ಆಸ್ಟ್ರೇಲಿಯಾ ವಿರುದ್ಧ ಫ್ರಾನ್ಸ್ ಗೆ ಭರ್ಜರಿ ಗೆಲುವು

X
TV5 Kannada17 Jun 2018 7:12 AM GMT
ರಷ್ಯಾ : ನಿನ್ನೆ ನಡೆದ ಸಿ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ತಂಡ 2-1 ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ವಿಎಆರ್ ಪೆನಾಲ್ಟಿಯ ಮೂಲಕ ಆಂಟೊಯಿನ್ ಗ್ರೀಜ್ಮನ್ ಗೋಲ್ ದಾಖಲಿಸಿದ್ದು, ಫ್ರಾನ್ಸ್ ತಂಡದ ಜಯಕ್ಕೆ ಸಹಕಾರಿಯಾಯಿತು. ಪ್ರಾರಂಭದಲ್ಲಿ ಮ್ಯಾಚ್ ರೆಫ್ರಿ ಆಂಡ್ರೆಸ್ ಕುನ್ಹಾ ಸ್ಪಾಟ್ ಕಿಕ್ ಗೆ ಅವಕಾಶ ನೀಡಲಿಲ್ಲ.
ಆದರೆ ವಿಎಆರ್ ದೃಷ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೆನಾಲ್ಟಿ ಸಿಕ್ಕಿದ್ದು ಗ್ರೀಜ್ಮನ್ ಗೋಲ್ ದಾಖಲಿಸಿದರು. ಆದರೆ ಸ್ಪಾಟ್ ಕಿಕ್ ಮೂಲಕ ಫ್ರಾನ್ಸ್ ತಂಡ ಯಶಸ್ವಿ ಗೋಲ್ ನ್ನು ದಾಖಲಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾ ನಾಯಕ ಮೈಲ್ ಜೆಡಿನಾಕ್ ಸಹ ಗೋಲ್ ದಾಖಲಿಸಿ ಸಮಬಲ ಸಾಧಿಸಿದರು.
ನಂತರ 81 ನೇ ನಿಮಿಷದಲ್ಲಿ ಫ್ರಾನ್ಸ್ ತಂಡ ಆಸ್ಟ್ರೇಲಿಯಾ ತಂಡಕ್ಕಿಂತ ಮೇಲುಗೈ ಸಾಧಿಸಿ 2-1 ಅಂತರದಿಂದ ಎದುರಾಳಿಗಳನ್ನು ಮಣಿಸಿತು.
Next Story