ಒಂದೇ ದಿನದಲ್ಲಿ 2 ಬಾರಿ ಆಫ್ಘಾನ್ ಆಲೌಟ್: ಭಾರತ ಜಯಭೇರಿ

X
TV5 Kannada15 Jun 2018 12:52 PM GMT
ಬೆಂಗಳೂರು: ಟೆಸ್ಟ್ಗೆ ಪಾದರ್ಪಣೆ ಮಾಡಿದ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡ ಒಂದೇ ದಿನದಲ್ಲಿ ಎರಡು ಬಾರಿ ಆಲೌಟಾಗಿ ಹೀನಾಯವಾಗಿ ಸೋಲುಂಡಿದೆ. ಆತಿಥೇಯ ಭಾರತ ತಂಡ ಇನಿಂಗ್ಸ್ ಹಾಗೂ 262 ರನ್ಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 474 ರನ್ಗಳಿಗೆ ಆಲೌಟಾಗಿತ್ತು. ಎರಡನೇ ದಿನ ಕಣಕ್ಕಿಳಿದ ಆಫ್ಘಾನಿಸ್ತಾನ ಮೊದಲ ಇನಿಂಗ್ಸ್ನಲ್ಲಿ 109 ರನ್ಗೆ ಆಲೌಟಾಯಿತು. ಫಾಲೋಆನ್ಗೆ ಗುರಿಯಾದ ಆಫ್ಘಾನಿಸ್ತಾನ ಎರಡನೇ ಇನಿಂಗ್ಸ್ನಲ್ಲಿ 103 ರನ್ಗಳಿಗೆ ಪತನಗೊಂಡಿತು.
ಒಂದೇ ದಿನದಲ್ಲಿ ತಂಡವೊಂದು ಎರಡು ಬಾರಿ ಔಟಾಗಿ ಸೋಲುಂಡ ಕುಖ್ಯಾತಿಗೆ ಆಫ್ಘಾನಿಸ್ತಾನ ಪಾತ್ರವಾಯಿತು. ಭಾರತದ ಬೌಲರ್ಗಳು ಅತ್ಯುತ್ತಮ ಪ್ರದರ್ಶನದ ಮುಂದೆ ಆಫ್ಘಾನಿಸ್ತಾನ ಬ್ಯಾಟ್ಸ್ಮನ್ಗಳು ನೆಲಕಚ್ಚಿ ಆಡಲು ವಿಫಲರಾದರು.
- ಸಂಕ್ಷಿಪ್ತ ಸ್ಕೋರ್
- ಭಾರತ ಮೊದಲ ಇನಿಂಗ್ಸ್ 474
- ಆಫ್ಘಾನಿಸ್ತಾನ ಮೊದಲ ಇನಿಂಗ್ಸ್ 109
- ಆಫ್ಘಾನಿಸ್ತಾನ ಎರಡನೇ ಇನಿಂಗ್ಸ್ 103 (ಅಶ್ಲಮುಲ್ಲಾಹ್ ಶಾಹಿದಿ 36, ಅಸ್ಗರ್ ಸ್ಟಾನಿಕಾಜಾ 25, ಜಡೇಜಾ 17/4, ಉಮೇಶ್ ಯಾದವ್ 26/3, ಇಶಾಂತ್ 17/2).
- ಪಂದ್ಯಶ್ರೇಷ್ಠ: ಶಿಖರ್ ಧವನ್
Next Story