Top

ರೊನಾಲ್ಡೊ ಹ್ಯಾಟ್ರಿಕ್: ಸ್ಪೇನ್​ ಜೊತೆ ಪೋರ್ಚುಗಲ್ ಡ್ರಾ

ರೊನಾಲ್ಡೊ ಹ್ಯಾಟ್ರಿಕ್: ಸ್ಪೇನ್​ ಜೊತೆ ಪೋರ್ಚುಗಲ್ ಡ್ರಾ
X

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿರುವ ಕ್ರಿಸ್ಟಿಯಾನೊ ರೊನಾಲ್ಡೊ ಸಿಡಿಸಿದ ಪ್ರಸಕ್ತ ಸಾಲಿನ ಫಿಫಾ ವಿಶ್ವಕಪ್​ನ ಚೊಚ್ಚಲ ಹ್ಯಾಟ್ರಿಕ್ ನೆರವಿನಿಂದ ಪೋರ್ಚುಗಲ್ ತಂಡ 3-3 ಗೋಲುಗಳಿಂದ ಮಾಜಿ ಚಾಂಪಿಯನ್​ ಸ್ಪೇನ್ ವಿರುದ್ಧ ಸಮಬಲ ಸಾಧಿಸಿದೆ.

ಸೋಚಿಯಲ್ಲಿ ಶನಿವಾರ ಮುಂಜಾನೆ ನಡೆದ ಲೀಗ್ ಹಂತದ ಪಂದ್ಯದಲ್ಲಿ ರೊನಾಲ್ಡೊ ಮಿಂಚು ಹರಿಸಿದರು. ಇದು ದೇಶದ ಪರ ರೊನಾಲ್ಡೊ ಆಡಿದ 51ನೇ ಪಂದ್ಯದಲ್ಲಿ ಬಾರಿಸಿದ 6ನೇ ಹ್ಯಾಟ್ರಿಕ್ ಆಗಿದೆ.

ರೊನಾಲ್ಡೊ (4, 44 ಮತ್ತು 88ನೇ ನಿಮಿಷ) ಮೂರು ಗೋಲು ಸಿಡಿಸಿದರೆ, ಸ್ಪೇನ್ ಪರ ಡೀಗೊ ಕೋಸ್ಟಾ (24 ಮತ್ತು 55ನೇ ನಿಮಿಷ) 2 ಮತ್ತು ನಾಚೊ (58ನೇ ನಿಮಿಷ) ಒಂದು ಗೋಲು ಬಾರಿಸಿದರು.

Next Story

RELATED STORIES