Top

ಬೆಲ್ಜಿಯಂ ಆಟಕ್ಕೆ ಪನಾಮ ಸುಸ್ತು- ಟ್ಯುನಿಷಿಯಾ ವಿರುದ್ಧ ಗೆದ್ದ ಇಂಗ್ಲೆಂಡ್​​

ಬೆಲ್ಜಿಯಂ ಆಟಕ್ಕೆ ಪನಾಮ ಸುಸ್ತು- ಟ್ಯುನಿಷಿಯಾ ವಿರುದ್ಧ ಗೆದ್ದ ಇಂಗ್ಲೆಂಡ್​​
X

ಫಿಫಾ ವಿಶ್ವಕಪ್​ ನಲ್ಲಿ ಇಂಗ್ಲೆಂಡ್ ಹಾಗೂ ಬೆಲ್ಜಿಯಂ ತಂಡಗಳು ತಮ್ಮ ತಮ್ಮ ಪಂದ್ಯಗಳನ್ನು ಗೆಲ್ಲುವ ಮೂಲಕ ಪೂರ್ಣ ಮೂರು ಅಂಕಗಳನ್ನು ಸಂಪಾದಿಸಿವೆ. ಜಿ ಗುಂಪಿನ ಪಂದ್ಯದಲ್ಲಿ ಪನಾಮಾ ವಿರುದ್ಧ ಬೆಲ್ಜಿಯಂ 3-0 ಅಂತರದ ಭರ್ಜರಿ ಗೆಲುವು ದಾಖಲಿಸಿದ್ರೆ. ಅತ್ತ ಟ್ಯೂನೇಶಿಯಾ ವಿರುದ್ಧ ಇಂಗ್ಲೆಂಡ್ 2-1 ಗೋಲುಗಳ ಅಂತರದ ಅಧಿಕಾರಯುತ ಜಯ ಸಾಧಿಸಿದೆ.

ಮೊದಲ ವಿಶ್ವಕಪ್​​ನಲ್ಲಿ ಎಡವಿದ ಪನಾಮಾ..!

ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಪನಾಮಾ ಭಾಗವಹಿಸುತ್ತಿದೆ. ಆದ್ರೆ ಪ್ರಬಲ ಎದುರಾಳಿ ಬೆಲ್ಜಿಯಂ ವಿರುದ್ಧ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಬೆಲ್ಜಿಯಂ ಪರ ಡ್ರೈಸ್ ಮೆರ್ಟನ್ಸ್ 47ನೇ ನಿಮಿಷ ಹಾಗೂ ರೊಮೆಲು ಲುಕಾಕು ಪಂದ್ಯದ 69 ಹಾಗೂ 75ನೇ ನಿಮಿಷದಲ್ಲಿ ವಿಜಯದ ಗೋಲುಗಳನ್ನು ದಾಖಲಿಸಿದ್ರೆ. ಪನಾಮಾ ಮಾತ್ರ ಗೋಲುಗಳಿಸುವುದಿರಲಿ ಒತ್ತಡವನ್ನ ನಿಭಾಯಿಸುವಲ್ಲಿಯೂ ಕೂಡಾ ಎಡವಿದೆ..

ರೋಚಕತೆಗೆ ಸಾಕ್ಷಿಯಾದ ಇಂಗ್ಲೆಂಡ್​​ ಟ್ಯೂನೇಶಿಯಾ ಪಂದ್ಯ..!

ಹೌದು..ಜಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟ್ಯೂನೇಶಿಯಾ ನಿಕಟ ಪೈಪೋಟಿ ನೀಡಿದರೂ ಪಂದ್ಯ ಕೊನೆಗೊಳ್ಳಲು ಕೆಲವೇ ಕ್ಷಣಗಳು ಮಾತ್ರ ಬಾಕಿ ಉಳಿದಿರುವಾಗ ಹ್ಯಾರಿ ಕೇನ್ ದಾಖಲಿಸಿದ ಇಂಜುರಿ ಟೈಮ್​​ ಗೋಲುನಿಂದ ಇಂಗ್ಲೆಂಡ್ 2-1 ಗೋಲುಗಳ ಅಂತರದ ರೋಚಕ ಗೆಲುವು ದಾಖಲಿಸಿತು. ಮೊದಲಿಗೆ ಸಮಬಲ ಸಾಧಿಸಿದ್ದ ಎರಡು ತಂಡಗಳು ಎರಡನೇ ಗೋಲು ದಾಖಲಿಸಲು ಸತತ ಪೈಪೋಟಿ ನಡೆಸಿದವು.

ರೋಚಕ ಜಯ ಸಾಧಿಸಿದ ಸ್ವೀಡನ್​​​..!

ಪಂದ್ಯದ ಮುಖ್ಯ ರೆಫ್ರಿ ಜೋಯೆಲ್ ಅಗ್ಯುಲರ್, ವಿಡಿಯೋ ಅಸಿಸ್ಟೆಂಟ್ ರೆಫ್ರಿ ಸಹಾಯದಿಂದ 2ನೇ ಅವಧಿಯಲ್ಲಿ ನೀಡಿದ ಪೆನಾಲ್ಟಿ ತೀರ್ಪು ಸ್ವೀಡನ್ ತಂಡದ ಜಯದ ಸಂಭ್ರಮಕ್ಕೆ ಕಾರಣವಾಯಿತು. ನಾಯಕ ಆಂಡ್ರೆಸ್ ಗ್ರಾನ್​ಕ್ವೆಸ್ಟ್ ಬಾರಿಸಿದ ಪೆನಾಲ್ಟಿ ಸ್ಪಾಟ್ ಗೋಲಿನ ಮೂಲಕ ಸ್ವೀಡನ್ ತಂಡ ಏಷ್ಯನ್ ಪವರ್​ಹೌಸ್ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿತು. ಕಳೆದ 60 ವರ್ಷಗಳಲ್ಲಿ ಸ್ವೀಡನ್ ತಂಡ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯವನ್ನು ಗೆದ್ದಿರುವುದು ಇದೇ ಮೊದಲ ಬಾರಿ.

ಪವನ್​ ಕೆ ಲಕ್ಷ್ಮೀಕಾಂತ್​​ ಟಿವಿ5 ಬೆಂಗಳೂರು

Next Story

RELATED STORIES