Top

ಕೊನೆ ಕ್ಷಣದಲ್ಲಿ ಗಿಮೆನ್ಜ್​ ಗೋಲು: ಉರುಗ್ವೆಗೆ ಮಣಿದ ಈಜಿಪ್ಟ್​

ಕೊನೆ ಕ್ಷಣದಲ್ಲಿ ಗಿಮೆನ್ಜ್​ ಗೋಲು: ಉರುಗ್ವೆಗೆ ಮಣಿದ ಈಜಿಪ್ಟ್​
X

ರಕ್ಷಣಾ ಆಟಗಾರ ಜೋಸ್​ ಗಿಮೆನ್ಜ್ ಪಂದ್ಯ ಮುಕ್ತಾಯದ ಕೊನೆಯ ಕ್ಷಣದಲ್ಲಿ ಸಿಡಿಸಿದ ಏಕೈಕ ಗೋಲಿನಿಂದ ಉರುಗ್ವೆ ತಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗೆಲುವಿನ ಆರಂಭ ಪಡೆದಿದೆ.

ಶುಕ್ರವಾರ ನಡೆದ ಪಂದ್ಯದ 89ನೇ ನಿಮಿಷದಲ್ಲಿ ಜೋಸ್ ಗಿಮೆನ್ಜ್ ಗೋಲು ಬಾರಿಸಿದರು. ಗೋಲು ಕಂಬದ ಬದಿಯಲ್ಲಿ ದೊರೆತ ಫ್ರೀಕಿಕ್​ನಲ್ಲಿ ಎಡಿಸನ್ ಕವಾನಿ ಬಾರಿಸಿದ ಚೆಂಡನ್ನು ಗಿಮೆನ್ಜ್ ಹೆಡ್ ಮಾಡುವ ಮೂಲಕ ತಂಡಕ್ಕೆ ಅತ್ಯಗತ್ಯವಾಗಿದ್ದ ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಈಜಿಪ್ಟ್​ಗೆ ಕನಿಷ್ಠ ಡ್ರಾ ಮಾಡಿಕೊಳ್ಳುವ ಅವಕಾಶವೂ ತಪ್ಪಿತು.

ಇಡೀ ಪಂದ್ಯ ಸಮಬಲದಲ್ಲಿ ಕೂಡಿತ್ತು. ಈಜಿಪ್ಟ್ ಮತ್ತು ಉರುಗ್ವೆ ತಂಡಗಳು ರಕ್ಷಣೆ ಜೊತೆಗೆ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರಿಂದ ಯಾವುದೇ ಗೋಲು ದಾಖಲಾಗಿರಲಿಲ್ಲ

Next Story

RELATED STORIES