ನೋ ಟು ರಷ್ಯನ್ ಗರ್ಲ್ಸ್ : ಫ್ಯಾಮಿಲಿಯೊಂದಿಗೆ ನಿರ್ಬಂಧವಿಲ್ಲ- ಕೋಟ್ ಜೆನಾರ್ಟ್ ರೊಹ್ರ್

ಕಾಲಿನಿಂಗರ್ಡ್ : ಈಗ ಎಲ್ಲೆಲ್ಲೂ ಪುಟ್ಬಾಲ್ ಜ್ವರ. 2018ರ ವಿಶ್ವಕಪ್ ರಷ್ಯನ್ ಪುಟ್ಬಾಲ್ನಲ್ಲಿ ಜನರು, ಆಟಗಾರರು ತಲ್ಲೀನರಾಗಿದ್ದಾರೆ. ಈ ನಡುವೆ ವಿಶ್ವಕಪ್ ಪುಟ್ಬಾಲ್ನಲ್ಲಿ ಪಾಲ್ಗೊಂಡಿರುವ ಆಟಗಾರರಿಗೆ ರಷ್ಯನ್ ಯುವತಿಯರೊಂದಿಗೆ ಲೈಂಗಿಕ ಕ್ರೀಡೆಯಲ್ಲಿ ತೊಡಗಿಕೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ.
ಈ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿರುವ ನೈಜೀರಿಯಾ ತಂಡದ ಆಟಗಾರರಿಗೆ ಕೋಚ್ ಜೆನಾರ್ಟ್ ರೊಹ್ರ್ ವಿಶ್ವಕಪ್ ಹಿನ್ನೆಲೆಯಲ್ಲಿ ಖಡಕ್ ವಾರ್ನಿಂಗ್ ರವಾನಿಸಿದ್ದರು. ಈ ಮಾತಿಗೆ ಮತ್ತೆ ಪ್ರತಿಕ್ರಿಯೆ ನೀಡಿರುವ ನೈಜಿರಿಯಾ ಕೋಚ್ ಜೆನಾರ್ಟ್ ರೊಹ್ರ್, ನಮ್ಮ ನೈಜಿರಿಯಾ ತಂಡಲ್ಲಿ ಜಾನ್ ಓಬಿಯಾ ಮೈಕಲ್ ಅವರಿಗೆ ರಷ್ಯ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿದ್ದರು. ಹೀಗಾಗಿ ಇಂತಹ ಹೇಳಿಕೆಯನ್ನು ನೀಡಬೇಕಾಯಿತು.
ನಾನು ಹೇಳಿರುವ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲಿ. ರಷ್ಯನ್ ಮಹಿಳೆಯರೊಂದಿಗೆ ಲೈಂಗಿಕ್ ಸಂಪರ್ಕ ಪಡೆಯುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಆದರೇ ಅವರ ಸಂಬಂಧಿಕರು, ಕುಟುಂಬದವರೊಂದಿಗೆ ಭೇಟಿ ಮಾಡೋಕೆ, ಅವರೊಂದಿಗೆ ಇರೋಕೆ ನಿರ್ಬಂಧಿಸಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನೂ ನಮ್ಮ ತಂಡಕ್ಕೆ ಮೊದಲು ಶಿಸ್ತು ಮುಖ್ಯ. ಶಿಸ್ತಿನ ಮೂಲಕ ಈ ಬಾರಿಯ ರಷ್ಯಾ ವಿಶ್ವಕಪ್ ಪುಟ್ಬಾಲ್ನಲ್ಲಿ ಗೆಲುವಿನತ್ತ ಕೇಂದ್ರಿಕರಿಸ ಬೇಕಿದೆ. ಹೀಗಾಗಿ, ರಷ್ಯನ್ ಯುವತಿಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಾರದು ಎಂಬ ನಿರ್ಬಂಧವನ್ನು ಹೇರಲಾಗಿದೆ. ಇದರ ಹೊರತಾಗಿ ಯಾವುದೇ ಬೇರೆಯ ಉದ್ದೇಶವಿಲ್ಲ ಎಂಬ ಮಾಹಿತಿಯನ್ನು ಸ್ಪೂಟ್ನಿಕ್ ನ್ಯೂಸ್ಗೆ ನೀಡಿದ ಹೇಳಿಕೆಯಲ್ಲಿ ನೈಜೀರಿಯಾ ಕೋಟ್ ಜೆನಾರ್ಟ್ ರೊಹ್ರ್ ತಿಳಿಸಿದ್ದಾರೆ.