Top

ಸಲ್ಮಾನ್ ಈ ಬಾರಿ ರಂಜಾನ್ ಹಬ್ಬವನ್ನು ಯಾರ ಜೊತೆ ಸೆಲೆಬ್ರೇಟ್ ಮಾಡಿದ್ರು ಗೊತ್ತಾ..?

ಸಲ್ಮಾನ್ ಈ ಬಾರಿ ರಂಜಾನ್ ಹಬ್ಬವನ್ನು ಯಾರ ಜೊತೆ ಸೆಲೆಬ್ರೇಟ್ ಮಾಡಿದ್ರು ಗೊತ್ತಾ..?
X

ಮುಂಬೈ: ಭಾರತದಲ್ಲಿ ಪ್ರತಿ ರಂಜಾನ್ ಹಬ್ಬಕ್ಕೂ ಸಲ್ಮಾನ್ ಖಾನ್ ಅಭಿನಯದ ಒಂದು ಸಿನಿಮಾ ಬಿಡುಗಡೆಯಾಗೋದು ಗ್ಯಾರಂಟಿ. ಈ ಬಾರಿಯೂ ಕೂಡ ಸಲ್ಮಾನ್ ಅಭಿನಯದ ರೇಸ್3 ಬಿಡುಗಡೆಯಾಗಿದ್ದು, ಸಲ್ಮಾನ್ ಈ ಖುಷಿಗೆ ಅದ್ಧೂರಿಯಾಗಿ ರಂಜಾನ್ ಸೆಲೆಬ್ರೇಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ತಮ್ಮ ಕುಟುಂಬಸ್ಥರೊಂದಿಗೆ ಮುಂಬೈನಲ್ಲಿರುವ ತಂಗಿ ಅರ್ಪಿತಾ ಖಾನ್ ಮನೆಯಲ್ಲಿ ರಂಜಾನ್ ಹಬ್ಬ ಆಚರಿಸಿದ್ದಾರೆ. ಇನ್ನು ಹಬ್ಬಕ್ಕೆಂದು ರೇಸ್ 3ನ ಕಲಾವಿದರನ್ನ ಸಲ್ಮಾನ್ ಆಹ್ವಾನಿಸಿದ್ದರು. ಜಾಕ್ವೇಲಿನ್ ಫರ್ನಾಂಡೀಸ್, ಡೈಸಿ ಶಾ, ಬಾಬಿ ಡಿಯೋಲ್, ಅನೀಲ್ ಕಪೂರ್, ಸಕೀಬ್ ಸಲೀಮ್, ಫ್ರೆಡ್ಡಿ ದಾರುವಾಲಾ ಮತ್ತು ನಿರ್ಮಾಪಕ ರಮೇಶ್ ತೌರಾನಿ ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ರು.

ಇದಲ್ಲದೇ, ಸಲ್ಮಾನ್ ಗೆಳೆಯ ಗೆಳತಿಯರಾದ, ಕತ್ರೀನಾ ಕೈಫ್, ಸೋನಾಕ್ಷಿ ಸಿನ್ಹಾ, ಲೂಲಿಯಾ ವಂತೂರ್, ಪೂಜಾ ಹೆಗ್ಡೆ, ಮೌನಿರಾಯ್, ಆಥಿತ್ಯಾ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

ಸಲ್ಮಾನ್ ಖಾನ್ ತಾಯಿ ಹೆಲನ್, ಸಹೋದರರಾದ ಸೋಹೆಲ್ ಖಾನ್, ಅರ್ಬಾಜ್ ಖಾನ್ ಕೂಡ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನು ನಟಿಮಣಿಯರೆಲ್ಲ ವೆರೈಟಿ ವೆರೈಟಿ ಡ್ರೆಸ್ ತೊಟ್ಟು ಕಲರ್‌ಫುಲ್ ಆಗಿ ಕಾಣಿಸಿಕೊಂಡಿದ್ದರು. ಕತ್ರೀನಾ ಕೈಫ್ ಪಲಾಜೋ ಡ್ರೆಸ್ ತೊಟ್ಟು ಮಿಂಚಿದ್ರೆ, ಜಾಕ್ವೆಲಿನ್ ಫರ್ನಾಂಡೀಸ್ ಡೈಸಿ ಷಾ, ಸೋನಾಕ್ಷಿ ಸಿನ್ಹಾ,ಪೂಜಾ ಹೆಗ್ಡೆ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ ಉಡುಪಿನಲ್ಲಿ ಮಿರಿ ಮಿರಿ ಮಿಂಚುತ್ತಿದ್ದರು.

ಇನ್ನು ಅನೀಲ್ ಕಪೂರ್, ಅನುಪಮ್ ಖೇರ್ ಕೂಡ ಈ ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ರು. ಬಾಬಿ ಡಿಯೋಲ್ ತಮ್ಮ ಪತ್ನಿ ತಾನ್ಯಾ ಜೊತೆ ಪಾರ್ಟಿಗೆ ಬಂದಿದ್ರು.

Next Story

RELATED STORIES