Top

ಬುದ್ಧಿಜೀವಿಗಳು ಹಿಂದುತ್ವ ಒಪ್ಪಲ್ಲ: ಅನಂತ್​ಕುಮಾರ್ ಹೆಗ್ಡೆ

ಬುದ್ಧಿಜೀವಿಗಳು ಹಿಂದುತ್ವ ಒಪ್ಪಲ್ಲ: ಅನಂತ್​ಕುಮಾರ್ ಹೆಗ್ಡೆ
X

ಬುದ್ದಿಜೀವಿಗಳು ಹಿಂದುತ್ವ ಒಪ್ಪುವುದಿಲ್ಲ. ಮೂರ್ಖತೆಯನ್ನೇ ಹೊದ್ದುಕೊಂಡಿರುವ ವಿಚಾರವಾದಿಗಳು ಅವರ ಬುದ್ದಿಯನ್ನು ಕೂಡ ಮಾರಾಟಕ್ಕಿಟ್ಟಿದ್ದಾರೆ. ಬಣ್ಣ ಹಚ್ಚಿದಾಗ ಮಾತ್ರ ನೋಡಲು ಸತ್ಯ. ಬಣ್ಣ ಇಳಿದಾಗ ಅವರನ್ನು ನೋಡಲು ಆಗುವುದಿಲ್ಲ ಎಂದು ವಿವಾದಾತ್ಮಕ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಾವರ್ಕರ್​ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಮಾತನಾಡೋಕೆ ಬರೋಲ್ಲ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಹಿಂದುಗಳ ಪರ ಮಾತನಾಡಿದರೆ ಸಂವಿಧಾನ ವಿರೋಧಿ ಅಂತ ಹೇಳುತ್ತಾರೆ. ಮಾಧ್ಯಮಗಳು ನನ್ನನ್ನು ಬೈಯ್ದಷ್ಟು ನನಗೆ ಖುಷಿ ಎಂದರು.

ಹಿಂದಿನ ಪಿಎಚ್​ಡಿ ಕಾಪಿ ಪೇಸ್ಟ್ ಅಷ್ಟೆ. ಆದರೆ ಸಾವರ್ಕರ್ ಈ ಕೆಲಸ ಮಾಡದೇ ಹಿಂದೂತ್ವದ ಬಗ್ಗೆ ಬರೆದಿದ್ದಾರೆ. ಇದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಹಿಂದುತ್ವ ಒಂದು ಸಮುದ್ರ , ಹಿಂದುತ್ವದ ಬಗ್ಗೆ ಹೇಳಲು ಅಸಾಧ್ಯ ಎಂದು ಅನಂತ್ ಕುಮಾರ್ ಹೆಗ್ಡೆ ಹೇಳಿದರು.

ಸಮುದ್ರದಲ್ಲಿ ಎಲ್ಲ ಇದೆ. ಹಾಗೇ ಹಿಂದುತ್ವದ ಬಗ್ಗೆ ಮಾತನಾಡಿದರೆ ಯಾವ ವಿಚಾರವಾದಿಗಳು ಹಿಂದುತ್ವದ ಬಗ್ಗೆ ಮಾತನಾಡಲು ಹೋಗಿ ಮೂರ್ಖತನ ನಾನು ಮಾಡಲ್ಲ. ನನಗೇ ತಿಳಿದಿದೇ ಶ್ರೇಷ್ಠ ಅನ್ನುವ ಮೂರ್ಖತನದಲ್ಲಿ ನಾನು ಹುಟ್ಟಿಲ್ಲ. ಯಾರೋ ನಾಲಿಗೆ ಹೊರಳಲಿಲ್ಲ ಸಿಂಧು ಅನ್ನಲು ಆಗಲಿಲ್ಲ ಹಾಗೇ ಹಿಂದು ಅಂತಾರೆ. ಆದರೆ ಇದು ಭಾರೀ ಜೋಕ್. ತನಗೆ ಗೊತ್ತಿದ್ದೆ‌ ಸರಿ ಎನ್ನುವ ಮೂರ್ಖ ಪರಂಪರೆಯಲ್ಲಿ ಹುಟ್ಟಿರುವವನು ನಾನಲ್ಲ ಎಂದು ಅವರು ನುಡಿದರು.

ಹಿಂದುತ್ವವೇ ಬದುಕು. ಯಾರು ಕೆಟ್ಡದನ್ನ ದೂರುವವನ್ನೋ ಅವನು ಹಿಂದು? ಹಾಗಾಗಿ ಹಿಂದುಗಳು ಶ್ರೇಷ್ಠ

ಯಾವಾಗಲೋ ಒಂದು ಬಾರಿ ಅಮೆರಿಕಕ್ಕೆ ಹೋಗಿ ಬರುತ್ತಾರೆ. ಅಲ್ಲಿ ಒಂದು ನಾಲ್ಕು ಪದ ಕಲಿತುಕೊಂಡು ಬಂದು ಮಾತನಾಡುತ್ತಾರೆ. ಕ್ಯಾಪಟಿಟಿ ಅಂತ ಮಾತನಾಡುವವರು ನಮ್ಮ ದೇಶದ ಬಗ್ಗೆ ಮಾತನಾಡುತ್ತಾರೆ. ಅಂತವರು ನಮ್ಮ ಹಿಂದೂಗಳ ಬಗ್ಗೆ ಮಾತನಾಡ್ತಾರೆ ಈ ಪಂಡಿತರು. ಯಾವಾಗಲೂ ಒಂದ್ ಸರಿ ಅಮೇರಿಕಾಗೆ ಹೋಗಿ ಭಾರತದ ರಸ್ತೆ ,ಚರಂಡಿ ಸರಿ ಇಲ್ಲ ಅಂತಾರೆ.

ಕಾಂಗ್ರೆಸ್ ಕೂಡ ಹಿಸ್ಟರಿಯೇ ಒಪ್ಪಿಕೊಂಡಿದೆ. ಹೀಗಿರುವಾಗ ಬುದ್ದಿಜೀವಿಗಳು ಬೊಬ್ಬೆ ಹೊಡೆಯೊದು ಬೇಡ. ಹಿಂದುಗಳು ಎಲ್ಲಿಂದಲೋ ವಲಸೆ ಬಂದವರಲ್ಲ. ಇದೇ ಮಣ್ಣಿನಲ್ಲಿ ಬೆಳೆದ ಸಂಸ್ಕೃತಿ ಹಿಂದು. ಈ ಸಂಸ್ಕೃತಿ,ಇತಿಹಾಸ ಗೊತ್ತಿಲ್ಲದ ವಿಚಾರವಾದಿಗಳು ಅವರಿಗೆ ಬೇಕಾದ ಹಾಗೇ ಮಾತಾಡ್ತಾರೆ. ಹಿಂದುತ್ವ ರಾಜಕಾರಣ ಪುಟ್ಬಾಲ್ ಅಲ್ಲ. ಚುನಾವಣೆಯ ತಂತ್ರ ಹಿಂದುತ್ವ ಅಲ್ಲ. ಹಿಂದುತ್ವ ಇಟ್ಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ಹೆಗ್ಡೆ ವಾಗ್ದಾಳಿ ನಡೆಸಿದರು.

Next Story

RELATED STORIES