Top

ರಾಜ್ಯಪಾಲರ ನಿವಾಸಕ್ಕೆ 5 ಆ್ಯಂಬುಲೆನ್ಸ್​: ಕ್ರೇಜಿವಾಲ್ ಪ್ರತಿಭಟನೆಗೆ ಹೊಸ ತಿರುವು?

ರಾಜ್ಯಪಾಲರ ನಿವಾಸಕ್ಕೆ 5 ಆ್ಯಂಬುಲೆನ್ಸ್​: ಕ್ರೇಜಿವಾಲ್ ಪ್ರತಿಭಟನೆಗೆ ಹೊಸ ತಿರುವು?
X

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಭೈಜಾಲ್ ಅವರ ನಿವಾಸಕ್ಕೆ 5 ಆ್ಯಂಬುಲೆನ್ಸ್​ಗಳು ದೌಡಾಯಿಸಿವೆ. ಇದರೊಂದಿಗೆ ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಮೂವರು ಸಚಿವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಪ್ರತಿಭಟನೆಗೆ ಹೊಸ ತಿರುವು ಲಭಿಸಿದೆ.

ಅಧಿಕಾರಿ ವರ್ಗ ಸಹಕರಿಸದೇ ನಡೆಸುತ್ತಿರುವ ಮುಷ್ಕರವನ್ನು ವಾಪಸ್ ಪಡೆಯಲು ಸೂಚಿಸಬೇಕು ಎಂದು ಆಗ್ರಹಿಸಿ ರಾಜ್ಯಪಾಲರ ವಿಶ್ರಾಂತಿ ಗೃಹದಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಹಿಂದೆ ಪಡೆಯುವ ಸಾಧ್ಯತೆ ಇಲ್ಲದೇ ಇರುವುದರಿಂದ ಹಾಗೂ ಅವರ ಆರೋಗ್ಯದ ಪರಿಸ್ಥಿತಿ ಗಮನಿಸಿ ವೈದ್ಯರು ಆಗಮಿಸಿ ಪರೀಕ್ಷೆ ನಡೆಸಿದ್ದಾರೆ. ಇದೇ ವೇಳೆ 5 ಆ್ಯಂಬುಲೆನ್ಸ್​ಗಳನ್ನು ಕರೆಸಲಾಗಿದ್ದು, ರಾಜ್ಯಪಾಲರು ಈ ಮೂವರನ್ನು ಹೊರಗೆ ಹಾಕುವ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Next Story

RELATED STORIES