Top

ಜಿರೋ ಜೊತೆ ಮತ್ತೊಬ್ಬ ಹೀರೋ: ಫ್ಯಾನ್ಸ್​ಗೆ ಡಬಲ್ ಧಮಾಕ

ಜಿರೋ ಜೊತೆ ಮತ್ತೊಬ್ಬ ಹೀರೋ: ಫ್ಯಾನ್ಸ್​ಗೆ ಡಬಲ್ ಧಮಾಕ
X

ಶಾರೂಖ್ ಖಾನ್ ಅಭಿನಯದ ಜೀರೋ ಸಿನಿಮಾ ಈದ್ ಸ್ಪೆಷಲ್ ಟೀಸರ್ ಸಖತ್ ಸೌಂಡ್ ಮಾಡ್ತಿದೆ. ಕಾರಣ ಟೀಸರ್​ನಲ್ಲಿ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಜುಗಲ್​ಬಂದಿ. ಹೌದು, ಶಾರೂಖ್ ಖಾನ್ ಅಭಿನಯದ ಜೀರೋ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಲ್ಮಾನ್ ಖಾನ್ ಮಿಂಚಿದ್ದಾರೆ. ಸಲ್ಮಾನ್ ಖಾನ್ ಇಲ್ಲಿ ಸಲ್ಮಾನ್ ಖಾನ್ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ.

ಒಂದು ಕಾಲಕ್ಕೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಎಣ್ಣೆ, ಸೀಗೆಕಾಯಿ ಆಗಿದ್ದವರು ಈಗ ಜಿಗಿರಿದೋಸ್ತ್. ಅವರು ಮನೆಗೆ ಇವರು, ಇವರ ಮನೆಗೆ ಅವರು ಹೋಗೋದು ಸಾಮಾನ್ಯವಾಗಿಬಿಟ್ಟಿದೆ. ನೋಡಿದವರು ದೋಸ್ತಿ ಅಂದ್ರೆ ಇವ್ರೇನಪ್ಪ ಎನ್ನುವಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಒಂದೇ ಸಿನಿಮಾದಲ್ಲಿ ಜೊತೆಯಾಗಿ ಮೋಡಿ ಮಾಡೋಕೆ ಬರುತ್ತಿದ್ದಾರೆ.

ಜೀರೋ ಶಾರೂಖ್ ಖಾನ್ ಸಿನಿ ಕೆರಿಯರ್​ನ ಒಂದು ಡಿಫರೆಂಟ್ ಸಿನಿಮಾ. ಐದು ಅಡಿ ಐದು ಇಂಚಿನ ಕಟ್​ಮಸ್ತ್ ದೇಹಸಿರಿಯಲ್ಲಿ ಎರಡು ಕೈಬಿಸಿ ನೋಡುಗರನ್ನು ಮೋಡಿ ಮಾಡುತ್ತಿದ್ದ ಶಾರೂಖ್..ಈ ಚಿತ್ರದಲ್ಲಿ ಎರಡೂವರೆ ಅಡಿ ಎತ್ತರದ ಕುಬ್ಜನಾಗಿ ಕಾಣಿಸಿಕೊಳ್ಳಲಿದ್ದಾರೆ. ಕಿರಾತಕ ಕುಳ್ಳನಾಗಿ ಸರ್ಕಸ್ ಮಾಡಲಿದ್ದಾರೆ. ಈ ಹಿಂದೆ ಒಂದು ಚೋಟ ಟೀಸರ್​ನ ಜೀರೋ ಚಿತ್ರತಂಡ ಬಿಡುಗಡೆ ಮಾಡಿತ್ತು. ಬಟ್ ದಿಸ್ ಟೈಮ್ ಡಿಫರೆಂಟ್ ಟೀಸರನ್ನು ಸೋಷಿಯಲ್ ಮೀಡಿಯದಲ್ಲಿ ತೇಲಿ ಬಿಟ್ಟಿದೆ.. ಅದೇ ಈ ಜೀರೋ ಈದ್ ಟೀಸರ್..

ಜೀರೋ ಚಿತ್ರದ ನೂತನ ಟೀಸರ್​ನ ವಿಶೇಷ ಶಾರೂಖ್ ಮತ್ತು ಸಲ್ಮಾನ್ ಒಟ್ಟಿಗೆ ಕಾಣಿಸಿಕೊಂಡಿರುವುದು.. ಕುಬ್ಜನ ಅವತಾರದಲ್ಲಿ ಶಾರೂಖ್ ಹೆಜ್ಜೆ ಹಾಕಿದ್ರೆ, ಶಾರೂಖ್ ಜೊತೆ ಸ್ಟಾರ್​ ನಟನಾಗಿ ಸಲ್ಲು ಬಾಯ್ ಮಸ್ತ್ ಸ್ಟೆಪ್ ಹಾಕಿದ್ದಾರೆ.. ಟೀಸರ್ ಬಿಡುಗಡೆಯಾಗುತ್ತಿದಂತೆ ಬಂಫರ್ ರೆಸ್ಪಾನ್ಸ್ ಸಿಗುತ್ತಿದೆ..

ಕಳೆದ ವರ್ಷ ಸಲ್ಮಾನ್ ಖಾನ್ ನಟನೆಯ ಟ್ಯೂಬ್​​ಲೈಟ್​ ಸಿನಿಮಾದಲ್ಲಿ ಜಾದುಗಾರನ ಪಾತ್ರದಲ್ಲಿ ಶಾರೂಖ್ ಕಾಣಿಸಿಕೊಂಡಿದ್ರು.. ಈಗ ಸಲ್ಮಾನ್ ಸರದಿ.. ಶಾರೂಖ್ ನಟನೆಯ ಜೀರೋ ಸಿನಿಮಾದಲ್ಲಿ ಅಥಿತಿ ಪಾತ್ರವನ್ನು ನಿರ್ವಹಿಸಿದ್ದಾರೆ ಸಲ್ಮಾನ್.. ಈ ಬಾರಿ ರಂಜಾನ್ ಹಬ್ಬಕ್ಕೆ ಸಲ್ಮಾನ್ ಖಾನ್ ನಟನೆಯ ರೇಸ್-3 ಚಿತ್ರ ತೆರೆಕಾಣುತ್ತಿದೆ.. ರೇಸ್ ತೆರೆಕಾಣುವ ಎಲ್ಲಾ ಚಿತ್ರಮಂದಿಗಳಲ್ಲಿಯೂ ಜೀರೋ ಚಿತ್ರದ ಟೀಸರ್ ಪ್ರದರ್ಶನವಾಗ್ತಿರೋದು ಈ ಖಾನ್ಸ್ ದೋಸ್ತಿ ಸ್ಪೆಷಲ್..

Next Story

RELATED STORIES