Top

ಒಡಿಶಾದಲ್ಲಿ ದೋಣಿ ಮುಳುಗಿ 6 ಸಾವು: 12 ಮಂದಿ ರಕ್ಷಣೆ

ಒಡಿಶಾದಲ್ಲಿ ದೋಣಿ ಮುಳುಗಿ 6 ಸಾವು: 12 ಮಂದಿ ರಕ್ಷಣೆ
X

ಭಾರೀ ಮಳೆ, ಗಾಳಿಯಿಂದ ದೋಣಿ ಮುಳುಗಿದ ಪರಿಣಾಮ 6 ಮಂದಿ ಪ್ರವಾಸಿಗರು ಮೃತಪಟ್ಟಿರುವ ಘಟನೆ ಒಡಿಶಾದ ರಾಜಧಾನಿ ಭುವನೇಶ್ವರದ ಚಿಲಕಾ ಕರೆಯಲ್ಲಿ ಸಂಭವಿಸಿದೆ. 12 ಮಂದಿಯನ್ನು ರಕ್ಷಿಸಲಾಗಿದೆ.

ಶನಿವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಮಗು ಸೇರಿದಂತೆ ಇಬ್ಬರ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಮೃತ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಘೊಷಿಸಿದ್ದಾರೆ.

Next Story

RELATED STORIES