Top

ಕಬಿನಿಯಿಂದ ನೀರು ಬಿಡುಗಡೆ: ಬೆಳೆ ಹಾನಿಗೆ ರೈತ ಆತ್ಮಹತ್ಯೆ ಯತ್ನ

ಕಬಿನಿಯಿಂದ ನೀರು ಬಿಡುಗಡೆ: ಬೆಳೆ ಹಾನಿಗೆ ರೈತ ಆತ್ಮಹತ್ಯೆ ಯತ್ನ
X

ಮುಂಗಾರು ಮಳೆಯ ಆರ್ಭಟ ಹೆಚ್ಚಿರುವ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮುನ್ನವೇ ಕಬಿನಿ ಜಲಾಶಯ ಭರ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.

ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆ ರೈತರ ಜಮೀನಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಬೆಳೆದು ನಿಂತು ಪೈರು ನೀರು ಪಾಲಾಗಿದೆ.

ಕುಪ್ಪರವಳ್ಳಿಯ ನೂರಾರು ಎಕರೆ ಜಮೀನು ಜಲಾವೃತಗೊಂಡಿದ್ದು, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ನೀರು ನಿಂತಿದ್ದು, ಸಂಪೂರ್ಣ ಬೆಳೆ ಹಾನಿಯಾಗಿದೆ. ಇದರಿಂದ ಕಂಗಲಾದ ರೈತ ಬಸವಯ್ಯ ಜಮೀನಿನಲ್ಲೇ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಭತ್ತದ ಬೆಳೆ ಬೆಳೆದಿದ್ದ ಬಸವಯ್ಯ ಜಮೀನಿನಲ್ಲಿ ತುಂಬಿದ್ದ ನೀರಿನಲ್ಲಿ ನಿಂತು ಅಳುತ್ತಿರುವ ರೈತ, ಅದೇ ಜಮೀನಿನ ನೀರಿನಲ್ಲಿ ಮುಳುಗಿ ಸಾಯಲು ಮುಂದಾಗಿದ್ದು, ಸ್ಥಳೀಯರು ಕಾಪಾಡಿದ್ದಾರೆ.

Next Story

RELATED STORIES