ಫಿಫಾ ವಿಶ್ವಕಪ್: ಫ್ರಾನ್ಸ್ಗೆ ಮಣಿದ ಆಸ್ಟ್ರೇಲಿಯಾ

X
TV5 Kannada16 Jun 2018 12:39 PM GMT
ಜಿದ್ದಾಜಿದ್ದಿನ ಕಾಳಗದಲ್ಲಿ ಕೊನೆಯ ಹಂತದಲ್ಲಿ ತನ್ನ ಕಾಲ್ಚಳಕ ತೋರಿದ ಪಾಲ್ ಪೋಗ್ಬಾ ಸಿಡಿಸಿದ ಗೋಲಿನ ನೆರವಿನಿಂದ ಫ್ರಾನ್ಸ್ ತಂಡ 2-1 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯಿತು.
ಕಜಾನ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್ ಪರ ಆ್ಯಂಟೊನಿ ಗ್ರಿಸ್ಮನ್ (58ನೇ ನಿಮಿಷ) ಮತ್ತು ಪಾಲ್ ಪೋಗ್ಬಾ (81ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರೆ, ಆಸ್ಟ್ರೇಲಿಯಾ ಪರ ಮಿಲೆ ಜೆಡಿನೆಕ್ (62ನೇ ನಿಮಿಷ) ತಂಡದ ಪರ ಫ್ರಿಕಿಕ್ನಲ್ಲಿ ಏಕೈಕ ಗೋಲು ದಾಖಲಿಸಿದರು.
ಪಂದ್ಯದುದ್ದಕ್ಕೂ ಎರಡೂ ತಂಡಗಳು ಜಿದ್ದಾಜಿದ್ದಿನ ಕಾಳಗ ನಡೆಸಿದವು. ದೀರ್ಘ ಪಾಸ್ಗಳ ಮೂಲಕ ಗಮನ ಸೆಳೆಯಿತು. ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿರುವಾಗ ಪೋಗ್ಬಾ ಎದುರಾಳಿಯ ಕೋಟೆ ಭೇದಿಸಿದ್ದು ಅಲ್ಲದೇ, ಮೇಲಿನಿಂದ ಬಾರಿಸಿದ ಚೆಂಡು ಗೋಲು ಕಂಬಕ್ಕೆ ಬಡಿದು ಗೆರೆಯ ಒಳಗೆ ಪುಟಿದು ಹೊರಬಂದಿತು. ಇದರಿಂದ ಅದ್ಭುತವಾದ ಗೋಲಿನೊಂದಿಗೆ ಫ್ರಾನ್ಸ್ ಗೆಲುವಿನ ಸಂಭ್ರಮ ಆಚರಿಸಿತು.
Next Story