ಪತ್ನಿಯ ಗಡ್ಡ ನೋಡಿ, ವಿಚ್ಛೇದನಕ್ಕೆ ಅರ್ಜಿಹಾಕಿದ ಪತಿರಾಯ.!!

ವಡೋದರಾ: ಮನಸ್ತಾಪ, ಕೋಪ, ಸಿಟ್ಟು, ವರದಕ್ಷಿಣೆ ಕಿರುಕುಳ ಸೇರಿದಂತೆ ಇತರೆ ಸಮಸ್ಯೆಗಳಿಗಾಗಿ ವಿಚ್ಛೇದನಕ್ಕಾಗಿ ಅರ್ಜಿಸಲ್ಲಿಸೋದು ಕಾಮನ್‌. ಆದ್ರೇ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತಿಯೊಬ್ಬ, ಪತ್ನಿಯ ಮುಖದಲ್ಲಿ ಹುಡುಗರಿಕೆ ಬಂದಹಾಗೇ ಕೂದಲು ಬರ್ತಾ ಇದೆ. ಅವಳಿಂದ ನನಗೆ ವಿಚ್ಛೇದನ ನೀಡುವಂತೆ ಕೋರ್ಟ್‌ ಮೆಟ್ಟಿಲೇರಿದ್ದಾನೆ.

ಅಂದಹಾಗೇ, ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಜಿದಾರ ರೂಪೇಶ್‌ ( ಹೆಸರು ಬದಲಿಸಾಗಿದೆ) ಎಂಬಾತನೇ ಹೀಗೆ ಅರ್ಜಿಯನ್ನು ಸಲ್ಲಿಸಿರುವ ಪತಿರಾಯ. ಈತನ ಪತ್ನಿ ರೂಪಾ ( ಹೆಸರು ಬದಲಿಸಲಾಗಿದೆ)ರನ್ನು ಕಳೆದ ಒಂದು ತಿಂಗಳ ಹಿಂದೆ ವಿವಾಹವಾಗಿದ್ದನು.

ಪತ್ನಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ದಿನ, ಮುಖಕ್ಕೆ ಮುಸುಕು ಹಾಗೇ ನಿಶ್ಚಿತಾರ್ಥ ಮಾಡಲಾಗಿತ್ತು. ಆನಂತ್ರ, ಮದುವೆಯ ದಿನದಂದು ಸಹ, ಸರಿಯಾಗಿ ಮುಖ ನೋಡಿರಲಿಲ್ವಂತೆ. ಮದುವೆಯಾದ ನಂತ್ರ ಮುಖ ನೋಡಿದಾಗ ಮೇಕಪ್‌ನಲ್ಲಿದ್ದ ಮುಖದಲ್ಲಿ ಸರಿಯಾಗಿ ಇದನ್ನು ಗುರ್ತಿಸೋಕೆ ಆಗಿರಲಿಲ್ಲ.

ಒಂದು ವಾರಗಳ ಕಾಲ ಸಂಸಾರ ನಡೆಸಿದ ರೂಪೇಶ್‌, ಆನಂತ್ರ ಕೆಲಸದ ಮೇಲೆ ಹೊರಗೆ ತೆರಳಿದ್ರಂತೆ. ಹೀಗೆ ಕೆಲಸದ ಮೇಲೆ ಹೊರಗೆ ತೆರಳಿದಾಗ ಮರಳಿ ಬಂದ ದಿನ ಹೆಂಡತಿಯ ಮುಖ ನೋಡಿದಾಗ, ಮುಖದಲ್ಲಿ ಹುಡುಗರ ಹಾಗೇ ಗಡ್ಡ ಬೆಳೆಯುವುದು ಗಮನಕ್ಕೆ ಬಂದಿರೋದನ್ನು ಗಮನಿಸಿದ್ರಂತೆ. ಇದೇ ವಿಚಾರಕ್ಕಾಗಿ ದಿನಂಪ್ರತಿ ಜಗಳ ತೆಗೆದಿದ್ದಾನೆ. ಅಲ್ಲದೇ ಇವರಿಬ್ಬರ ಜಗಳ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಆನಂತ್ರ, ಕೋರ್ಟ್‌ ಮೊರೆಹೋದ ಅರ್ಜಿದಾರ ರೂಪೇಶ್, ವಿಚ್ಛೇದನ ನೀಡುವಂತೆ ಕೋರಿದ್ದಾರೆ.

ಇದೇ ವಿಚಾರವಾಗಿ ಕೋರ್ಟ್‌ ಕಟೆಕಟೆಯಲ್ಲಿ ನಿಂತ ಪತಿ-ಪತ್ನಿಯರು, ಪತಿ ವಿಚ್ಛೇದನ ಬೇಕು ಅಂದ್ರೇ, ಪತ್ನಿ ತಾನು ಗಂಡನೊಂದಿಗೆ ಸಂಸಾರ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾಳೆ. ಹೀಗೆ ಮುಂದುವರೆದ ಇವರ ವಿಚಾರಣೆ, ತನಗೆ ವಿಚ್ಛೇದ ನೀಡುವುದಾದರೇ, ಗಂಡನಿಗೆ 50 ಸಾವಿರ ಸಂಬಳ ಬರುತ್ತದೆ. ತನಗೆ ಜೀವನಾಂಶಕ್ಕಾಗಿ 20 ಸಾವಿರ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಕೊನೆಗೆ ಇಂತಹ ವಿಚಾರಕ್ಕಾಗಿ ವಿಚ್ಛೇದನ ನೀಡಲಾಗದು. ಹೆಂಡತಿಯೊಂದಿಗೆ ಸಂಸಾರ ಮಾಡಿಕೊಂಡು ಹೋಗುವಂತೆ ಸೂಚಿಸಿ, ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದೆ.

Recommended For You

Leave a Reply

Your email address will not be published. Required fields are marked *