Top

ಗೋಲ್ಡನ್ ಸ್ಟಾರ್ ಜನ್ಮದಿನಕ್ಕೆ ವಿಶೇಷ ತಯಾರಿ.. ಹೇಗಿದೆ ಗೊತ್ತಾ?

ಗೋಲ್ಡನ್ ಸ್ಟಾರ್ ಜನ್ಮದಿನಕ್ಕೆ ವಿಶೇಷ ತಯಾರಿ.. ಹೇಗಿದೆ ಗೊತ್ತಾ?
X

ಬಾರಿ ಗಣಿ, ಬಹಳ ವಿಭಿನ್ನವಾಗಿ ಮತ್ತು ಅಷ್ಟೆ ಅರ್ಥಪೂರ್ಣವಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡೋಕೆ ತಯಾರಿ ನಡೆಸಿದ್ದಾರೆ.. ಹಬ್ಬ ಅದ್ಮೇಲೆ ಗಿಫ್ಟ್ ಇಲ್ದೇ ಇರುತ್ತಾ..? ಗೋಲ್ಡನ್ ಸ್ಟಾರ್​ ಬರ್ತ್​ಡೇ ಸ್ಪೆಷಲ್ಲಾಗಿ ಗೋಲ್ಡನ್ ಫ್ಯಾನ್ಸ್​ಗೆ ಏನೆಲ್ಲಾ ಗಿಫ್ಟ್ ಸಿಗುತ್ತೆ ಗೊತ್ತಾ?

ನಮಸ್ಕಾರ ನಮಸ್ಕಾರ ನಮಸ್ಕಾರ ಕಿರುತೆರೆಯಲ್ಲಿ ಸಕ್ಸಸ್​ ಕಂಡು, ಮುಂದೆ ಸ್ಯಾಂಡಲ್​ವುಡ್​ನಲ್ಲಿ ಗೋಲ್ಡನ್​ ಸ್ಟಾರ್ ಪಟ್ಟಕ್ಕೇರಿದ ನಟ ಗಣೇಶ್.. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಕೊನೆಗೆ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಸದ್ಯ ಸೂಪರ್ ಸ್ಟಾರ್ ಆಗಿ ನಮ್ಮ ಕಣ್ಮುಂದೆ ನಿಂತಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರೋ ಇದೇ ಜುಲೈ 2ರಂದು ಹುಟ್ಟಹಬ್ಬ ಆಚರಿಸಿಕೊಳ್ತಿದ್ದಾರೆ. ಇದೇ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಉಡುಗೊರೆ ಕಾದಿದೆ.

ಹೌದು, ಅಭಿಮಾನಿಗಳ ಪಾಲಿಗೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಅಕ್ಷರಶಃ ಗಣೇಶೋತ್ಸವ.. ಈ ಬಾರಿಯ ಗಣೇಶೋತ್ಸವಕ್ಕೆ ಫ್ಯಾನ್ಸ್ ಭರ್ಜರಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ನಟ ಗಣೇಶ್ ಸಹ ಬಹಳ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ.. ಅದ್ರ ಜೊತೆ ಅವರ ಮುಂದಿನ ಸಿನಿಮಾಗಳ ಟೀಸರ್ ಮತ್ತು ಫಸ್ಟ್ ಲುಕ್ ಪೋಸ್ಟರ್​ಗಳ ಝಲಕ್ ಕಾದಿದೆ.

ಗಣೇಶ್ ಮತ್ತು ಶಿಲ್ಪಾ ಗಣೇಶ್ ದಂಪತಿ, ಅಭಿಮಾನಿಗಳ ಜೊತೆ ಸೇರಿ ಗೋಲ್ಡನ್ ಫೌಂಡೇಶನ್ ಮೂಲಕ ಹಲವು ಸಮಾಜಮುಖಿ ಕೆಲಸಗಳನ್ನ ಮಾಡ್ತಾ ಬರ್ತಿದ್ದಾರೆ. ಈ ಬಾರಿ ಗಣೇಶ್ ಹುಟ್ಟುಹಬ್ಬದ ವಿಶೇಷವಾಗಿ ಗೋಲ್ಡನ್ ಫೌಂಡೇಶನ್ ಮೂಲಕ ಅನಾಥಾಶ್ರಮದ ಒಂದಷ್ಟು ಮಕ್ಕಳಿಗೆ ಊಟ ಮತ್ತು ಬಟ್ಟೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ. ಇದರ ಜೊತೆ ಗೋಲ್ಡನ್ ಫ್ಯಾನ್ಸ್ ಮತ್ತಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ಧಾರೆ.

ಯೆಸ್.. ಚಮಕ್ ಸಕ್ಸಸ್ ಅಲೆಯಲ್ಲೇ ಗೋಲ್ಡನ್​​ ಸ್ಟಾರ್ ಗಣೇಶ್ ಆರೆಂಜ್ ಸಿನಿಮಾದಲ್ಲಿ ನಟಿಸ್ತಿದ್ದಾರೆ..ಜೂಮ್ ನಂತ್ರ ಗಣಿ ಪ್ರಶಾಂತ್ ರಾಜ್​ ಕಾಂಬಿನೇಷನ್​ನಲ್ಲಿ ಬರ್ತಿರೋ ಸಿನಿಮಾ ಇದು.. ಈಗಾಗಲೇ ಚಿತ್ರದ ಟಾಕಿ ಪೋರ್ಷನ್ ಕಂಪ್ಲೀಟ್ ಆಗಿದ್ದು, ಬರ್ತ್​ಡೇ ನಂತ್ರ ಆರೆಂಜ್ ಸಾಂಗ್ ಶೂಟ್​ಗಾಗಿ ಚಿತ್ರತಂಡ ಲಂಡನ್​ಗೆ ಪಯಣ ಬೆಳೆಸಲಿದೆ.. ಗಣಿ ಬರ್ತ್​ಡೇ ಸ್ಪೆಷಲ್ಲಾಗಿ ಈ ಚಿತ್ರದ ಟೀಸರ್ ರಿಲೀಸ್​ ಆಗಲಿದೆ.

ಆರೆಂಜ್ ಸಿನಿಮಾ ಟೀಸರ್ ಜೊತೆಗೆ ವಿಜಯ್ ನಾಗೇಂದ್ರ, ಗಣೇಶ್ ಕಾಂಬಿನೇಷನ್ ಸಿನಿಮಾ ಫಸ್ಟ್ ಲುಕ್ ರಿವೀಲ್ ಆಗಲಿದೆ.. ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ, ರಾಜಕುಮಾರ ಖ್ಯಾತಿಯ ಸಂತೋಷ್ ಆನಂದ್​ರಾಮ್, ಶಿಷ್ಯ ನಾಗೇಂದ್ರ ಆಕ್ಷನ್ ಕಟ್ ಹೇಳ್ತಿರೋ ಚಿತ್ರದ ಇದು..ಕೆಲ ದಿನಗಳ ಹಿಂದೆಯೇ ಈ ಚಿತ್ರ ಕನ್ಫರ್ಮ್ ಆಗಿತ್ತು.

ಮುಗುಳು ನಗೆ ಖ್ಯಾತಿಯ ಎಸ್​.ಎಸ್​ ಫಿಲ್ಸ್ಮ್​ ಸಯ್ಯದ್ ಸಲಾಂ ಜೊತೆ ಸೇರಿ ಸ್ವತ: ಗಣೇಶ್, ಗೋಲ್ಡನ್​ ಮೂವಿಸ್​​ ಬ್ಯಾನರ್​​​ ಅಡಿಯಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದಾರೆ.. ಗಣೇಶ್​ಗೆ ಸೂಟ್ ಆಗುವಂತೆ ಕಥೆಯನ್ನ ವಿಜಯ್ ನಾಗೇಂದ್ರ ಸಿದ್ಧಪಡಿಸಿಕೊಂಡಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿಕೊಡಲಿದ್ದಾರೆ.

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಖ್ಯಾತಿಯ ನಾಗಣ್ಣ ಮತ್ತು ಗಣೇಶ್ ಕಾಂಬಿನೇಷನ್​ನಲ್ಲಿ ಒಂದು ಹಾರರ್ ಸಿನಿಮಾ ಬರೋ ಸುದ್ದಿ ಬಹಳ ದಿನಗಳಿಂದ ಕೇಳಿ ಬರ್ತಿದೆ. ಗೋಲ್ಡನ್​ ಸ್ಟಾರ್ ಬರ್ತ್​ಡೇ ಸಂಭ್ರಮದಲ್ಲಿ ಆ ಚಿತ್ರ ಅನೌನ್ಸ್ ಮಾಡಲಿದ್ದು, ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿಗೆ ಗಣೇಶ್, ಹಾರರ್ ಜಾನರ್ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ಮುಂಗಾರು ಮಳೆ ಸಿನಿಮಾ ಸಮಯದಿಂದಲೂ ಪ್ರೀತಂ ಗುಬ್ಬಿ, ಗಣೇಶ್​ಗೆ ಪರಿಚಿತ.. ಮುಂಗಾರು ಮಳೆ ಚಿತ್ರಕ್ಕೆ ಬರಹಗಾರರಾಗಿ ಕೆಲಸ ಮಾಡಿದ್ದ ಪ್ರೀತಂ ಮುಂದೆ, ಗಣೇಶ್ ಅಭಿನಯದ ಮಳೆಯಲಿ ಜೊತೆಯಲಿ ಮತ್ತು ದಿಲ್ ರಂಗೀಲಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ರು.. ಇದೀಗ ಗೋಲ್ಡನ್​​ ಸ್ಟಾರ್​ಗೋಸ್ಕರ ಪ್ರೀತಂ ಮತ್ತೊಂದು ಕಥೆ ಸಿದ್ಧಪಡಿಸಿದ್ದು, ಗಣಿ ಹುಟ್ಟುಹಬ್ಬದ ದಿನ ಆ ಸಿನಿಮಾ ಅನೌನ್ಸ್ ಆಗಲಿದೆ.. ಅಂದೇ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆದ್ರೂ ಅಚ್ಚರಿ ಪಡ್ಬೇಕ್ಕಾಗಿಲ್ಲ.

ಭರ್ಜರಿ ಸಪ್ರೈಸ್​ ಜೊತೆಗೆ ಈ ಬಾರಿಯ ಗೋಲ್ಡನ್ ಸ್ಟಾರ್ ಗೋಲ್ಡನ್​ ಬರ್ತ್​​ಡೇ ಕಳೆಕಟ್ಟಲಿದೆ.. ಅರ್ಥಪೂರ್ಣ ಕಾರ್ಯಕ್ರಮಗಳು ಮತ್ತು ಭರ್ಜರಿ ಗಿಫ್ಟ್​ಗಳ ಮೂಲಕ ಜುಲೈ 2ರಂದು ಸ್ಯಾಂಡಲ್​ವುಡ್​ ಗಣೇಶೋತ್ಸವ ದೊಡ್ಡದಾಗಿ ಸದ್ದು ಮಾಡೋ ಸೂಚನೆ ಸಿಕ್ಕಿದೆ.

Next Story

RELATED STORIES