ಕೋಸ್ಟರಿಕಾಗೆ ಏಟು ಕೊಟ್ಟ ಸರ್ಬಿಯಾದ ಅಲೆಗ್ಸಾಂಡರ್

X
TV5 Kannada17 Jun 2018 2:24 PM GMT
21 ವರ್ಷದ ಅಲೆಗ್ಸಾಂಡರ್ ಕೊಲರೊವ್ ಸಿಡಿಸಿದ ಅದ್ಭುತ ಗೋಲಿನ ನೆರವಿನಿಂದ ಸರ್ಬಿಯಾದ ತಂಡ ಏಕೈಕ ಗೋಲಿನಿಂದ ಕೋಸ್ಟರಿಕಾ ತಂಡವನ್ನು ಬಗ್ಗುಬಡಿದು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿದ ಜಯದ ಆರಂಭ ಪಡೆದಿದೆ.
ಭಾನುವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಸರ್ಬಿಯಾ ಪರ 56ನೇ ನಿಮಿಷದಲ್ಲಿ ಸಂಪರ್ಕ ಆಟಗಾರ ಅಲೆಗ್ಸಾಂಡರ್ ಕೊಲರೊವ್ ಗೋಲು ಬಾರಿಸಿದರು. ಕೋಸ್ಟರಿಕಾ ತಂಡ ನಂತರ ಗೋಲು ಗಳಿಸುವ ಹಲವಾರು ಅವಕಾಶಗಳನ್ನು ಕೈಚೆಲ್ಲಿದ್ದರಿಂದ ಡ್ರಾ ಮಾಡಿಕೊಳ್ಳುವ ಅವಕಾಶವನ್ನೂ ಕಳೆದುಕೊಂಡಿತು.
ಅತ್ಯಂತ ಕಠಿಣ ಗುಂಪು ಎಂದೇ ಹೇಳಲಾದ ಇ ಗುಂಪಿನಲ್ಲಿ ಕೋಸ್ಟರಿಕಾ ಮುಂದಿನ ಪಂದ್ಯದಲ್ಲಿ ಬ್ರೆಜಿಲ್ ಮತ್ತು ಸ್ವಿಜರ್ಲೆಂಡ್ ತಂಡಗಳನ್ನು ಎದುರಿಸಬೇಕಿದ್ದು, ಕ್ವಾರ್ಟರ್ ಫೈನಲ್ ಹಾದಿ ಕಷ್ಟವಾಗಲಿದೆ.
Next Story