Top

ಟೀಂ ಇಂಡಿಯಾಗೆ ಮರಳಿದ ಸುರೇಶ್​ ರೈನಾ

ಟೀಂ ಇಂಡಿಯಾಗೆ ಮರಳಿದ ಸುರೇಶ್​ ರೈನಾ
X

ಮುಂಬೈ: ಯೋ ಯೋ ಟೆಸ್ಟ್ ನಲ್ಲಿ ವಿಫಲರಾಗಿ ಇಂಗ್ಲೆಂಡ್​ ಸರಣಿ ಆಡುವ ಅವಕಾಶದಿಂದ ವಂಚಿತರಾದ ಅಂಬಾಟಿ ರಾಯ್ಡು ಬದಲಿಗೆ ಎಡಗೈ ಬ್ಯಾಟ್ಸ್​ ಮನ್ ಸುರೇಶ್​ ರೈನಾ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಎನ್​ಸಿಎ ಅಕಾಡೆಮಿಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಇತ್ತೀಚೆಗೆ ನಡೆದ ಯೋ ಯೋ ಟೆಸ್ಟ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ಅಂಬಾಟಿ ರಾಯ್ಡು ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ರು. ಇವರೊಂದಿಗೆ ಸುರೇಶ್​ ರೈನಾ ಕೂಡ ಫೇಲ್​ ಆಗಿದ್ರು. ಆದರೆ ಮತ್ತೊಮ್ಮೆ ನಡೆದ ಯೋ ಯೋ ಟೆಸ್ಟ್ ನಲ್ಲಿ ಸುರೇಶ್​ ರೈನಾ ಪಾಸ್​ ಆಗಿದ್ದಾರೆ. ಇದರೊಂದಿಗೆ ಸುರೇಶ್​ ರೈನಾ ಮೂರು ವರ್ಷಗಳ ನಂತರ ಟೀಂ ಇಂಡಿಯಾಕ್ಕೆ ಕಮ್​ ಬ್ಯಾಕ್ ಮಾಡಿದ್ದಾರೆ.

Next Story

RELATED STORIES