ಧರಣಿ ಹಿಂಪಡೆದ ಕೇಜ್ರಿವಾಲ್​: ಸುಸ್ಥಿತಿಗೆ ಮರಳುವುದೇ ದೆಹಲಿ?

ಲೆಫ್ಟಿನೆಂಟ್ ಗವರ್ನರ್​, ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳ ನಡುವೆ ಹಲವಾರು ಸುತ್ತಿನ ಮಾತುಕತೆ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಳೆದ 9 ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಕೊನೆಗೂ ಹಿಂದೆ ಪಡೆದಿದ್ದಾರೆ.

ಕಳೆದ 9 ದಿನಗಳಿಂದ ರಾಷ್ಟ್ರ ರಾಜಧಾನಿ ರಾಜಕೀಯ ಹೈಡ್ರಾಮಾಗೆ ಕಾರಣವಾಗಿತ್ತು. ಸಿಎಂ ಕೇಜ್ರಿವಾಲ್ ರಾಜ್ಯಪಾಲದ ನಿವಾಸದಲ್ಲಿ ಧರಣಿ ನಡೆಸಿದರೆ, ಬಿಜೆಪಿ ಶಾಸಕ ಕಪಿಲ್ ಮಿಶ್ರಾ ಸಿಎಂ ಕಚೇರಿಯಲ್ಲಿ ಧರಣಿ ಕುಳಿತಿದ್ದರು. ಐಪಿಎಸ್ ಅಧಿಕಾರಿಗಳು ಸರಕಾರದ ನಿಲುವು ಖಂಡಿಸಿ ಪರೋಕ್ಷವಾಗಿ ಅಸಹಕಾರ ಪ್ರತಿಭಟನೆ ನಡೆಸಿದ್ದರು.

ಐಎಎಸ್ ಅಧಿಕಾರಿಗಳು ಸಚಿವರು ಕರೆಯುವ ಸಭೆಗಳಿಗೆ ಹಾಜರಾಗಲು ಒಪ್ಪಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಧರಣಿ ಹಿಂಪಡೆದರು. ಇದರ ಬೆನ್ನಲ್ಲೇ ಬಿಜೆಪಿ ಕೂಡ ತನ್ನ ಪ್ರತಿಭಟನೆ ವಾಪಸ್ ಪಡೆಯಿತು.

ಸಭೆಯ ನಂತರ ಮಾತನಾಡಿದ ಕೇಜ್ರಿವಾಲ್, ನಾವು ಯಾವುದೇ ಅಧಿಕಾರಿಯ ವಿರುದ್ಧ ಇಲ್ಲ. ಶೇ.99ರಷ್ಟು ಅಧಿಕಾರಿಗಳು ಒಳ್ಳೆಯವರು. ನಾವು ಉತ್ತಮ ಆಡಳಿತ ನೀಡುವುದಷ್ಟೇ ಆದ್ಯತೆ ನೀಡುತ್ತಿದ್ದೇವೆ. ನಾವು ಕೇಂದ್ರದ ಮಧ್ಯಪ್ರವೇಶವನ್ನಷ್ಟೇ ವಿರೋಧಿಸಿದ್ದೇವೆ.

Recommended For You

Leave a Reply

Your email address will not be published. Required fields are marked *