Top

ಕಿಚ್ಚನ ಫ್ಯಾನ್ಸ್​ಗಳಿಗೆ ಕಾದಿದೆ ಮನೋರಂಜನೆಯ ಹಬ್ಬ

ಕಿಚ್ಚನ ಫ್ಯಾನ್ಸ್​ಗಳಿಗೆ ಕಾದಿದೆ ಮನೋರಂಜನೆಯ ಹಬ್ಬ
X

ಶ್ರೀಧರ್ ಶಿವಮೊಗ್ಗ, TV5

ಸ್ಯಾಂಡಲ್​ವುಡ್ ಕಲಾದೀಪ , ಅಭಿಮಾನಿಗಳ ನೆಚ್ಚಿನ ಸುದೀಪ್ ಮತ್ತೆ ಕೋಟಿಗೊಬ್ಬನ ಅವತಾರವೆತ್ತಿರುವುದು ನಿಮಗೆಲ್ಲ ಗೊತ್ತೆ ಇದೆ. ಸಾಹಸ ಸಿಂಹ ವಿಷ್ಣುವರ್ಧನ್ ಅಗಲಿದ ನಂತರ ಕೋಟ್ಯಾಂತರ ಅಭಿಮಾನಿಗಳು ಸುದೀಪ್​ ಅಭಿನಯದಲ್ಲಿ ವಿಷ್ಣುರನ್ನು ಕಾಣುತ್ತಿದ್ದಾರೆ. ಅದರಂತೆ ಕಿಚ್ಚ ಸುದೀಪ್ ಕೂಡ ವಿಷ್ಣುವರ್ಧನ್​ರವನ್ನು ನೆನಪಿಸುವ ಹೆಸರಿನಲ್ಲೇ ಸಿನಿಮಾಗಳನ್ನ ಮಾಡುತ್ತ ಬಂದಿದ್ದಾರೆ .. ಈಗ ಕೋಟಿಗೋಬ್ಬ-3 ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದು ಭಾರಿ ನಿರೀಕ್ಷೆ ಮೂಡಿಸಿದೆ.

ಸದ್ಯ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಕೋಟಿಗೊಬ್ಬ ಚಿತ್ರದ ಶೂಟಿಂಗ್​ಗಾಗಿ ಸರ್ಬಿಯಾ ದೇಶಕ್ಕೆ ಹಾರಿದ್ದಾರೆ. ಸರ್ಬಿಯಾ ದೇಶಕ್ಕೆ ಹಾರೋದೇನೋ ಹಾರಿದ್ರು. ಆದ್ರೆ ಅಭಿಮಾನಿಗಳ ತಲೆಗೆ ಕೂತುಹಲದ ಎರೆಹುಳು ಬಿಟ್ಟು ಹೋಗಿದ್ದಾರೆ. ‘ಶಿವನನ್ನು ಮರುಸೃಷ್ಟಿಸಲು ಸತ್ಯನಿಗೆ ಮತ್ತೆ ಸಮಯ ಕೂಡಿಬಂದಿದೆ’.. ಎಂದು ಚಿತ್ರದ ಕುತೂಹಲದ ಎಳೆಯನ್ನು ಬಿಚ್ಚಿಟ್ಟಿದ್ದಾರೆ.

ವಿಷ್ಣುವರ್ಧನ್ ನಟನೆಯ ಕೋಟಿಗೊಬ್ಬ ಒಂದು ರೀತಿಯ ಕಥೆಯಾದ್ರೆ , ಕಿಚ್ಚ ನಟನೆಯ ಕೋಟಿಗೊಬ್ಬ-2 ಮತ್ತೊಂದು ರೀತಿ. ಎರಡು ಚಿತ್ರದಲ್ಲಿ ಒಬ್ಬನೇ ಎರಡು ಪಾತ್ರವನ್ನು ಸಂದರ್ಭಕ್ಕೆ ತಕ್ಕಂತೆ ನಿಭಾಯಿಸುತ್ತಾನೆ. ಸತ್ಯ ಮತ್ತು ಶಿವ ಅನ್ನೊ ಎರಡು ಪಾತ್ರದ ಭಿನ್ನತೆಯನ್ನು ನೋಡುವುದೇ ಒಂದು ಮಜಾ. ಕೋಟಿಗೊಬ್ಬ-2 ಚಿತ್ರವನ್ನು ಕೆ.ಎಸ್.ರವಿಕುಮಾರ್ ನಿರ್ದೇಶಿಸಿದ್ರು. ಈಗ ಕೋಟಿಗೊಬ್ಬ-3 ಚಿತ್ರಕ್ಕೆ ಸುದೀಪ್ ಕಥೆ ಬರೆದ್ರೆ, ಶಿವಕಾರ್ತಿಕ್​ ನಿರ್ದೇಶಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಸಿನಿಮಾದಲ್ಲಿಯೂ ಸತ್ಯ-ಶಿವನ ಜುಗಲ್ ಬಂದಿ ಮುಂದುವರೆಯುವ ಸಾಧ್ಯತೆ ಇದೆ.

2016ರಲ್ಲಿ ತೆರೆಕಂಡ ಕೋಟಿಗೊಬ್ಬ-2 ಚಿತ್ರ ಬಾಕ್ಸಾಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈಗ 3ನೇ ಕೋಟಿಗೊಬ್ಬನ ಮೇಲೆಯೂ ಬೆಟ್ಟದಷ್ಟು ನಿರೀಕ್ಷೆಗಳಿವೆ. ಆದ್ರಲ್ಲಿಗ ಕಿಚ್ಚನ ಟ್ವೀಟ್​ ನೂತನ ಕೋಟಿಗೊಬ್ಬನ ಮೇಲೆ ನಿರೀಕ್ಷೆಯ ಕಿಚ್ಚು ಹೆಚ್ಚಾಗುವಂತೆ ಮಾಡಿದೆ.

Next Story

RELATED STORIES