Top

ಜಾರಿಬಿದ್ದ ಚಾಂಪಿಯನ್ ಜರ್ಮನಿ: ಮೆಕ್ಸಿಕೊಗೆ ಐತಿಹಾಸಿಕ ಜಯ

ಜಾರಿಬಿದ್ದ ಚಾಂಪಿಯನ್ ಜರ್ಮನಿ: ಮೆಕ್ಸಿಕೊಗೆ ಐತಿಹಾಸಿಕ ಜಯ
X

ಇದು 2018ರ ವಿಶ್ವಕಪ್​ ಮೊದಲ ಅತೀ ದೊಡ್ಡ ಆಘಾತ. ಹಾಲಿ ಚಾಂಪಿಯನ್ ಜರ್ಮನಿಗೆ ಸೋಲು. ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿ ವಿರುದ್ಧ ಮೆಕ್ಸಿಕೊಗೆ ಮೊದಲ ಗೆಲುವು. ವಿಶ್ವಕಪ್ ಇತಿಹಾಸದಲ್ಲೇ ಹಾಲಿ ಚಾಂಪಿಯನ್​ ತಂಡವೊಂದು ಸೋತ ಮೂರನೇ ಉದಾಹರಣೆ ಇದು.

ಇದು ಭಾನುವಾರ ತಡರಾತ್ರಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎಫ್​ ಗುಂಪಿನ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಮೆಕ್ಸಿಕೊ 1-0 ಗೋಲಿನಿಂದ ಜಯಭೇರಿ ಬಾರಿಸಿದ ನಂತರ ದಾಖಲಾದ ಐತಿಹಾಸಿಕ ದಾಖಲೆಗಳು.

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಜರ್ಮನಿ ಸುಲಭ ಜಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿತ್ತು. ಆದರೆ ಮೆಕ್ಸಿಕೊ ಆಟಗಾರರು ನಿರೀಕ್ಷೆಗೂ ಮೀರಿದ ಅದ್ಭುತ ದಾಳಿ ಸಂಘಟಿಸಿ ಜರ್ಮನಿ ಆಟಗಾರರನ್ನು ಕಂಗೆಡಿಸಿದರು. ಪಂದ್ಯದ 35ನೇ ನಿಮಿಷದಲ್ಲಿ ಹಿರ್ವಿಂಗ್ ಲೊಜೊನೊ ಗೋಲು ಬಾರಿಸಿ ಸಂಭ್ರಮಿಸಿದರು.

ಎರಡನೇ ಅವಧಿಯ ಆಟದಲ್ಲಿ ಜರ್ಮನಿ ಆಟಗಾರರು ಕನಿಷ್ಠ ಡ್ರಾ ಮಾಡಿಕೊಳ್ಳುವ ಉದ್ದೇಶದಿಂದ ಸಾಕಷ್ಟು ದಾಳಿ ಸಂಘಟಿಸಿದರೂ ಮೆಕ್ಸಿಕೊ ರಕ್ಷಣಾ ಆಟಗಾರರು ಹಾಗೂ ಗೋಲಿ ಇದಕ್ಕೆ ಅವಕಾಶವನ್ನೇ ನೀಡಲಿಲ್ಲ. ಪಂದ್ಯದ ಕೊನೆಯ ಹಂತದಲ್ಲಂತೂ ಜರ್ಮನಿಯ 11 ಆಟಗಾರರೂ ಮೆಕ್ಸಿಕೊ ವೃತ್ತದೊಳಗೆ ನುಗ್ಗಿದ ದಾಳಿ ಸಂಘಟಿಸಲು ನಡೆಸಿದ ಯತ್ನವೂ ವಿಫಲವಾಯಿತು.

Next Story

RELATED STORIES