Top

ಬೆಂಗಳೂರಿನಲ್ಲಿ ಧೋನಿ ಏಕಾಂಗಿ ಅಭ್ಯಾಸ

ಬೆಂಗಳೂರಿನಲ್ಲಿ ಧೋನಿ ಏಕಾಂಗಿ ಅಭ್ಯಾಸ
X

ಐಪಿಎಲ್​ ಗುಂಗಿನಿಂದ ಹೊರಬರಲು ಯತ್ನಿಸುತ್ತಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬೆಂಗಳೂರಿನಲ್ಲಿ ಸದ್ದಿಲ್ಲದೇ ನಡೆಸುತ್ತಿದ್ದಾರೆ ಬ್ಯಾಟಿಂಗ್ ಅಭ್ಯಾಸ!

ಮುಂಬರುವ ಇಂಗ್ಲೆಂಡ್ ಪ್ರವಾಸವನ್ನು ಗಮನದಲ್ಲಿರಿಸಿಕೊಂಡು ಧೋನಿ ಅಭ್ಯಾಸ ನಡೆಸುತ್ತಿದ್ದಾರೆ. ವಿಶೇಷ ಅಂದರೆ ಅವರೊಂದಿಗೆ ಭಾರತ ತಂಡದ ಯಾವುದೇ ಆಟಗಾರರು ಇಲ್ಲ. ಯಾರಿಗೂ ಹೇಳದೇ ಸದ್ದಿಲ್ಲದೇ ಧೋನಿ ಅಭ್ಯಾಸ ನಡೆಸುತ್ತಿರುವುದು ಅಚ್ಚರಿ ಮೂಡಿಸಿದೆ.

ಸಚಿನ್ ತೆಂಡುಲ್ಕರ್ ಕೂಡ ಇದೇ ರೀತಿ ಯಾವುದೇ ಪ್ರವಾಸ ಇದ್ದಾಗ ಮುಂಚಿತವಾಗಿಯೇ ತಮ್ಮ ಪಾಡಿಗೆ ತಾವು ಅಭ್ಯಾಸ ನಡೆಸುತ್ತಿದ್ದರು. ಭಾರತ ತಂಡದ ಆಹ್ವಾನಕ್ಕಾಗಿ ಕಾಯುತ್ತಿರಲಿಲ್ಲ. ಇದೀಗ ಧೋನಿ ಕೂಡ ಸಚಿನ್ ಅನ್ನು ಅನುಸರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ್ ಅಕಾಡೆಮಿಯಲ್ಲಿ ಧೋನಿ ಎರಡು ಅವಧಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇದರಲ್ಲಿ ಶೇ.70ರಷ್ಟು ಕೆಳಭಾಗದಲ್ಲಿ ಬರುವ ಎಸೆತಗಳನ್ನು ಎದುರಿಸುತ್ತಿದ್ದಾರೆ. ಪ್ರತಿ 2 ಗಂಟೆಗೊಮ್ಮೆ ವಿಶ್ರಾಂತಿ ಪಡೆದು ನಂತರ ಅಭ್ಯಾಸ ಮುಂದುವರಿಸುತ್ತಿದ್ದಾರೆ.

Next Story

RELATED STORIES