ಭಾರತ ಟಿ-20 ಸರಣಿಯಿಂದ ಹೊರಬಿದ್ದ ಬೆನ್ಸ್ಟೋಕ್ಸ್

X
TV5 Kannada19 Jun 2018 1:06 PM GMT
ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಗಾಯದ ಕಾರಣ ಭಾರತ ವಿರುದ್ಧದ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ಆದರೆ ಸರಣಿಯುದ್ದಕ್ಕೂ ತಂಡದ ಜೊತೆ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.
[story-lines]
ಜುಲೈ 3ರಂದು ಓಲ್ಡ್ ಟ್ರಫೋರ್ಡ್ನಲ್ಲಿ ನಡೆಯಲಿರುವ ಪಂದ್ಯದ ಮೂಲಕ ಸರಣಿ ಆರಂಭಗೊಳ್ಳಲಿದೆ. ಎಡಗೈ ಸ್ನಾಯು ಸೆಳೆತದಿಂದ ಬೆನ್ ಸ್ಟೋಕ್ಸ್ ಅವರನ್ನು ಮಂಗಳವಾರ ಪ್ರಕಟಿಸಿದ 14 ಸದಸ್ಯರ ತಂಡದಿಂದ ಕೈಬಿಡಲಾಗಿದೆ. ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಸ್ಟೋಕ್ಸ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು.
ಕುರ್ಯಾನ್ ಸೋದರರಾದ ಟಾಮ್ ಮತ್ತು ಸ್ಯಾಮ್ ಸ್ಥಾನ ಪಡದಿದ್ದಾರೆ. ಅಲ್ಲದೇ ಬೌಲರ್ ಜಾಕ್ ಬಾಲ್, ಬ್ಯಾಟ್ಸ್ಮನ್ ಜಾನಿ ಬೇರ್ ಸ್ಟೋ, ಆಲ್ರೌಂಡರ್ ಮೊಯಿನ್ ಅಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Next Story