Top

ಈ ಪಾರ್ಕ್‌ಗೆ ಬರುವವರು ರಾಷ್ಟ್ರಗೀತೆ ಹಾಡಲೇಬೇಕಂತೆ....!

ಈ ಪಾರ್ಕ್‌ಗೆ ಬರುವವರು ರಾಷ್ಟ್ರಗೀತೆ ಹಾಡಲೇಬೇಕಂತೆ....!
X

ಉತ್ತರಪ್ರದೇಶ: ಉತ್ತರಪ್ರದೇಶದ ಸಹ್ರಾನ್‌ಪುರ್ ಎಂಬಲ್ಲಿರುವ ಪಾರ್ಕ್‌ವೊಂದರಲ್ಲಿ, ವಾಯುವಿಹಾರಕ್ಕೆ ಬರುವವರು,ಯೋಗಾಭ್ಯಾಸಕ್ಕೆ ಬರುವವರೂ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ರಾಷ್ಟ್ರಗೀತೆ ಹಾಡಬೇಕೆಂಬ ನಿಯಮವಿದೆ.ಅಲ್ಲದೇ ಪಾರ್ಕಿನಲ್ಲಿ ರಾಷ್ಟ್ರಧ್ವಜವನ್ನ ಹಾರಿಸಲಾಗಿದೆ.

ಸಹ್ರಾನ್‌ಪುರ್ ಎಸ್ಪಿ ತ್ರಿಪಾಠಿ ಈ ನಿಯಮವನ್ನ ಕಾರ್ಯಗತಗೊಳಿಸಲು ಸೂಚಿಸಿದ್ದು, ಪ್ರತಿನಿತ್ಯ ಈ ಗಾರ್ಡನ್‌ಗೆ ಸಾವಿರಾರು ಜನ ಬರುತ್ತಾರೆ. ಈ ರೀತಿಯ ನಿಯಮವನ್ನು ಮಾಡುವುದರದಿಂದ, ಜನತೆಯಲ್ಲಿ ರಾಷ್ಟ್ರದ ಬಗ್ಗೆ ಗೌರವ ಹೆಚ್ಚಾಗಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಸಹ್ರಾನ್‌ಪುರದ ಈ ಗಾರ್ಡನ್‌ನಲ್ಲಿ ಜಾರಿ ಮಾಡಿರುವ ಈ ನಿಯಮ ಜನರಿಗೆ ಉತ್ತಮ ಸಂದೇಶ ನೀಡುವಲ್ಲಿ ಸಹಕಾರಿಯಾಗಿದೆ.

Next Story

RELATED STORIES