Top

ಸೌತ್ ಫಿಲ್ಮ್‌ಫೇರ್ ಅವಾರ್ಡ್‌ಗೆ ಭಾಜನರಾದ ಕನ್ನಡದ ಕಲಾವಿದರು

ಸೌತ್ ಫಿಲ್ಮ್‌ಫೇರ್ ಅವಾರ್ಡ್‌ಗೆ ಭಾಜನರಾದ ಕನ್ನಡದ ಕಲಾವಿದರು
X

ಹೈದರಾಬಾದ್: ಸೌತ್ ಫಿಲ್ಮ್‌ಫೇರ್ ಅವಾರ್ಡ್ಸ್ ಕಾರ್ಯಕ್ರಮ ನಡೆದಿದ್ದು, ಕನ್ನಡದ ಕಲಾವಿದರು ಕೂಡ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜಕುಮಾರ ಚಿತ್ರದಲ್ಲಿ ನಟಿಸಿದ್ದ ಪುನೀತ್ ರಾಜ್‌ಕುಮಾರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.ಬ್ಯೂಟಿಫುಲ್ ಮನಸುಗಳು ಚಿತ್ರಕ್ಕೆ ಬಣ್ಣ ಹಚ್ಚಿದ್ದ ನಟಿ ಶೃತಿ ಹರಿಹರನ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಇನ್ನು ರಾಜ್ ಬಿ ಶೆಟ್ಟಿ ನಿರ್ದೇಶನದ ಒಂದು ಮೊಟ್ಟೆ ಕಥೆ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಚೌಕ್ ಚಿತ್ರ ನಿರ್ದೇಶಕ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಾಚಿಕೊಂಡ್ರೆ, ಅಪ್ಪ ಐ ಲವ್ ಯೂ ಪಾ ಹಾಡು ಹಾಡಿ ಖ್ಯಾತಿ ಗಳಿಸಿರುವ ಅನುರಾಧಾ ಭಟ್ ಕೂಡ ಅತ್ಯುತ್ತಮ ಗಾಯಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಕಾಲೇಜ್ ಕುಮಾರ ಚಿತ್ರದಲ್ಲಿ ನಟಿಸಿದ್ದಕ್ಕೆ, ರವಿಶಂಕರ್ ರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದಕ್ಕಿದೆ.

Next Story

RELATED STORIES