Top

ಕರ್ನಾಟಕದಲ್ಲಿ ನಾಯಿ ಸತ್ತರೂ ಮೋದಿ ಕಾರಣನಾ?: ನಾಲಿಗೆ ಹರಿಬಿಟ್ಟ ಮುತಾಲಿಕ್

ಕರ್ನಾಟಕದಲ್ಲಿ ನಾಯಿ ಸತ್ತರೂ ಮೋದಿ ಕಾರಣನಾ?: ನಾಲಿಗೆ ಹರಿಬಿಟ್ಟ ಮುತಾಲಿಕ್
X

ಕರ್ನಾಟಕದಲ್ಲಿ ನಾಯಿ ಸತ್ತರೂ ಅದಕ್ಕೆ ಮೋದಿ ಕಾರಣನಾ? ರಸ್ತೆಯಲ್ಲಿ ನಾಯಿ ಸತ್ತರೂ ಮೋದಿ ಉತ್ತರ ನೀಡಬೇಕಾ? ಕಾಶ್ಮೀರ ಏನು ಗೌರಿ ಲಂಕೇಶ್ ಅವರ ಅಪ್ಪನದಾ? ಬುದ್ದಿ ಜೀವಿಗಳು ಕಾಂಗ್ರೆಸ್ ಸರಕಾರದಲ್ಲಿ ಆದ ಹತ್ಯೆ ಪ್ರಶ್ನಿಸುವುದು ಬಿಟ್ಟು ಮೋದಿ ಮೋದಿ ಎಂದು ಬೊಗಳುತ್ತಾರೆ...

ಹೀಗೆ ಪುಂಖಾನುಪುಂಖವಾಗಿ ಬಾಯಿಗೆ ಬಂದಂತೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನಾಲಿಗೆ ಹರಿಬಿಟ್ಟಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಪರಶುಮಾರ ವಾಗ್ಮರೆ ಬಂಧನ ಹಾಗೂ ಹಿಂದೂಪರ ಸಂಘಟನೆಗಳ ಕೈವಾಡ ಕುರಿತು ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜಾಜಿನಗರದ ರಾಮಮಂದಿರ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಹಮ್ಮಿಕೊಂಡಿದ್ದ ಎಡಪಂಥೀಯರ ಹಿಂದೂ ವಿರೋಧಿ ವಿರೋಧಿ ಸಂವಾದ ಕಾರ್ಯಕ್ರಮದಲ್ಲಿ ಮುತಾಲಿಕ್ ಈ ರೀತಿ ಬಾಯಿಗೆ ಬಂದಂತೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ಗೌರಿ ಹತ್ಯೆ ಬಲಪಂಥೀಯರಿಗೆ ತಳಕು ಹಾಕಲಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಗೌರಿ ಹತ್ಯೆಯಾಗಿದೆ. ಆದರೆ ಬುದ್ಧಿಜೀವಿಗಳು ಕಾಂಗ್ರೆಸ್ ಕಡೆ ಬೊಟ್ಟು ಮಾಡದೇ ಮೋದಿ ಬಾಯಿ ಬೀಡ್ತಿಲ್ಲ ಅಂತ ಆರೋಪಿಸುತ್ತಿದ್ದಾರೆ. ಕರ್ನಾಟಕದಲ್ಲಿ ಒಂದು ನಾಯಿ ಸತ್ರೂ ಅದಕ್ಕೂ ಮೋದಿ ಕಾರಣ ಆಗ್ತಾರಾ? ಎಂದು ಮುತಾಲಿಕ್ ಪ್ರಶ್ನಿಸಿದರು.

ಗೌರಿ ಹತ್ಯೆ ತನಿಖೆಯನ್ನು ಆರಂಭದಲ್ಲೆ ದಿಕ್ಕು ತಪ್ಪಿಸಲಾಯ್ತು. ಆರಂಭದಿಂದಲೂ ಬಲಪಂಥೀಯರ ಮೇಲೆ ಗೂಬೆ ಕೂರಿಸಲಾಯ್ತು. ಆದರೆ ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ಕರ್ನಾಟಕದಲ್ಲಿ ಇಬ್ಬರ ಹತ್ಯೆಯಾಗಿದೆ. ಎಲ್ಲಾ ಹತ್ಯೆಗಳಿಗೂ ಮೋದಿಯನ್ನು ಪ್ರಶ್ನೆ ಮಾಡಲಾಗುತ್ತೆ. ಗೌರಿ ಹತ್ಯೆಗೆ ಮೋದಿಗೂ ಏನು ಸಂಬಂಧ? ರಸ್ತೆಯಲ್ಲಿ "ನಾಯಿ" ಸತ್ತರೂ ಮೋದಿ ಮಾತನಾಡಬೇಕಾ ಎಂದು ಪ್ರಶ್ನಿಸಿದರು.

ಬುದ್ಧಿಜೀವಿಗಳು ಕಾಂಗ್ರೆಸ್ ಏಜೆಂಟ್​ಗಳು. ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಮೋದಿ ಮೋದಿ ಎಂದು ಬೊಗಳುತ್ತಾರೆ. ಪ್ರಶಸ್ತಿಗಳನ್ನು ವಾಪಾಸ್ ಮಾಡಿದರು. ಆದರೆ ಯಾರೂ ಚೆಕ್ ವಾಪಾಸ್ ಮಾಡಲಿಲ್ಲ. ಗೌರಿ ಲಂಕೇಶ್ ಕನ್ಹಯ್ಯ ಅವ್ರನ್ನು ದತ್ತು ತೆಗೆದುಕೊಂಡಿದ್ದರು. ಆದರೆ ಕನ್ಹಯ್ಯ ದೇಶದ ವಿರುದ್ಧವೆ ಮಾತನಾಡಿದ್ದ. ಅಂತಹವರನ್ನು ದತ್ತು ತೆಗೆದುಕೊಂಡಿದ್ದರು. ಇಂತಹ ಗೌರಿ ಲಂಕೇಶ್ ಗೆ ಮರಣೋತ್ತರ ಪ್ರಶಸ್ತಿ ಕೊಡಲಾಯ್ತು. ಗೌರಿ ಲಂಕೇಶ್ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಬೇಕೆಂದು ಬರೆದಿದ್ದರು. ಕಾಶ್ಮೀರ ಭಾರತದ ಭಾಗ. ಕಾಶ್ಮೀರ ಏನು ಗೌರಿ ಲಂಕೇಶ್ "ಅಪ್ಪನದ್ದಾ" ಎಂದು ಮುತಾಲಿಕ್ ಪ್ರಶ್ನಿಸಿದರು.

Next Story

RELATED STORIES