ಟೀಂ ಇಂಡಿಯಾ 474 ರನ್ಗೆ ಆಲೌಟ್

X
TV5 Kannada15 Jun 2018 8:17 AM GMT
ಬೆಂಗಳೂರು : ಹಾರ್ದಿಕ್ ಪಾಂಡ್ಯ ಅವರ ಅರ್ಧ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 474 ರನ್ ಕಲೆ ಹಾಕಿದೆ.
ಪಂದ್ಯದ ಎರಡನೇ ದಿನವಾದ ಶುಕ್ರವಾರ ಮೊದಲ ಇನಿಂಗ್ಸ್ ಮುಂದುವರಿಸಿದ ಹಾರ್ದಿಕ್ ಪಾಂಡ್ಯ (71) ಅರ್ಧ ಶತಕ ಬಾರಿಸಿ ಸಂಭ್ರಮಿಸಿದರು. ಅಶ್ವಿನ್ (18), ರವೀಂದ್ರ ಜಡೇಜಾ (20), ಇಶಾಂತ್ ಶರ್ಮಾ (8) ಮತ್ತು ಉಮೇಶ್ ಯಾದವ್ ಅಜೇಯ 26 ರನ್ ಬಾರಿಸಿದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ತಂಡ ವೇಗಿಗಳ ದಾಳಿಗೆ ನಲುಗಿ ಹೋಯಿತು. ಮೊಹ್ಮದ್ ಶೆಹಜಾದ್ 14, ಜಾವೇದ್ ಅಹಮದಿ 1, ರೆಹಮತ್ ಶಾ , ಅಫ್ಸರ್ ಝಜಾಯ್ 6, ಹಶಮುತ್ ಉಲ್ಲಾ ಶಾಹೀದ್ 11 , ಅಸ್ಗರ್ ಸ್ಥಾನಿಕಜಾಯ್ 11, ಮೊಹ್ಮದ್ ನಬಿ ಅಜೇಯ 2 ರನ್ ಬಾರಿಸಿದರು.
Next Story