Top

ಪ್ರಾಜೆಕ್ಟ್ ಮಾಡಿಲ್ಲವೆಂದು ಹೀಗಾ ಮಾಡುವುದು..?

ಪ್ರಾಜೆಕ್ಟ್ ಮಾಡಿಲ್ಲವೆಂದು ಹೀಗಾ ಮಾಡುವುದು..?
X

ರಾಮನಗರ: ಪ್ರಾಜೆಕ್ಟ್ ವರ್ಕ್ ಮಾಡಲಿಲ್ಲವೆಂದು ಸಹಾಯಕ ಪ್ರಾಧ್ಯಾಪಕ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದಾನೆ. ರಾಮನಗರ ಜಿಲ್ಲೆ ಮಾಗಡಿ ಪಟ್ಟಣದಲ್ಲಿರುವ ಐಟಿಐ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಐಟಿಐ ಕಾಲೇಜು ವಿದ್ಯಾರ್ಥಿ ಸಿದ್ದರಾಜುಗೆ ಮಹಮದ್ ಆಸೀಫ್‌ ಎಂಬ ಸಹಾಯಕ ಪ್ರಾಧ್ಯಾಪಕ ಕಪಾಳ ಮೋಕ್ಷ ಮಾಡಿದ್ದಾನೆ.

ಕಪಾಳ ಮೋಕ್ಷ ಮಾಡಿದಾಗ, ಯುವಕ ಕೆನ್ನೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕವಿ ತಮಟೆ ಹೋಗಿದೆ. ಸಿದ್ದರಾಜುವಿಗೆ ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಲು ಯುವಕನ ಪೊಷಕರು ಮುಂದಾಗಿದ್ದಾರೆ.

Next Story

RELATED STORIES