Top

ಕೊನೆಗೂ ಕೆಜಿಎಫ್ ರಿಲೀಸ್ ಮಂಥ್ ಫಿಕ್ಸ್..!

ಕೊನೆಗೂ ಕೆಜಿಎಫ್ ರಿಲೀಸ್ ಮಂಥ್ ಫಿಕ್ಸ್..!
X

ಅರ್ಚನಾ ಶರ್ಮಾ, ಟಿವಿ5

ರಾಕಿಂಗ್​ ಸ್ಟಾರ್​ನ ಸತತ ಎರಡು ವರ್ಷಗಳ ಶ್ರಮ ಕೆಜಿಎಫ್​ ಸಿನಿಮಾ. ಬಾಲಿವುಡ್​ ರೇಂಜ್​ನಲ್ಲಿ ನಿರ್ಮಾಣವಾಗ್ತಿರೋ ಅಪ್ಪಟ ಕನ್ನಡ ಸಿನಿಮಾ. ನಿರ್ದೇಶಕ ಪ್ರಶಾಂತ್ ನೀಲ್ ಕಟ್ಟಿಕೊಡ್ತಿರೋ ಮತ್ತೊಂದು ಮಾಸ್ ಎಂಟ್ರಟ್ರೈನರ್.ಕನ್ನಡ ಚಿತ್ರರಂಗದ ಬಹುಕೋಟಿ ವೆಚ್ಚದ ಚಿತ್ರ . 5 ಭಾಷೆಗಳಲ್ಲಿ ತಯಾರಾಗ್ತಿರೋ ಈ ಚಿತ್ರ ಅಂತೂ ಇಂತೂ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಈ ಸಿನಿಮಾ ಯಾವಾಗ ರಿಲೀಸ್​ ಆಗುತ್ತೆ ಅಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಕೆಜಿಎಫ್​ ಸಿನಿಮಾ ಅವಾಗ ರಿಲಿಸ್​ ಆಗುತ್ತೆ, ಇವಾಗ ರಿಲೀಸ್​ ಆಗುತ್ತೆ ಅಂತ ಸಾಕಷ್ಡು ಡೇಟ್​ಗಳು ಬಂದು ಹೋದ್ವು. ಇದೀಗ ಕೆಜಿಎಫ್​ ಬಿಡುಗಡೆಗೆ ದಿನಾಂಕವಲ್ಲದಿದ್ರೂ ಪಕ್ಕಾ ತಿಂಗಳಾವುದು ಅನ್ನೋದು ಫಿಕ್ಸ್​ ಆಗಿದೆ. ಯೆಸ್​ ಡಿಸೆಂಬರ್ ತಿಂಗಳಿಗೆ ಕೆಜಿಎಫ್​ ತೆರೆಗೆ ಬರಲಿದೆ. ಈಗಾಗ್ಲೇ ಗೊತ್ತಿರೋ ಹಾಗೇ ಡಿಸೆಂಬರ್​ ಮಂಥ್​ ಯಶ್​ಗೆ ಲಕ್ಕಿ .ಡಿಸೆಂಬರ್ 25, 2014 ರಲ್ಲಿ ತೆರೆಕಂಡ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸೂಪರ್​ ಹಿಟ್ ಆಗಿತ್ತು. ಆ ನಂತ್ರ 2015 ಡಿಸೆಂಬರ್ 24 ರಂದು ತೆರೆಕಂಡ ಮಾಸ್ಟರ್ ಪೀಸ್​ ಕೂಡ ದೊಡ್ಡ ಸುದ್ದಿ ಮಾಡಿತ್ತು. ಅಷ್ಟೇ ಯಾಕೆ ಡಿಸೆಂಬರ್ ತಿಂಗಳಲ್ಲೇ ಯಶ್ ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಹಾಗಾಗಿ ಇದೇ ಡಿಸೆಂಬರ್‌ನಲ್ಲಿ ಕೆಜಿಎಫ್​ಗೂ ರಿಲಿಸ್​ ಭಾಗ್ಯ ಕೂಡಿ ಬಂದಿದೆ.

ಕೆಜಿಎಫ್​ ಚಿತ್ರ ರಿಲೀಸ್​ ಡೇಟ್​ ಏನೋ ಕನ್ಫರ್ಮ್ ಆಗಿದೆ. ಹಾಗಾದ್ರೆ ಯಶ್​ ನೆಕ್ಸ್ಟ್ ವೆಂಚರ್ ಯಾವುದು ಅನ್ನೋ ಕ್ಯೂರಿಯಾಸಿಟಿ ಅಂತೂ ಇದ್ದೇ ಇದೆ. ಯಶ್​ಗೆ ಸಿನಿಮಾ ಮಾಡೋಕ್ಕೆ ಸಾಕಷ್ಟು ನಿರ್ದೇಶಕರು ರೆಡಿಯಿದ್ದು, ಕೆಜಿಎಫ್​ ಮುಗಿಲಿ ಅಂತ ಕಾಯ್ತಾ ಇದ್ರು. ಇದೀಗ ಎಲ್ಲಾ ನಿರ್ದೇಶಕರು ಆ್ಯಕ್ಟಿವ್​ ಆಗಿ, ಯಶ್​ ಕಾಲ್​ಶೀಟ್​ಗೆ ವೆಯ್ಟ್ ಮಾಡ್ತಿದ್ದಾರೆ.

ಈಗಾಗ್ಲೇ ಯಶ್​ಗೆ ಸಿನಿಮಾ ಮಾಡೋಕ್ಕೆ ಸಾಕಷ್ಟು ನಿರ್ದೇಶಕರು ರೆಡಿಯಿದ್ದು, ಸದ್ಯ ಮೂವರು ನಿರ್ದೇಶಕರು ರೇಸ್​ನಲ್ಲಿದ್ದಾರೆ. ಅವ್ರಲ್ಲಿ ನಿರ್ದೇಶಕ ಹರ್ಷ, ಮಫ್ತಿ ಖ್ಯಾತಿಯ ನರ್ತನ್, ರ್ಯಾಂಬೋ 2 ಖ್ಯಾತಿಯ ಅನಿಲ್​ ಹೆಸರುಗಳು ಕೇಳಿಬಂದಿದೆ. ಈಗಾಗ್ಲೇ ಹರ್ಷ ಯಶ್ ಚಿತ್ರಕ್ಕೆ ರಾಣಾ ಅಂತ ಟೈಟಲ್​ ಕೂಡ ಫೀಕ್ಸ್​ ಮಾಡಿದ್ದು, ಕಥೆ ಕೂಡ ರೆಡಿಯಿದೆ. ಇನ್ನು ನರ್ತನ್​ ಮತ್ತು ಅನಿಲ್​ ಕೂಡ ಸ್ಕ್ರಿಪ್ಟ್ ರೆಡಿ ಇಟ್ಕೊಂಡಿದ್ದು, ಟೈಟಲ್​ ಇನ್ನಷ್ಟೇ ಫೈನಲ್ ಆಗ್ಬೇಕಿದೆ.

ಸದ್ಯ ನಿರ್ದೆಶಕ ಹರ್ಷ ನಿಖಿಲ್​ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಬ್ಯುಸಿಯಿರೋದ್ರಿಂದ , ಯಶ್​ ನೆಕ್ಸ್ಟ್ ಕಾಲ್​ಶೀಟ್​ ನರ್ತನ್​ ಕೈ ಸೇರಲಿದೆ ಅಂತಿವೆ ಮೂಲಗಳು. ಇದಾದ ನಂತರ ಹರ್ಷ ಮತ್ತು ಅನಿಲ್​ ಚಿತ್ರಗಳು ಟೇಕಾಫ್​ ಆಗೋ ಸಾಧ್ಯತೆಯಿದ್ದು , ಮೂವರಲ್ಲಿ ಮೊದಲಿಗನ್ಯಾರು ಎಂದು ಜೋತಿಷ್ಯ ಕೇಳುವಂತಾಗಿದೆ.

ಒಟ್ನಲ್ಲಿ ಯಶ್​ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಮಿಂಚೋಕ್ಕೆ ರೆಡಿಯಾಗಿದ್ದು, ಕೆಜಿಎಫ್​ ನಂತ್ರ ಮತ್ಯಾವ ಗೆಟಪ್​ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಅನ್ನೋ ಕುತೂಹಲವಂತೂ ಇದ್ದೇ ಇದೆ.

Next Story

RELATED STORIES