Top

ಸಾವಿನ ಹತ್ತಿರದ ದರ್ಶನ : "ಶವದ ಪೆಟ್ಟಿಗೆ ಹೋಟೆಲ್‌"ನಲ್ಲಿ ಸಂದರ್ಶನ

ಸಾವಿನ ಹತ್ತಿರದ ದರ್ಶನ : ಶವದ ಪೆಟ್ಟಿಗೆ ಹೋಟೆಲ್‌ನಲ್ಲಿ ಸಂದರ್ಶನ
X

ಜಪಾನ್ : ಸಾವನ್ನು ಹತ್ತಿರದಿಂದ ಕಂಡು, ಹೇಗಿರುತ್ತದೆ ಸಾವಿನ ಅನುಭವ ಎಂಬುದನ್ನು ಅರಿಯಬೇಕಾದರೇ ಇಲ್ಲಿಗೆ ನೀವು ಹೋಗಲೇ ಬೇಕು. ಈ ಹೋಟೆಲ್‌ನಲ್ಲಿ ಶವದ ಪೆಟ್ಟಿಗೆಯಲ್ಲಿ ನಿಮ್ಮನ್ನು ಇರಿಸಿ, ಮುಚ್ಚಿ ನಿಮಗೆ ಸಾವಿನ ಅಂತಿಮ ಅನುಭವದ ದರ್ಶನವನ್ನು ಮಾಡಲಾಗುತ್ತದೆ. ಹೀಗಾಗಿ ಈ ಹೋಟೆಲ್‌ಗೆ ಎಲ್ಲಿಲ್ಲದ ಬೇಡಿಕೆ. ಈ ಹೋಟೆಲ್‌ನಲ್ಲಿ ಉಳಿದುಕೊಳ್ಳೋಕೆ ಪ್ರವಾಸಿಗರು, ಕ್ಯೂ ನಿಲ್ಲುತ್ತಿದ್ದಾರೆ. ಇಂತಹ ಎಲ್ಲರೂ ಇಷ್ಟ ಪಡುವ ಹೋಟೆಲ್‌ ಜಪಾನ್‌ನ ಟೋಕಿಯೋದಲ್ಲಿದೆ.

ಅಂದಹಾಗೇ ಶವದ ಪೆಟ್ಟಿಗೆಯ ಹೋಟೆಲ್‌ ಎಂದೇ ಇಲ್ಲಿ ಪ್ರಸಿದ್ದಿಯಾಗಿರುವ ಈ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಪ್ರವಾಸಿಗರು ಇಷ್ಟ ಪಟ್ಟರೇ ಸಾವಿನ ಅಂತಿಮ ದರ್ಶನದವನ್ನು ಮಾಡಿಸಲಾಗುತ್ತದೆ. ಶವದ ಪೆಟ್ಟಿಗೆಯಲ್ಲಿ ಮಲಗಿಸಿ, ಮೂರು ಸಣ್ಣ ರಂದ್ರ ಮಾಡಿ, ಉಸಿರಾಟಕ್ಕೆ ವ್ಯವಸ್ಥೆ ಮಾಡಿ ಮಲಗಿಸಲಾಗುತ್ತದೆ. ಶವದ ಪೆಟ್ಟಿಗೆಯಲ್ಲಿ ಮಲಗಿದ ಯಾರಿಗೂ ಯಾವುದೇ ಬೆಳಕೂ ಇರೋದಿಲ್ಲ. ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಇರಬಹುದಾಗಿದೆ.

ಹೀಗೆ ಶವದ ಪೆಟ್ಟಿಗೆಯ ಒಳಗೆ ಸೇರಿದವರು, ಹೊರಗೆ ಬರಬೇಕಾದಾಗ, ಒಂದು ಸೂಚನೆ ಕೊಡಬೇಕು. ನನಗೆ ಸಾಕಾಗಿದೆ. ನಾನು ಹೊರಗೆ ಬರುತ್ತೇನೆ ಅಂದಾಗ ಶವದ ಪೆಟ್ಟಿಗೆಯನ್ನು ಹೋಟೆಲ್‌ ಸಿಬ್ಬಂದಿಗಳು ಓಪನ್‌ ಮಾಡಿ ಹೊರಗೆ ಕರೆತರಲಾಗುತ್ತಾರೆ. ಹೀಗೆ ಶವದ ಪೆಟ್ಟಿಗೆಯಲ್ಲಿ ಮಲಗಿ ಹೊರಗೆ ಬರುವ ಪ್ರತಿಯೊಬ್ಬರಿಗೂ ಸಾವಿನ ಅಂತಿಮ ದರ್ಶನವಾಗಿರುತ್ತದೆಯಂತೆ. ಅಂದರೇ, ಮೂರೇ ಮೂರು ರಂದ್ರದ ಮೂಲಕ ಗಾಳಿಯನ್ನು ಸೇವಿಸುತ್ತಾ, ಸಾವನ್ನು ಹತ್ತಿರದಿಂದ ಕಂಡಿರುತ್ತಾನೆ. ಕತ್ತಲೆಯ ಶವದ ಪೆಟ್ಟಿಗೆಯ ಒಳಗೇ ತನ್ನ ಸಾವನ್ನು ತಾನು ತುಂಬಾ ಹತ್ತಿರದಿಂದಲೇ ಕಂಡ ಅನುಭವ ಆಗಿರುತ್ತದೆ ಅಂತಾರಂತೆ ಶವದ ಪೆಟ್ಟಿಗೆಯಲ್ಲಿ ಮಲಗಿ ಹೊರಗೆ ಬಂದೋರು.

ಅಂದಹಾಗೇ ಹೀಗೆ ಶವದ ಪೆಟ್ಟಿಗೆಯಲ್ಲಿ ಮಲಗಿ ಹೊರಗೆ ಬರೋರಿಗೆ ಹೋಟೆಲ್‌ ಕೂಡೂ ರೀಯಾಯಿತಿ ದರದಲ್ಲಿ ಪಾನೀಯಗಳನ್ನು ನೀಡುತ್ತಂತೆ. ಈ ಪಾನೀಯಗಳ ಹೆಸರು ಕೂಡ ತುಂಬಾನೇ ವಿಭಿನ್ನವಾಗಿದ್ದಾವೆ. ಬರ್ತು, ಡೆತ್ತು, ಓಲ್ಡ್ ಎಜ್, ಸಫರಿಂಗ್ ಈ ರೀತಿ ಪಾನೀಯಗಳಿಗೆ ಹೆಸರಿಡಲಾಗಿದೆ. ನೀವು ಶವದ ಪೆಟ್ಟಿಗೆಯಲ್ಲಿ ಮಲಗಿ ಹೊರಬಂದಾಗ ಯಾವುದೇ ಪಾನೀಯ ತೆಗೆದುಕೊಂಡರೂ ಈ ಹೋಟೆಲ್‌ನಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತದೆ.

ಇನ್ನೂ ಶವದ ಪೆಟ್ಟಿಗೆಯ ಹೋಟೆಲ್‌ ನೀವು ಪ್ರವೇಶಿಸುತ್ತಿದ್ದ ಹಾಗೇ ನಿಮ್ಮನ್ನು ಸ್ವಾಗತ ಮಾಡೋದು ಅಸ್ಥಿಪಂಜರಗಳು. ಅಲ್ಲದೇ ಹೋಟೆಲ್‌ನ ಹೊರಗಡೆ ಕೂಡ ಸಾವಿನ ವಿಭಿನ್ನ ಮುಖಗಳನ್ನು ಅನಾವರಣ ಮಾಡುವ ಪ್ರತಿಭಿಂಬಗಳನ್ನು ಇಡಲಾಗಿದೆ. ಹಾಗೇ ಅಲ್ಲಲ್ಲಿ ಸಾವಿನ ಅಂತಿಮ ದರ್ಶನದಲ್ಲಿ ಆಗುವ ಸ್ಲೋಗನ್‌ ಕೂಡ ಹಾಕಲಾಗಿದೆಯಂತೆ.

ಇಂತಹ ಶವದ ಪೆಟ್ಟಿಗೆಯ ಹೋಟೆಲ್‌ನಲ್ಲಿ ಇದ್ದು ಪರೋಕೆ ಅನೇಕರು ಹೆಸರುಗಳನ್ನು ಮೊದಲೇ ನೊಂದಾಯಿಸಿಕೊಳ್ಳುತ್ತಾರಂತೆ. ನೊಂದಾಯಿಸಿಕೊಂಡು ಹೋಟೆಲ್‌ಗೆ ಬರುವವರು ಇಷ್ಟಪಟ್ಟರೆ ಸಾವಿನ ದರ್ಶನದಲ್ಲಾಗುವ ಅನುಭವ ಮಾಡಿಸ್ತಾರೆ. ಹೀಗೆ ಅನುಭವ ಪೆಡೆದು ಹೊರಬರುವವರು ತಮ್ಮ ಅನುಭವಗನ್ನು ದಾಖಲಿಸೋಕೆ ಅಂತಾನೇ, ಒಂದು ಪುಸ್ತಕ ಇಟ್ಟಿದ್ದು. ಇದ್ರಲ್ಲಿ ಆಸಕ್ತರು ತಮ್ಮ ಅನುಭವಗಳನ್ನು ದಾಖಲಿಸಿ ಬರಬಹುದಾಗಿದೆ. ಇದನ್ನು ಒಂದು ಪುಸ್ತಕ ರೂಪದಲ್ಲಿ ಮಾಡಿ ಹೊರ ತರೋಕೆ ಹೋಟೆಲ್‌ ಮಾಲೀಕರು ರೆಡಿಯಾಗಿದ್ದಾರಂತೆ.

ಒಟ್ಟಾರೆಯಾಗಿ, ತಂತ್ರಜ್ಞಾನದಲ್ಲಿ ಮುಳುಗಿ ಹೋಗಿರುವ ಯುವಜನರನ್ನು, ಜೀವನದ ಕಡೆಗೆ ಸೆಳೆಯಲು ಇದು ಸಾವಿನ ಸಿದ್ದಾಂತದ ಪ್ರಯೋಗ ಅಂತ ಹೇಳ್ತಾ ಇದ್ದಾರೆ ಮಾಲೀಕರು. ಅಲ್ಲದೇ ಹೋಟೆಲ್‌ ಮಾಲೀಕರ ಈ ಕಲ್ಪನೆ ದಿನೇ ದಿನೇ ಬಹಳ ಜನಪ್ರಿಯವಾಗ್ತಾ ಇದೆ. ಈ ಮೂಲಕ ದಿನೇ ದಿನೇ ಈ ಹೋಟೆಲ್‌ನಲ್ಲಿ ಉಳಿದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗ್ತಿದೆ.

ವಸಂತ ಬಿ ಈಶ್ವರಗೆರೆ, ನ್ಯೂಸ್‌ ಡೆಸ್ಕ್‌, ಟಿವಿ5

Next Story

RELATED STORIES