Top

ಹಿಂದು ಮಹಿಳೆಗಾಗಿ ರಂಜಾನ್ ಉಪವಾಸ ಕೈಬಿಟ್ಟ ಯೋಧರು..!

ಹಿಂದು ಮಹಿಳೆಗಾಗಿ ರಂಜಾನ್ ಉಪವಾಸ ಕೈಬಿಟ್ಟ ಯೋಧರು..!
X

[story-lines]

ಜಮ್ಮು-ಕಾಶ್ಮೀರ: ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆ ಸಾರುವ ರಾಷ್ಟ್ರವೆಂದೇ ಪ್ರಸಿದ್ಧ. ಇಲ್ಲಿನ ಭಾಷೆಯಲ್ಲಿ, ಧರ್ಮದಲ್ಲಿ, ಆಚರಣೆಯಲ್ಲಿ ವೈವಿಧ್ಯತೆ ಇದೆ. ಎಲ್ಲ ಜಾತಿ, ಧರ್ಮದವರಿಗೂ ಸಮಬಾಳು ಸಮಪಾಲು ಕೊಟ್ಟ ದೇಶ ಭಾರತ.ಆದರೆ ಇತ್ತೀಚೆಗೆ ಭಾರತದಲ್ಲಿ ಧರ್ಮ ಯುದ್ಧ, ಕೋಮುವಾದ ಸೃಷ್ಟಿಯಾಗಿ,ಜನಗಳು ತಮ್ಮ ತಮ್ಮ ಮಧ್ಯೆಯೇ ಜಗಳವಾಡಿಕೊಳ್ಳುವಂತಾಗಿದೆ.

ಆದರೆ ಮಾನವೀಯತೆ ಎಂಬುವುದು ಎಲ್ಲ ಜಾತಿ ಧರ್ಮಕ್ಕಿಂತ ಮೇಲೂ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ . ಜಮ್ಮು-ಕಾಶ್ಮೀರದಲ್ಲಿ ಯೋಧರು ತಮ್ಮ ರಂಜಾನ್ ಉಪವಾಸವನ್ನು ಬಿಟ್ಟು, ಕ್ಯಾನ್ಸರ್ ಪೀಡಿತ ಮಹಿಳೆಗೆ ರಕ್ತದಾನ ಮಾಡಿದ್ದಾರೆ.

ಕಿಶ್ತ್ವಾರ್ ನಿವಾಸಿಯಾದ ಅನಿಲ್ ಸಿಂಗ್ ತಮ್ಮ ಸಹೋದರಿ ಪೂಜಾ ದೇವಿ ಎಂಬುವರಿಗೆ ರಕ್ತದ ಅವಶ್ಯಕತೆ ಇದೆ ಎಂದಾಗ, ಪವಿತ್ರ ರಂಜಾನ್ ಉಪವಾಸದಲ್ಲಿದ್ದ ಸಿಆರ್‌ಪಿಎಫ್‌ ಯೋಧರಾದ ಮುದಸ್ಸಿರ್ ರಸೂಲ್ ಭಟ್ ಮತ್ತು ಮೊಹಮ್ಮದ್ ಅಸ್ಲಾಮ್ ಮೀರ್ ಎಂಬುವರು ತಮ್ಮ ಉಪವಾಸವನ್ನು ಮೊಟಕುಗೊಳಿಸಿ, ಮಹಿಳೆಗೆ ರಕ್ತದಾನ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಹಿಂದು ಬಾಲಕನಿಗಾಗಿ ಮುಸ್ಲಿಂ ಯುವಕ ಉಪವಾಸ ತ್ಯಜಿಸಿ, ರಕ್ತದಾನ ಮಾಡಿ, ಆತನ ಜೀವ ಉಳಿಸಿದ್ದ.ಈ ಮೂಲಕ ಇವರೆಲ್ಲ, ಧರ್ಮಕ್ಕಿಂತ ಮಾನವೀಯತೆ ಎಂಬುದು ಮೇಲು ಎಂಬುದನ್ನ ಸಾಬೀತುಪಡಿಸಿದ್ದಾರೆ.

Next Story

RELATED STORIES