ಬ್ರೆಜಿಲ್ ಗೆಲ್ಲಲಿಲ್ಲ, ಸ್ವಿಜರ್ಲೆಂಡ್ ಸೋಲಲಿಲ್ಲ!

X
TV5 Kannada18 Jun 2018 4:42 AM GMT
ದಾಖಲೆಯ 6ನೇ ಬಾರಿಯ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬ್ರೆಜಿಲ್ ತಂಡ ಗೆಲುವಿನ ಶುಭಾರಂಭ ಮಾಡದೇ ಇದ್ದರೂ ಸೋಲಿನ ಆಘಾತದಿಂದ ಪಾರಾಗಿದೆ. ಇದರೊಂದಿಗೆ ಸ್ವಿಜರ್ಲೆಂಡ್ ವಿರುದ್ಧ ಡ್ರಾ ಮಾಡಿಕೊಂಡ ಸಮಾಧಾನದೊಂದಿಗೆ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ನೀರಸ ಆರಂಭ ಪಡೆದಿದೆ.
[story-lines]
ರಷ್ಯಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬ್ರೆಜಿಲ್ ತಂಡ 1-1 ಗೋಲಿನಿಂದ ಸ್ವಿಜರ್ಲೆಂಡ್ ವಿರುದ್ಧ ಡ್ರಾ ಮಾಡಿಕೊಂಡಿತು. ಬ್ರೆಜಿಲ್ ಪರ ಫಿಲಿಪ್ ಕುಟಿನ್ಹೊ (20ನೇ ನಿಮಿಷ) ಮತ್ತು ಸ್ವಿಜರ್ಲೆಂಡ್ ಪರ ಸ್ಟೀವನ್ ಜುಬೆರ್ (50ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು.
Next Story