Top

ಐವರು ಯುವಕರಿಂದ ಯುವತಿ ಅಪಹರಣ

ಐವರು ಯುವಕರಿಂದ ಯುವತಿ ಅಪಹರಣ
X

ಯಾದಗಿರಿ : ಇಂದಿಗೂ ಕೂಡ ಒಬ್ಬ ಒಂಟಿ ಮಹಿಳೆ ನಿರ್ಭಯವಾಗಿ ಹೊಡಾಡುವುದಕ್ಕೆ ಭಯ ಪಡುತ್ತಾರೆ. ಕಿಲಿಕೇಡಿಗಳ ಕಾಟಕ್ಕೆ ಪೋಷಕರು ಬೇಸತ್ತು ಹೋಗಿದ್ದಾರೆ. ಇನ್ನೂ ಗಾಂಧೀಜಿಯವರ ಕಂಡು ಕನಸ್ಸು ನೆನಸಾಗುವುದಂತ್ತು ದೂರದ ಮಾತು. ಯಾದಗಿರಿ ನಗರದಲ್ಲಿ ಯುವತಿ ಬರ್ಹಿದೇಸಿಗೆ ತೆರಳಿದ ವೇಳೆ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ ಎನ್ನುವ ಸುದ್ದಿ ಹರಡಿದೆ.

ಹೌದು, ಇದು ಯಾದಗಿರಿ ನಗರದ ಗಂಜ್ ಬಳಿಯ ಬುಡ್ಗಜಂಗಮ ಕಾಲೋ‌ನಿಯಲ್ಲಿ ನಡೆದಿದೆ. ಕಳೆದ 10 ರಂದು ಬೆಳಿಗ್ಗೆ 6 ಗಂಟೆಗೆ ಯುವತಿ ಬರ್ಹಿದೇಸಿಗೆ ಹೋಗಿದ್ದಾಳೆ. ಈ ವೇಳೆ ಹೊಂಚುಹಾಕಿದ ಕಿಲಿಗೇಡಿಗಳ ತಂಡ 22 ವರ್ಷದ ಯುವತಿಯ‌ನ್ನು ಬಲವಂತವಾಗಿ ಬೈಕ್ ಮೇಲೆ ಕುಡಿಸಿಕೊಂಡು ಪರಾರಿಯಾಗಿದ್ದಾರೆ. ಬುಡ್ಗಜಂಗಮ ಕಾಲೋನಿಯ ಬಾಬು (26) ಎನ್ನುವ ಯುವಕ ಹಾಗೂ ಆತನ ಸ್ನೇಹಿತರು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಬಾಬು ಎನ್ನುವಾತ ತನ್ನ ಮಗಳನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಕೊಳ್ಳಲು ಯತ್ನಿಸಿದ. ಆ ವೇಳೆ ಪೊಲೀಸರಿಗೆ ದೂರು ನೀಡಿದ ಪರಿಣಾಮ ಬಾಲಕಿಯನ್ನು ತಂದು ಬಿಟ್ಟಿದ್ದ. ಈಗಾ ಮತ್ತೋಮ್ಮೆ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದಾನೆ. ಕೂಡಲೆ ಪೊಲೀಸರು ಕಿಡ್ನಾಪ್ ಆರೋಪಿಗಳನ್ನು ಬಂಧಿಸಿ ತಮ್ಮ ಮಗ‍ಳನ್ನು ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.

ಈಗಾಗಲೇ ಕಿಡ್ನಾಪ್ ಮಾಡಿದ ಆರೋಪಿ ಬಾಬುಗೆ ಮದುವೆ ಆಗಿ ಎರಡು ಮಕ್ಕಳಿದ್ದರು, ಚಿಕ್ಕ ವಯಸ್ಸಿನ ಹುಡುಗಿಯ ಮೇಲೆ ಕಣ್ಣು ಹಾಕಿ ಕಿಡ್ನಾಪ್ ಮಾಡಿ ಪರರಾರಿ ಆಗಿದ್ದಾನೆ. ಅಲ್ಲದೆ ಆರೋಪಿ ಮೇಲೆ ಪೊಲೀಸ್ ಠಾಣೆಯಲ್ಲಿ ಹಲವು ಕೇಸ್‌ಗಳಿವೆ. ಯಾವುದೋ ಹಳೆ ದ್ವೇಷಕ್ಕೆ ತನ್ನ ಮಗಳ ತಲೆ ಕೆಡಿಸಿ ಕಿಡ್ನಾಪ್ ಮಾಡಿದ್ದಾನೆ. ಮಗಳ ನಾಪತ್ತೆಯಿಂದ ಮನೆಯಲ್ಲಿ ಎಲ್ಲರು ತುಂಬ ದುಃಖಿತರಾಗಿದ್ದಾರೆ. ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಈ ಘಟನೆ ದೊಡ್ಡ ಅಘಾತ ನೀಡಿದೆ. ಅಲ್ಲದೆ ಯುವತಿ ವಿಚಾರಕ್ಕೆ ಬಾರದಂತೆ ಆರೋಪಿ ಬೆದರಿಕೆ ಹಾಕಿದ್ದಾನಂತೆ ಎಂದು ಪೋಷಕರು ಆರೋಪಿಸಿದ್ದಾರೆ.

ಲವ್ ಮಾಡುವ ನಾಟಕವಾಡಿ ಬಾಲಕಿಯನ್ನು ನಂಬಿಸಿ ಕಿಡ್ನಾಪ್ ಮಾಡಿದ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಒಟ್ಟಿನಲ್ಲಿ ಯುವತಿ ಕಿಡ್ನಾಪ್ ನಿಂದ ಬಡಾವಣೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು. ಆದಷ್ಟು ಬೇಗಾ ಆರೋಪಿಯನ್ನು ಪತ್ತೆ ಹಚ್ಚಿ ಕೈಗೆ ಕೊಳ ತೊಡಿಸಿ ಮಾವನ ಮನೆಗೆ ಕಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿ : ಬಾಳಗೌಡ ಪಾಟೀಲ್, ಟಿವಿ5 ಯಾದಗಿರಿ

Next Story

RELATED STORIES