ಆಫ್ಘನ್ 109ಕ್ಕೆ ಆಲೌಟ್: ಭಾರತಕ್ಕೆ 365 ರನ್ ಭಾರೀ ಮುನ್ನಡೆ

X
TV5 Kannada15 Jun 2018 9:00 AM GMT
ಬೆಂಗಳೂರು: ಅನನುಭವಿ ಬ್ಯಾಟ್ಸ್ಮನ್ಗಳು ವಿಕೆಟ್ ಕೈ ಚೆಲ್ಲಿದ್ದರಿಂದ ಆಪ್ಘಾನಿಸ್ತಾನ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 109 ರನ್ಗಳ ಅಲ್ಪ ಮೊತ್ತಕ್ಕೆ ಆಲೌಟಾಗಿದೆ. ಇದರೊಂದಿಗೆ ಆತಿಥೇಯ ಭಾರತ 365 ರನ್ಗಳ ಭಾರೀ ಮುನ್ನಡೆ ಗಳಿಸಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ಭಾರತ ಮೊದಲ ಇನಿಂಗ್ಸ್ನಲ್ಲಿ ಭಾರತ 474 ರನ್ ಕಲೆ ಹಾಕಿತ್ತು. ಆಫ್ಘಾನಿಸ್ತಾನ ತಂಡ 109 ರನ್ಗಳಿಗೆ ಆಲೌಟಾಗಿ ಫಾಲೋಆನ್ಗೆ ಗುರಿಯಾಯಿತು. ಚಹಾ ವಿರಾಮದ ನಂತರ ಆಫ್ಘಾನಿಸ್ತಾನ ಮತ್ತೊಮ್ಮೆ ಬ್ಯಾಟಿಂಗ್ಗೆ ಇಳಿಯಲಿದೆ.
ಭಾರತದ ಪರ ಅಶ್ವಿನ್ 4 ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ ಮತ್ತು ಇಶಾಂತ್ ಶರ್ಮ ತಲಾ 2 ವಿಕೆಟ್ ಪಡೆದರು. ಆಫ್ಘಾನಿಸ್ತಾನ ಪರ ಮೊಹಮದ್ ನಬಿ 24 ರನ್ ಗಳಿಸಿ ತಂಡದ ಪರ ವೈಯಕ್ತಿಕ ಗರಿಷ್ಠ ಸಾಧನೆ ಮಾಡಿದರು.
- ಸಂಕ್ಷಿಪ್ತ ಸ್ಕೋರ್
- ಭಾರತ ಮೊದಲ ಇನಿಂಗ್ಸ್ 474
- ಆಫ್ಘಾನಿಸ್ತಾನ ಮೊದಲ ಇನಿಂಗ್ಸ್ 27.5 ಓವರ್ 109 (ನಬಿ 24, ಮುಜೀಬ್ 15, ಶಹಜಾದ್ 14, ರಹಮತ್ 11, ಅಶ್ವಿನ್ 27/4, ಜಡೇಜಾ 18/2, ಇಶಾಂತ್ 28/2).
Next Story