Top

ನೀವು ಯಾರದ್ದೋ ಮನೆಯಲ್ಲಿ ಪ್ರತಿಭಟನೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್​

ನೀವು ಯಾರದ್ದೋ ಮನೆಯಲ್ಲಿ ಪ್ರತಿಭಟನೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್​
X

ಕಳೆದ ಒಂದು ವಾರದಿಂದ ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ದೆಹಲಿ ಹೈಕೋರ್ಟ್​, ನೀವು ಯಾರದ್ದೋ ಮನೆ ಅಥವಾ ಕಚೇರಿಯಲ್ಲಿ ಕುಳಿದು ಪ್ರತಿಭಟನೆ ಮಾಡುವಂತಿಲ್ಲ. ಇದಕ್ಕೆ ಪ್ರತಿಭಟನೆ ಅಂತ ಹೇಳಲಾಗುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ನೇತೃತ್ವದ ಸರಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

ಲೆಫ್ಟಿನೆಂಟ್ ಗವರ್ನರ್ ಅನಿಲ್​ ಭಾಯ್​ಜಾನ್ ಅವರ ನಿವಾಸದ ವಿಶ್ರಾಂತಿ ಕೊಠಡಿಯಲ್ಲಿ ತಂಗಿರುವ ಕೇಜ್ರಿವಾಲ್ ಮತ್ತು ಸಚಿವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಸೋಮವಾರ ಆರೋಗ್ಯ ಸಚಿವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಧಿಕಾರಿಗಳು ಪ್ರತಿಭಟನೆ ವಾಪಸ್ ಪಡೆದು ಸೂಕ್ತವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸುವವರೆಗೂ ವಿಶ್ರಾಂತಿ ಕೊಠಡಿಯಿಂದ ಹೊರಗೆ ಹೋಗುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಪಟ್ಟು ಹಿಡಿದಿದ್ದರೆ, ಆಪ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲು ಭಾನುವಾರ ಯತ್ನಿಸಿದ್ದರು.

Next Story

RELATED STORIES