Top

ಈ ಬಾರಿ ಗಡಿಯಲ್ಲಿಲ್ಲ ರಂಜಾನ್ ಹಬ್ಬದ ಸಂತಸ

ಈ ಬಾರಿ ಗಡಿಯಲ್ಲಿಲ್ಲ ರಂಜಾನ್ ಹಬ್ಬದ ಸಂತಸ
X

ಜಮ್ಮು-ಕಾಶ್ಮೀರ: ಪ್ರತಿಬಾರಿ ಭಾರತದ ಗಡಿಭಾಗದಲ್ಲಿ ಪವಿತ್ರ ರಂಜಾನ್ ಹಬ್ಬದಂದು, ಭಾರತ ಮತ್ತು ಪಾಕಿಸ್ತಾನ ಸೈನಿಕರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಗಡಿಯಲ್ಲಿ ಬಡಿದಾಟವಿದ್ದರೂ, ಹಬ್ಬದ ದಿನಗಳಲ್ಲಿ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರು ಪರಸ್ಪರ ಸಿಹಿ ಹಂಚುವುದು ವಾಡಿಕೆ.

ಆದರೆ ಈ ಬಾರಿ ರಂಜಾನ್ ಹಬ್ಬಕ್ಕೆ ಭಾರತ-ಪಾಕಿಸ್ತಾನ ಸಿಹಿ ವಿನಿಯೋಗಿಸಿಕೊಳ್ಳಲಿಲ್ಲ. ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಚಂಬಲ್ ಸೆಕ್ಟರ್‌ನಲ್ಲಿ ನಾಲ್ವರು ಬಿಎಸ್‌ಎಫ್‌ ಯೋಧರ ಹತ್ಯೆಯಾದ ಕಾರಣ ಈ ಬಾರಿ ಸಿಹಿ ವಿನಿಮಯ ಮಾಡಿಕೊಳ್ಳದಿರಲು ನಿರ್ಧರಿಸಲಾಗಿತ್ತು. ಇನ್ನು ಈ ಬಾರಿ ಪಾಕಿಸ್ತಾನ ಸುಮಾರು ಒಂದು ಸಾವಿರ ಬಾರಿ ಕದನ ವಿರಾಮ ಉಲ್ಲಂಘಿಸಲಾಗಿದ್ದು, ಇವೆಲ್ಲ ಪಾಕಿಸ್ತಾನ ಉಗ್ರರನ್ನು ಭಾರತಕ್ಕೆ ನುಗ್ಗಿಸುವ ಸಂಚು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಆರೋಪಿಸಿದ್ದಾರೆ.

ಜಮ್ಮು-ಕಾಶ್ಮೀರದ ಗಡಿಭಾಗ ಮತ್ತು ಸಾಂಬಾ ಜಿಲ್ಲೆಯಲ್ಲಿ ಸುಮಾರು 40,000ಕ್ಕೂ ಹೆಚ್ಚು ಜನ ವಾಸವಾಗಿದ್ದು,ಪಾಕಿಸ್ತಾನದ ಉಗ್ರರು ಕೆಲವರ ಮನೆಗೆ ಒತ್ತಾಯವಾಗಿ ನುಗ್ಗಿ, ಗುಂಡಿನ ದಾಳಿ ನಡೆಸಿದ್ದರು.

Next Story

RELATED STORIES