Top

ಪ್ರಧಾನಿ ನಿವಾಸಕ್ಕೆ ಆಪ್ ಕಾರ್ಯಕರ್ತರ ಲಗ್ಗೆ: ದೆಹಲಿಯಲ್ಲಿ ಮುಗಿಲುಮುಟ್ಟಿದ ಹೋರಾಟ

ಪ್ರಧಾನಿ ನಿವಾಸಕ್ಕೆ ಆಪ್ ಕಾರ್ಯಕರ್ತರ ಲಗ್ಗೆ: ದೆಹಲಿಯಲ್ಲಿ ಮುಗಿಲುಮುಟ್ಟಿದ ಹೋರಾಟ
X

ಅಧಿಕಾರಿಗಳು ಪ್ರತಿಭಟನೆ ವಾಪಸ್ ಪಡೆಯಲು ಸೂಚಿಸಬೇಕು ಎಂದು ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ನಡೆಸುತ್ತಿರುವ ಹೋರಾಟ ಭಾನುವಾರ ನಾಟಕೀಯ ತಿರುವು ಪಡೆದಿದೆ.

ರಾಜ್ಯಪಾಲ ಲೆಫ್ಟಿನೆಂಟ್ ಗವರ್ನರ್ ಅವರ ನಿವಾಸದ ವಿಶ್ರಾಂತಿ ಕೋಣೆಯಲ್ಲಿ ಕೆಲವು ದಿನಗಳ ಕಾಲ ತಂಗಿದ್ದೂ ಅಲ್ಲದೇ ಉಪವಾಸ ಸತ್ಯಾಗ್ರಹ ಮಾಡಿದ್ದ ಅರವಿಂದ್ ಕೇಜ್ರಿವಾಲ್​ಗೆ ಭಾನುವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಕರ್ನಾಟಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಂತಾದವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿವಿಧ ರಾಜ್ಯಗಳ ಸಿಎಂಗಳು ರಾಜ್ಯಪಾಲರ ಭೇಟಿಗೆ ಅವಕಾಶ ಕೋರಿದ್ದರೂ ನಿರಾಕರಿಸಲಾಗಿತ್ತು. ಇದರಿಂದ ರಾಜ್ಯಪಾಲರ ನಿವಾಸಕ್ಕೆ ತೆರಳಿ ಪತ್ನಿ ಹಾಗೂ ಮಕ್ಕಳನ್ನು ಮಾತನಾಡಿ ಮರಳಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರಕಾರದ ಆಡಳಿತದಲ್ಲಿ ಕೇಂದ್ರ ಮೂಗು ತೂರಿಸುತ್ತಿದೆ ಎಂದು ಆರೋಪಿಸಿ ಆಪ್ ಮೋದಿ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಲು ನಿರ್ಧರಿಸಿತು.

ಪ್ರತಿಭಟನಾ ಮೆರಣಿಗೆ ಚುರುಕುಪಡೆಯುತ್ತಿದ್ದಂತೆ ಮೆಟ್ರೋ ಸಂಚಾರವನ್ನು ರದ್ದುಗೊಳಿಸಲಾಗಿತು. ಸಂಜೆ 6 ಗಂಟೆ ಸುಮಾರಿಗೆ ಸಾವಿರಾರು ಸಂಖ್ಯೆಯಲ್ಲಿ ಆಪ್ ಪ್ರತಿಭಟನಾಕಾರರು ಭೇಟಿಗೆ ಮೋದಿ ಅನುಮತಿ ದೊರೆಯದೇ ಇದ್ದರೂ ಪ್ರಧಾನಿ ನಿವಾಸಕ್ಕೆ ತೆರಳಿದರು.

Next Story

RELATED STORIES