Top

ಕಾಜಲ್ ಬರ್ತ್​​ಡೇಗೆ ರಮೇಶ್ ಅರವಿಂದ್ ಬೊಂಬಾಟ್ ಗಿಫ್ಟ್..!

ಕಾಜಲ್ ಬರ್ತ್​​ಡೇಗೆ ರಮೇಶ್ ಅರವಿಂದ್ ಬೊಂಬಾಟ್ ಗಿಫ್ಟ್..!
X

ಸೌತ್​ ಸಿನಿದುನಿಯಾದ ಟಾಪ್ ಹೀರೋಯಿನ್ ಕಾಜಲ್ ಅಗರ್​ವಾಲ್​ಗೆ ಇಂದು(ಜೂನ್ 19) ಹುಟ್ಟುಹಬ್ಬದ ಸಂಭ್ರಮ. ಮುಂಬೈನಲ್ಲಿ ಹುಟ್ಟಿಬೆಳೆದ ಈ ಪಂಜಾಬಿ ಪೋರಿ ಸದ್ಯ ಟಾಲಿವುಡ್, ಕಾಲಿವುಡ್​ನ ಮೋಸ್ಟ್ ಡಿಮ್ಯಾಂಡಿಂಗ್ ಹೀರೋಯಿನ್ ಆಗಿ ಮಿಂಚ್ತಿದ್ದಾರೆ. ಬಾಲಿವುಡ್ ಕ್ವೀನ್ ತಮಿಳು ರೀಮೇಕ್​ನಲ್ಲಿ ಕಾಜಲ್ ಬಣ್ಣ ಹಚ್ಚಿದ್ದಾರೆ. ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗ್ತಿದೆ.

ಕನ್ನಡ ಮತ್ತು ತಮಿಳು ಕ್ವೀನ್​ ರೀಮೇಕ್​ಗೆ ನಟ-ನಿರ್ದೇಶಕ ರಮೇಶ್ ಅರವಿಂದ್ ಆ್ಯಕ್ಷನ್ ಕಟ್ ಹೇಳ್ತಿರೋದು ವಿಶೇಷ. ಕನ್ನಡದಲ್ಲಿ ಬಟರ್​ಫ್ಲೈ ಮತ್ತು ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್ ಹೆಸರಿ​​ನಲ್ಲಿ ಈ ಚಿತ್ರ ನಿರ್ಮಾಣವಾಗ್ತಿದೆ. ಕಾಜಲ್ ಬರ್ತ್​ಡೇ ಸ್ಪೆಷಲ್ಲಾಗಿ ಪ್ಯಾರಿಸ್ ಪ್ಯಾರಿಸ್ ಸಿನಿಮಾ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿದ್ದಾರೆ. ಕ್ವೀನ್ ಸಿನಿಮಾದಲ್ಲಿ ಕಂಗನಾ ಮಾಡಿದ್ದ ಪಾತ್ರವನ್ನ ತಮಿಳಿನಲ್ಲಿ ಕಾಜಲ್ ನಿಭಾಯಿಸ್ತಿದ್ದು, ದೇಶ ವಿದೇಶದಲ್ಲಿ ಶೂಟ್ ಮಾಡಿರೋ ದೃಶ್ಯಗಳನ್ನ ಈ ವೀಡಿಯೋದಲ್ಲಿ ನೋಡ್ಬೋದು. ಕನ್ನಡದ ಖ್ಯಾತ ಕ್ಯಾಮರಾಮೆನ್ ಸತ್ಯ ಹೆಗಡೆ ಈ ಚಿತ್ರವನ್ನ ಸೆರೆ ಹಿಡಿತ್ತಿರೋದು ವಿಶೇಷ.

Next Story

RELATED STORIES