Top

21.8 ದಶಲಕ್ಷ ಡಾಲರ್ ತೆರಿಗೆ ವಂಚನೆ: 2 ವರ್ಷ ಜೈಲಲ್ಲಿ ಕಳೆಯಲು ರೊನಾಲ್ಡೊ ಒಪ್ಪಿಗೆ

21.8 ದಶಲಕ್ಷ ಡಾಲರ್ ತೆರಿಗೆ ವಂಚನೆ:  2 ವರ್ಷ ಜೈಲಲ್ಲಿ ಕಳೆಯಲು ರೊನಾಲ್ಡೊ ಒಪ್ಪಿಗೆ
X

18.8 ದಶಲಕ್ಷ ಯುರೋ ಅಂದರೆ ಸುಮಾರು 21.8 ದಶಲಕ್ಷ ಡಾಲರ್ ತೆರಿಗೆ ವಂಚನೆ ಪ್ರಕರಣದಲ್ಲಿ ಸ್ಪೇನ್ ತೆರಿಗೆ ಅಧಿಕಾರಿಗಳ ಮುಂದೆ 2 ವರ್ಷ ಜೈಲಿನಲ್ಲಿ ಕಳೆಯಲು ಮ್ಯಾಡ್ರಿಡ್ ಕ್ಲಬ್ ಹಾಗೂ ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಒಪ್ಪಿದ್ದಾರೆ.

ಸ್ಪೇನ್ ನಿಯಮದ ಪ್ರಕಾರ ಮೊದಲ ಬಾರಿ ವಂಚನೆ ಮಾಡಿದ ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷ ವಿಧಿಸಲಾಗುತ್ತದೆ. ಆದರೆ ಆರೋಪಿಯ ಇಚ್ಛೆಯಂತೆ ಯಾವುದೇ ಸಮಯ ಹಾಗೂ ದಿನದಲ್ಲಿ ಎಷ್ಟು ಸಮಯ ಬೇಕಾದರೂ ಜೈಲಿನಲ್ಲಿ ಇರಬಹುದಾಗಿದೆ.

ಸ್ಪೇನ್ ತೆರಿಗೆ ಇಲಾಖೆಯ ಅಧಿಕಾರಿಗಳ ಜೊತೆ ರಾಜೀ ಒಪ್ಪಂದದ ನಂತರ ರೊನಾಲ್ಡೊ ಜೈಲಿನಲ್ಲಿ 2 ವರ್ಷ ಕಳೆಯಲು ಒಪ್ಪಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. 33 ವರ್ಷದ ರೊನಾಲ್ಡೊ ಪ್ರಸ್ತುತ ಫಿಫಾ ವಿಶ್ವಕಪ್​ನಲ್ಲಿ ಪೋರ್ಚುಗಲ್​ ತಂಡವನ್ನು ಪ್ರತಿನಿಧಿಸುತ್ತಿದ್ದು, ತೆರಿಗೆ ವಂಚನೆ ಆರೋಪವನ್ನು ಈ ಹಿಂದೆ ನಿರಾಕರಿಸಿದ್ದರು. ಅಲ್ಲದೆ ಈ ತಪ್ಪಿಗೆ ಏಜೆಂಟ್​ಗಳು ಕಾರಣ ಎಂದು ಅರೋಪಿಸಿದ್ದರು.

Next Story

RELATED STORIES