‌ಸನ್ ಬೈಕ್‌ನ್ನು ಟೆಸ್ಟ್ ಡ್ರೈವ್‌ಗೆ ಕೊಟ್ಟಿದ್ದಾನೆ.

ಟೆಸ್ಟ್ ಡ್ರೈವ್‌ಗೆ ಹೋಗಿ ಸ್ವಲ್ಪ ಸಮಯದ ನಂತರ ರಾಹುಲ್ ಮರಳಿ ಬರದಿದ್ದಾಗ, ಆತನ ಮೊಬೈಲ್‌ಗೆ ಅಜಯ್ ಕಾಲ್ ಮಾಡಿದ್ದಾನೆ.ಆದರೆ ಎಷ್ಟೇ ಕರೆ ಮಾಡಿದರೂ ರಾಹುಲ್ ರಿಸೀವ್ ಮಾಡಿಲ್ಲ. ಮತ್ತು ಸ್ವಲ್ಪ ಸಮಯದ ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಇನ್ನು ಈ ಬಗ್ಗೆ ಅಜಯ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.