ಮೆಸ್ಸಿ ಪೆನಾಲ್ಟಿ ಮಿಸ್: ಅರ್ಜೆಂಟೀನಾಗೆ ಸಿಗದ ಜಯ

X
TV5 Kannada16 Jun 2018 3:37 PM GMT
ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೊನೆಲ್ ಮೆಸ್ಸಿ ಪೆನಾಲ್ಟಿ ಕಿಕ್ ಅವಕಾಶವನ್ನು ಕೈಚೆಲ್ಲಿದ ಪ್ರಮಾದ ಎಸಗಿದರು. ಇದರೊಂದಿಗೆ ಪ್ರಶಸ್ತಿಯ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಅರ್ಜೆಂಟೀನಾ ತಂಡ ಡ್ರಾ ಮಾಡಿಕೊಳ್ಳುವ ಮೂಲಕ ಫಿಫಾ ವಿಶ್ವಕಪ್ನಲ್ಲಿ ಗೆಲುವಿನ ಆರಂಭ ಪಡೆಯುವಲ್ಲಿ ವಿಫಲವಾಯಿತು.
ಭಾನುವಾರ ನಡೆದ ಲೀಗ್ ಪಂದ್ಯದ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 1-1 ಗೋಲಿನಿಂದ ಐಸ್ಲ್ಯಾಂಡ್ ವಿರುದ್ಧ ಡ್ರಾ ಮಾಡಿಕೊಂಡಿತು. ಗೆಲ್ಲುವಲ್ಲಿ ವಿಫಲವಾದರೂ ಐಸ್ಲ್ಯಾಂಡ್ ತಂಡ ಬಲಿಷ್ಠ ತಂಡದ ಎದುರು ಡ್ರಾ ಮಾಡಿಕೊಂಡಿದ್ದಕ್ಕಾಗಿ ಸಂಭ್ರಮಿಸಿತು.
ಅರ್ಜೆಂಟೀನಾ ತಂಡದ ಪರ ಸೆರ್ಗಿಯೊ ಅಗುರಿಯೊ (19ನೇ ನಿಮಿಷ) ಒಂದು ಗೋಲು ಸಿಡಿಸಿದರೆ, ಐಸ್ಲ್ಯಾಂಡ್ ಪರ ಅಲ್ಫ್ರೆಡ್ ಬಾಗನ್ಸನ್ (23ನೇ ನಿಮಿಷ) ಒಂದು ಗೋಲು ಬಾರಿಸಿದರು.
Next Story