2018ರ ಪಿಫಾ ಫುಟ್ಬಾಲ್ ಹಬ್ಬಕ್ಕೆ ವರ್ಣರಂಜಿತ ಚಾಲನೆ

ರಷ್ಯಾ : ಮೊದಲ ಬಾರಿಗೆ ಆತಿಥ್ಯ ವಹಿಸಿರುವ ರಷ್ಯಾದಲ್ಲಿ ಪುಟ್ಬಾಲ್ ಸಂಭ್ರಮ ಗರಿಗೆದರಿದೆ. ಮಾಸ್ಕೊದ ಲುಜ್ನಿಕಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯಕ್ಕೂ ಮುನ್ನಾ ನಡೆದ ಉದ್ಘಾಟನಾ ಸಮಾರಂಭ ನಡೆಯಿತು. ರಷ್ಯಾದ ಖ್ಯಾತ ರೂಪದರ್ಶಿ ನಥಾಲಿಯಾ ಅವರೊಂದಿಗೆ, 2010ರ ಪಿಫಾ ವಿಶ್ವಕಪ್ ಗೆದ್ದ ಸ್ಪೇನ್ ತಂಡದ ನಾಯಕ ಐಕರ್ ಕ್ಯಾಸಿಲಾಸ್ ವಿಶ್ವಕಪ್ ಟ್ರೋಫಿ ಕ್ರೀಡಾಂಗಣಕ್ಕೆ ತಂದು, ಪ್ರೇಕ್ಷಕರಿಗೆ ಪ್ರದರ್ಶಿಸುವ ಮೂಲಕ ವಿಶ್ವ ಹಬ್ಬಕ್ಕೆ ಚಾಲನೆ ನೀಡಿದರು.
ಈ ಬಳಿಕ ಪಾಪ್ ಗಾಯಕರಾದ ರಾಬಿ ವಿಲಿಯಮ್ಸ್, ಅಯ್ದಾ ಗ್ಯಾರಿಪುಲಿನಾ, ನಿಕ್ಕಿ ಜ್ಯಾಮ್ ಮತ್ತು ಎರಾ ಇಸ್ಪ್ರೇಫಿ ಕಂಠಸಿರಿಯಲ್ಲಿ, ಹಾಡುಗಳು ಮಾರ್ಧನಿಸುವ ಮೂಲಕ, ನೆರೆದಿದ್ದ ಪುಟ್ಬಾಲ್ ಪ್ರಿಯರನ್ನು ರಂಜಿಸಿ, ವರ್ಣರಂಜಿತ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಮೂಡಿಸಿತು. ಈ ಮೂಲಕ ಎಲ್ಲೆಲ್ಲೂ ವಿಶ್ವ ಪುಟ್ಬಾಲ್ ಜ್ವರವನ್ನು ಹೆಚ್ಚುವಂತೆ ಮಾಡಿತು.
ಇನ್ನೂ ಇದೇ ಸಂದರ್ಭದಲ್ಲಿ ಕ್ರೀಡಾಂಗಣದ ಮಧ್ಯದಲ್ಲಿ ರಚಿಸಲಾಗಿದ್ದ ಪುಟ್ಬಾಲ್ ಪ್ರತಿಕೃತಿಯ ಮೇಲೆ ನಡೆದ ನೃತ್ಯ ಪ್ರದರ್ಶನ ಕಾರ್ಯಕ್ರಮವಂತೂ, ಎಲ್ಲರನ್ನೂ ಗಾನ ಸುಧೆಯಲ್ಲಿ ಮುಳುಗಿಸಿತು. ಅಲ್ಲದೇ ನೆರೆದಿದ್ದ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಿ, ಎಲ್ಲರ ಬಾಯಲ್ಲೂ ಪಿಫಾ ವಿಶ್ವಕಪ್ ಪುಟ್ಬಾಲ್ ನಮ್ಮ ದೇಶಕ್ಕೆ ದೊರೆಯಲಿ ಎಂಬ ಉದ್ಘೋಷ ಮೂಡಿಸಿತು.
ಈ ಉದ್ಘಾಟನೆಯ ಸಮಾರಂಭದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟೀನ್, ಪುಟ್ಬಾಲ್ ಕ್ರೀಢೆಯನ್ನು ಇಲ್ಲಿ ಆಯೋಜಿಸಿದ್ದು ನಮ್ಮ ಹೆಮ್ಮೆ ಎನಿಸುತ್ತಿದೆ. ನಿಮ್ಮನ್ನೆಲ್ಲಾ ಕಂಡರೇ ಮೊದಲ ಬಾರಿಕೆ ಅಧಿಕೃತ ಪಂದ್ಯ ನಡೆದ ನಂತ್ರ, ಇಲ್ಲಿನ ಜನರಿಗೆ ಪುಟ್ಬಾಲ್ ಬಗ್ಗೆ ಪ್ರೇಮ ಜಾಸ್ತಿ ಮಾಡಿದೆ. ನಮ್ಮ ದೇಶದ ಆತಿಥ್ಯ, ನಿಮ್ಮೆಲ್ಲರಿಗೂ ರಂಜಿಸಿ, ಆನಂದವನ್ನು ನೀಡಲಿ ಎಂದು ಹೇಳಿದರು.
ಒಟ್ಟಾರೆಯಾಗಿ ವಿಶ್ವಕಪ್ ಪುಟ್ಬಾಲ್ ಪಂದ್ಯಕ್ಕೆ ನಿನ್ನೆ ಜಾಲನೆ ದೊರೆತಿದೆ. ಈ ಮೂಲಕ ಪಿಫಾ ವಿಶ್ವಕಪ್ ಜ್ವರವನ್ನು ಹೆಚ್ಚಿಸಿದೆ. ಈಗ ಎಲ್ಲೆಲ್ಲೂ ಪಿಫಾ ಜ್ವರ ಹೆಚ್ಚುತ್ತಾ ಇದ್ದು, ಯಾರ ಮುಡಿಗೆ ಗೆಲುವಿನ ಕಿರೀಟ ದೊರೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.