Top

ಆ ಕಾಗದ ಕೊಡ್ತಾ ಟಾಲಿವುಡ್ ಸೆಕ್ಸ್​ ರಾಕೆಟ್ ಸುಳಿವು..!

ಆ ಕಾಗದ ಕೊಡ್ತಾ ಟಾಲಿವುಡ್ ಸೆಕ್ಸ್​ ರಾಕೆಟ್ ಸುಳಿವು..!
X

ಟಾಲಿವುಡ್​ನಲ್ಲಿ ವಿವಾದಗಳದ್ದೇ ಕಾರುಬಾರು. ಡ್ರಗ್ಸ್ ರಾಕೆಟ್​​ನಿಂದ ಶುರುವಾದ ಈ ಸರಣಿ, ನಂದಿ ಅವಾರ್ಡ್ಸ್ ವಿವಾದ, ಕ್ಯಾಸ್ಟಿಂಗ್ ಕೌಚ್ ವಿವಾದ, ಹೈಟೆಕ್ ಸೆಕ್ಸ್ ರಾಕೆಟ್​ವರೆಗೆ ಬಂದು ನಿಂತಿದೆ. ಅಮೆರಿಕದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ತೆಲುಗು ಚಿತ್ರ ನಿರ್ಮಾಪಕ ಹಾಗೂ ಆತನ ಪತ್ನಿಯನ್ನು ಶಿಕಾಗೋ ಪೊಲೀಸರು ಬಂಧಿಸಿರೋ ವಿಚಾರ ಸಂಚಲನ ಸೃಷ್ಟಿಸಿದೆ.

ಉದ್ಯಮಿ ಹಾಗೂ ನಿರ್ಮಾಪಕ ಮೊದುಗುಮುಡಿ ಕಿಶನ್‌ ಹಾಗೂ ಆತನ ಪತ್ನಿ ಚಂದ್ರಾ ಬಂಧಿತ ಆರೋಪಿಗಳು. ಇವ್ರು ನಡೆಸುತ್ತಿದ್ದ ಸೆಕ್ಸ್ ರಾಕೆಟ್ ನಲ್ಲಿ ಒಟ್ಟು ಐವರು ನಟಿಯರು ಸಿಕ್ಕಿ ಬಿದ್ದಿದ್ದು, ಅದರಲ್ಲಿ ಟಾಲಿವುಡ್ ನ ಇಬ್ಬರು ಟಾಪ್ ನಟಿಯರೂ ಇದ್ದಾರೆ ಅನ್ನೋ ಸಂಗತಿ ಅಚ್ಚರಿ ಮೂಡಿಸಿದೆ. ಈ ಹೈಟೆಕ್ ಸೆಕ್ಸ್ ರಾಕೆಟ್​ನಲ್ಲಿ ಕನ್ನಡ ನಟಿಯರ ಹೆಸ್ರು ಕೇಳಿ ಬಂದಿದೆ ಅನ್ನಲಾಗ್ತಿದೆ.

ಅಮೇರಿಕಾದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಾರತೀಯ ನಟಿಯರನ್ನ ಆಹ್ವಾನಿಸಿ, ಅವ್ರಿಗೆ ಹಣದ ಆಮಿಷ ತೋರಿಸಿ, ಕಿಶನ್ ಹೈಟೆಕ್ ವೇಶ್ಯಾವಾಟಿಕೆ ನಡೆಸ್ತಿದ್ದ ವಿಚಾರವನ್ನ ಅಲ್ಲಿನ ಪೊಲೀಸರು ಬಹಿರಂಗ ಪಡಿಸಿದ್ದಾರೆ. ಸೌತ್​ ಸಿನಿದುನಿಯಾದ ಟಾಪ್ ನಟಿಯರು ಸಹ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅನ್ನೋ ವಿಚಾರ ದೊಡ್ಡದಾಗಿ ಸದ್ದು ಮಾಡ್ತಿದೆ. ಪೊಲೀಸರ ವಿಚಾರಣೆ ಮುಂದುವರೆಸಿದ್ದು, ಪ್ರಕರಣದ ಮತ್ತಷ್ಟು ವಿಚಾರ ಬಯಲಾಗಲಿದೆ.

ದೊಡ್ಡ ನಟಿಯರು, ಸಣ್ಣ ನಟಿಯರು ಮತ್ತು ನಿರೂಪಕಿಯರೇ ಇವರ ಮೇನ್ ಟಾರ್ಗೆಟ್. ಅಲ್ಲಿನ ತೆಲುಗು ಸಂಘಗಳು ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅತಿಥಿಗಳಾಗಿಯೋ, ಅಥವಾ ಡ್ಯಾನ್ಸ್​​ ಪರ್ಫಾರ್ಮೆನ್ಸ್​ ಹೆಸರಿನಲ್ಲೋ ನಟಿಯರನ್ನ ಕರೆಸಿಕೊಂಡು ಈ ದಂಪತಿ ಇಂತಹ ದಂಧೆ ನಡೆಸುತ್ತಿದ್ರು ಅನ್ನಲಾಗ್ತಿದೆ. ತೆಲುಗು ನಿರೂಪಕಿ ಲಾಸ್ಯ ಈ ಹೈಟೆಕ್​​ ಸೆಕ್ಸ್ ರಾಕೆಟ್​ ಬಗ್ಗೆ ಮಾತನಾಡಿದ್ದಾರೆ. ಅಷ್ಟೆ ಅಲ್ಲ ಮತ್ತೊಬ್ಬ ನಿರೂಪಕಿ ಅನಸೂಯ ಮತ್ತು ನಟಿ ಶ್ರೀರೆಡ್ಡಿ ತಮ್ಮನ್ನು ಸಹ ಈ ಕೂಪಕ್ಕೆ ತಳ್ಳುವ ಪ್ರಯತ್ನ ಮಾಡಲಾಗಿತ್ತು ಅಂತ ಹೇಳಿದ್ದಾರೆ.

ನಿಜ.. ಎಷ್ಟೋ ದೊಡ್ಡ ದೊಡ್ಡ ಪ್ರಕರಣಗಳು ಸಣ್ಣ ಪುಟ್ಟ ಸುಳಿವಿನಿಂದ ಬಯಲಾಗುತ್ತವೆ.ಸದ್ಯ ಈ ಹೈಟೆಕ್ ಸೆಕ್ಸ್​​ ರಾಕೆಟ್​ ಪ್ರಕರಣದಲ್ಲೂ ಸಣ್ಣದೊಂದು ಪೇಪರ್ ಪ್ರಮುಖ ಪಾತ್ರ ವಹಿಸಿದೆ ಅನ್ನಲಾಗ್ತಿದೆ. ಕಿಶನ್, ಚಂದ್ರಕಲಾ ದಂಪತಿ ಅಕ್ರಮವಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ ಅನ್ನೋ ಆರೋಪದಡಿ ಜನವರಿಯಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದರು. ಬಂಧನದ ವೇಳೆ ಪೊಲೀಸರು ಅವರಿಂದ ಒಂದು ದಾಖಲೆಗಳನ್ನ ವಶಪಡಿಸಿಕೊಂಡಿದ್ದರು. ಅದ್ರಲ್ಲಿ ಮಾರಿಯಟ್ ಹೋಟೆಲ್ ಲೆಟರ್​​ ಹೆಡ್​ ಪೇಪರ್ ಒಂದು ಸಿಕ್ಕಿತ್ತು. ಅದೇ ಪೇಪರ್ ಇಡೀ ಪ್ರಕರಣದ ಸುಳಿವು ಕೊಟ್ಟಿದೆ.

ಮಾರಿಯಟ್ ಹೋಟೆಲ್ ಲೆಟರ್​​ ಹೆಡ್​ ಪೇಪರ್​ನಲ್ಲಿ ಕೆಲ ನಟಿಯರ ಹೆಸ್ರು..? ಯಾವ ದಿನಾಂಕ ಅವರು ಸಿಗ್ತಾರೆ..? ಯಾವ ರೂಮ್​​ನಲ್ಲಿ ಇರ್ತಾರೆ ಅನ್ನೋದನ್ನ ಬರೆಯಲಾಗಿತ್ತು.. ಅದನ್ನ ಓದಿ ಅನುಮಾನಗೊಂಡ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ. ಕಿಶನ್ ದಂಪತಿ ವೇಶ್ಯಾವಾಟಿಕೆ ನಡೆಸ್ತಿದ್ದಾರೆ ಅನ್ನೋ ಅನುಮಾನದಿಂದ ಕೋರ್ಟ್ ಅನುಮತಿ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾಗ ಅಸಲಿ ವಿಚಾರ ಬಯಲಾಗಿದೆ. ತುಂಡು ಪೇಪರ್​ನಿಂದ ಹೈಟೆಕ್​ ಸೆಕ್ಸ್​ ರಾಕೆಟ್​ ದಂಧೆಯ ಕರಾಳ ಮುಖ ಬಯಲಾದಂತಾಗಿದೆ. ಸದ್ಯ ಆರೋಪಿಗಳನ್ನ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದು, ಇನ್ನೂ ಯಾರೆಲ್ಲಾ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಸೇರಿದಂತೆ ಪ್ರಕರಣದ ಹೆಚ್ಚಿನ ಮಾಹಿತಿ ಸಿಗಲಿದೆ.

Next Story

RELATED STORIES