Top

ಸೆಲ್ಫಿ ಕೇಳಿದ ದಿನಕರ್​ಗೆ ದಚ್ಚು ಬುದ್ಧಿ ಮಾತು!

ಸೆಲ್ಫಿ ಕೇಳಿದ ದಿನಕರ್​ಗೆ ದಚ್ಚು ಬುದ್ಧಿ ಮಾತು!
X

ಶ್ರೀಧರ್ ಶಿವಮೊಗ್ಗ, TV5

[story-lines]

ಸ್ಯಾಂಡಲ್​ವುಡ್​ನ 6 ಅಡಿ 26 ಇಂಚಿನ ಅಜಾನು ಬಾಹು ದರ್ಶನ್, ನೇರ ನಿಷ್ಠೂರವಾದಿ. ತನಗನಿಸಿದ್ದನ್ನ ಫಟ್ ​ಅಂತ ಹೇಳಿ ಬಿಡುವ ಸ್ಟ್ರೈರ್ಟ್ ಫಾರ್ವಡ್​. ಅದೆಷ್ಟು ಜನರಿಗೆ ತಮ್ಮ ಅನುಭವದ ಅನುಸಾರ ಪಬ್ಲಿಕ್ ಪ್ಲೇಸ್​ನಲ್ಲೇ ಬುದ್ಧಿವಾದವನ್ನು ಹೇಳಿ ಬಿಡುತ್ತಾರೆ. ಇಷ್ಟು ದಿನ ಹಿತೈಶಿಗಳಿಗೆ , ಸ್ನೇಹಿತರಿಗೆ ಬುದ್ಧಿಮಾತು ಹೇಳುತ್ತಿದ್ದ ದರ್ಶನ್ ಈಗ ತಮ್ಮ ಒಡಹುಟ್ಟಿದ ಸಹೋದರ ದಿನಕರ್ ತೂಗುದೀಪ್​ರವರಿಗೆ ಬುದ್ಧಿಮಾತು ಹೇಳಿದ್ದಾರೆ. ಎಲ್ಲಿ ಅಂದ್ರಾ , ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ಆಡಿಯೋ ಲಾಂಚಿಂಗ್ ಪ್ರೋಗ್ರಾಮ್​ನಲ್ಲಿ.

ಲೈಫ್ ಜೊತೆ ಒಂದು ಸೆಲ್ಫಿ ಚಿತ್ರ ಕಳೆದ ವರ್ಷ ಸೆಟ್ಟೇರಿತ್ತು. ಇದು ದಿನಕರ್ ತೂಗುದೀಪ್ರವರ ನಾಲ್ಕನೆ ಕನಸಿನ ಸಿನಿಮಾ. ಸಾರಥಿ ಸಿನಿಮಾವಾದ ಮೇಲೆ ದಿನಕರ್ ತೂಗುದೀಪ್ ಡೈರೆಕ್ಟರ್ ಸೀಟ್​ನಲ್ಲಿ ಕುರುವಂತೆ ಮಾಡಿದ ಸಿನಿಮಾವೇ ಲೈಫ್ ಜೊತೆ ಒಂದು ಸೆಲ್ಫಿ.

ಕೊನೆಗೂ ಒಂದು ಘಟ್ಟಕ್ಕೆ ಬಂದಿದೆ ದಿನಕರ್ ಕಲ್ಪನೆಯ ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾ. ನಾವು ರಿಲೀಸ್‌ಗೆ ರೆಡಿ ಇದ್ದೇವೆ , ಚಿತ್ರರಸಿಕರಿಗೆ ಭರಪೂರ ಮನೋರಂಜನೆ ಕೊಡಲಿದ್ದೇವೆ ಅನ್ನೋ ಸಂದೇಶವನ್ನ ಚಿತ್ರತಂಡ ಟ್ರೈಲರ್ ಮತ್ತು ಸಾಂಗ್ಸ್​ ಮೂಲಕ ಸಾರಿದೆ. ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್ ಹಾಗೂ ಹರಿಪ್ರಿಯಾ , ದಿನಕರ್ ಸೆಲ್ಫಿಯಲ್ಲಿ ಸೆರೆಯಾಗಿರುವ ಮುಖ್ಯ ಪಾತ್ರಗಳು. ಇವರ ಜೊತೆಗೆ ಸುಧಾರಾಣಿ , ಸಾಧು ಕೋಕಿಲಾ ಸೇರಿದಂತೆ ಅನೇಕ ಕಲಾವಿದರು ಸೆಲ್ಫಿಯ ಒಂದು ಭಾಗವಾಗಿದ್ದಾರೆ. ಒಂದು ಸಿನಿಮಾ ಟ್ರೈಲರ್​​ನಲ್ಲಿ ಯಾವೆಲ್ಲ ಇಂಟ್ರೆಸ್ಟಿಂಗ್ ಅಂಶಗಳು ಇರಬೇಕೋ ಎಲ್ಲವೂ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ಮುನ್ನೋಟದಲ್ಲಿ ಅಡಗಿವೆ. ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಟಾಪ್ ಟ್ರೇಡಿಂಗ್​ನಲ್ಲಿ ರಾರಾಜೀಸುತ್ತಿದೆ ಟ್ರೈಲರ್.

ದಿನಕರ್ ತೂಗುದೀಪ್ ನಿರ್ದೇಶನದ ವಿಚಾರದಲ್ಲಿ ಪರಿಪಕ್ವ ವ್ಯಕ್ತಿ. ಕಥೆ ಮನಸ್ಸಿಗೆ ಇಷ್ಟವಾದ್ರೆ ಮಾತ್ರ ಡೈರೆಕ್ಟರ್ ಚೇರ್​ನಲ್ಲಿ ಕುರೋದು. ಅದಕ್ಕೆ ಸಾರಥಿ ಚಿತ್ರವಾದ ಮೇಲೆ ,7 ವರ್ಷದ ನಂತರ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರತಂಡದ ಕ್ಯಾಪ್ಟನ್ ಆಫ್ ದಿ ಶಿಪ್ ಆಗಿದ್ದು. ಇಷ್ಟೋಂದು ಗ್ಯಾಪ್ ತೆಗೆದು ಕೊಳ್ಳಬೇಡ. ವರ್ಷಕ್ಕೊಂದು ಸಿನಿಮಾ ಮಾಡಪ್ಪ ಎಂದು ಪ್ರೀತಿಯಿಂದ ಬುದ್ಧಿವಾದ ಹೇಳಿದ್ದಾರೆ.

ಸಮೃದ್ಧಿ ಮಂಜುನಾಥ್ ನಿರ್ಮಾಣದಲ್ಲಿ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರ ಮೂಡಿಬಂದಿದೆ.. ಚಿತ್ರದ ಬಹುತೇಕ ಎಲ್ಲಾ ಕೆಲಸಗಳು ಮುಗಿದ್ದಿದ್ದು , ಮುಂದಿನ ತಿಂಗಳು ಪ್ರೇಕ್ಷಕರ ಕಣ್ಣಲ್ಲಿ ದಿನಕರ್ ಲೈಫ್ ಜೊತೆ ಒಂದು ಸೆಲ್ಫಿ ಸೆರೆಯಾಗಲಿದೆ..

Next Story

RELATED STORIES