Top

ಕಾಣೆಯಾಗಿದ್ದ ಯೋಧ ಶವವಾಗಿ ಪತ್ತೆ

ಕಾಣೆಯಾಗಿದ್ದ ಯೋಧ ಶವವಾಗಿ ಪತ್ತೆ
X

ಜಮ್ಮು-ಕಾಶ್ಮೀರ: ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಿಂದ ಕಾಣೆಯಾಗಿದ್ದ ಭಾರತೀಯ ಯೋಧ ಔರಂಗಜೇಬ್ ಶವ ಪತ್ತೆಯಾಗಿದೆ. ಉಗ್ರರು ಈತನನ್ನು ಅಪಹರಿಸಿ, ಗುಂಡಿಕ್ಕಿ ಕೊಂದಿದ್ದಾರೆಂಬ ಮಾಹಿತಿ ಇದೆ.

ಮಾಹಿತಿ ಪ್ರಕಾರ, ಯೋಧ ಔರಂಗಜೇಬ್ ದೇಹದಲ್ಲಿ ಬರೋಬ್ಬರಿ 15 ಬುಲೆಟ್ ಸಿಕ್ಕಿದೆ. ಔರಂಗಜೇಬ್ ಮೂಲತಃ ಪೂಂಚ್ ನಿವಾಸಿಯಾಗಿದ್ದು, ಈತನನ್ನು ಶೋಫಿಯಾನ್ ಗೆ ವರ್ಗಾಯಿಸಲಾಗಿತ್ತು. ಈ ವೇಳೆ ಟ್ಯಾಕ್ಸಿ ಹಿಡಿದು ತೆರಳುವ ಸಮಯದಲ್ಲಿ ಆತ ಕಾಣೆಯಾಗಿದ್ದ.ಮಾರ್ಗಮಧ್ಯೆ ಉಗ್ರರು ಈತನನ್ನು ಅಪಹರಿಸಿದ್ದರು.

ಔರಂಗಜೇಬ್ ನನ್ನು ಯಾವ ಕಾರಣಕ್ಕೆ ಅಪಹರಿಸಿ ಕೊಲ್ಲಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈತ ಸೈನ್ಯಾಧಿಕಾರಿಗಳಿಗೆ ನಿಕಟವಾಗಿದ್ದ, ಇವನನ್ನೊಳಗೊಂಡಿದ್ದ ಸೈನ್ಯ ಹಿಜ್ಬುಲ್ ಉಗ್ರನನ್ನು ಗುಂಡಿಕ್ಕಿ ಕೊಂದಿತ್ತು. ಇದರ ಸೇಡಿಗಾಗಿ ಉಗ್ರರು ಈ ರೀತಿ ಮಾಡಿದ್ದಾರೆಂದು ಶಂಕಿಸಲಾಗಿದೆ.

ಇನ್ನು ಔರಂಗಜೇಬ್ ನ ಕುಟುಂಬದಲ್ಲಿ ಹೆಚ್ಚಿನವರು ದೇಶ ಸೇವೆಗಾಗಿ ದುಡಿದಿದ್ದಾರೆ. ಈತನ ತಂದೆಯೂ ಕೂಡ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈತನ ಚಿಕ್ಕಪ್ಪ 2004ರಲ್ಲಿ ಉಗ್ರರೊಂದಿಗೆ ಹೋರಾಡಿ ಪ್ರಾಣತ್ಯಾಗ ಮಾಡಿದ್ದರು. ಇನ್ನು ಈತನ ಸಹೋದರ ಕೂಡ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.

Next Story

RELATED STORIES