Top

ಸ್ಯಾಂಡಲ್​ವುಡ್​ನ No.1 ನಟಿ ಯಾರು ಗೊತ್ತಾ.? ಇಲ್ಲಿದೆ ಓದಿ

ಸ್ಯಾಂಡಲ್​ವುಡ್​ನ No.1 ನಟಿ ಯಾರು ಗೊತ್ತಾ.? ಇಲ್ಲಿದೆ ಓದಿ
X

ಕನ್ನಡ ಚಿತ್ರರಂಗದ ಹೊಸ ಪದ್ಮಾವತಿ, ಡಿಂಪಲ್ ಕ್ವೀನ್ ರಚಿತಾ ರಾಮ್, ಇದೀಗ ಸ್ಯಾಂಡಲ್​ವುಡ್ ಅಂಗಳದಲ್ಲಿ ಮತ್ತೆ ಸೌಂಡ್ ಮಾಡ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗೋ ಮೂಲಕ ಮತ್ತೆ ಕನ್ನಡದ ನಂಬರ್ ವನ್ ನಟೀಮಣಿ ಅನಿಸಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನ No.1 ಚೆಲುವೆ ರಚಿತಾ ರಾಮ್.?

ಯೆಸ್... ಗ್ಲಾಮರ್ ಡಾಲ್ ರಚಿತಾ ರಾಮ್ ಈ ವರ್ಷ ಬರೋಬ್ಬರಿ ಐದು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಈ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರೋ ಬುಲ್ ಬುಲ್ ಚೆಲುವೆ, ಮತ್ತೊಮ್ಮೆ ಬಿಗ್ ಸ್ಟಾರ್ಸ್​ ಜೊತೆ ಕಮಾಲ್ ಮಾಡೋ ಸೂಚನೆ ಕೊಟ್ಟಿದ್ದಾರೆ.

ಬರೋಬ್ಬರಿ ಐದು ಚಿತ್ರದಲ್ಲಿ ಡಿಂಪಲ್ ಕ್ವೀನ್ ಬ್ಯುಸಿ..!

ಹೌದು.. ಡಿಂಪಲ್ ಕ್ವೀನ್ ರಚಿತಾ ರಾಮ್ ಅಂದ್ರೆ ಇಡೀ ಇಂಡಸ್ಟ್ರಿಗೇನೇ ಅಚ್ಚುಮೆಚ್ಚು. ಸಿನಿಪ್ರಿಯರಷ್ಟೇ ಅಲ್ಲ, ಈಕೆಯ ಮನೋಜ್ಞ ಅಭಿನಯ ಮತ್ತು ಡಿಂಪಲ್ ಲಕ್​ಗೆ ಬಿಗ್ ಸ್ಟಾರ್ಸ್​ ಆಯ್ಕೆ ಕೂಡ ಇವರೇ ಆಗಿದ್ದಾರೆ. ಈಗಾಗ್ಲೇ ಆಲ್ಮೋಸ್ಟ್ ಆಲ್ ಎಲ್ಲಾ ಬಿಗ್ ಸ್ಟಾರ್ಸ್​ ಜೊತೆ ಕೆಲಸ ಮಾಡಿರೋ ರಚಿತಾ, ಇದೀಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

[story-lines]

"ಚಕ್ರವ್ಯೂಹ"ಚಿತ್ರದ ನಂತ್ರ "ನಟಸಾರ್ವಭೌಮ"ಚಿತ್ರದಲ್ಲಿ ನಟಿಸೋ ಮೂಲಕ ಪುನೀತ್ ರಾಜ್​ಕುಮಾರ್​ಗೆ ಮತ್ತೆ ನಾಯಕಿ ಆಗಿದ್ದಾರೆ. ಇನ್ನು ಉಪೇಂದ್ರ ಜೊತೆ "ಉಪ್ಪಿ-ರುಪ್ಪಿ"ಸಿನಿಮಾ ಮಾಡ್ತಿದ್ದ ರಚಿತಾ, ಇದೀಗ ಆ ಸಿನಿಮಾ ಕಂಪ್ಲೀಟ್ ಆಗೋಕ್ಕೂ ಮುನ್ನ ಆರ್.ಚಂದ್ರು-ಉಪ್ಪಿ ಕಾಂಬಿನೆಷನ್​ನ "ಐ ಲವ್ ಯು"ಸಿನಿಮಾಗೆ ಬಣ್ಣ ಹಚ್ಚಿದ್ದಾರೆ.

ಬಿಗ್ ಸ್ಟಾರ್ಸ್​ ಮೊದಲ ಆಯ್ಕೆ ಈ ಬುಲ್ ಬುಲ್

ಅಲ್ಲದೆ ಜಾಗ್ವಾರ್ ಸ್ಟಾರ್ ನಿಖಿಲ್ ಜೊತೆ "ಸೀತಾರಾಮ ಕಲ್ಯಾಣ", "ಅಯೋಗ್ಯ"ಹೀಗೆ ಸುಮಾರು ಐದಾರು ಚಿತ್ರಗಳಲ್ಲಿ ರಚಿತಾ ನಟಿಸ್ತಿದ್ದಾರೆ. ಒಟ್ಟಾರೆ ಹೇಳ್ಬೇಕು ಅಂದ್ರೆ ಸುದೀಪ್, ದರ್ಶನ್, ಪುನೀತ್, ಗಣೇಶ್ ಹೀಗೆ ಬಹುತೇಕ ಬಿಗ್ ಸ್ಟಾರ್ಸ್​ ಸಿನಿಮಾಗಳ ಫಸ್ಟ್ ಚಾಯ್ಸ್ ರಚಿತಾನೇ ಆಗಿರ್ತಾರೆ. ಎಲ್ಲೋ ಒಂದ್ಕಡೆ ರಚಿತಾರ ಗುಳಿಕೆನ್ನೆ ನಿರ್ಮಾಪಕರ ಪಾಲಿಗೆ ಅದೃಷ್ಠವಾಗಿ ಪರಿಣಮಿಸಿದೆ.

ಬೆಳ್ಳಿತೆರೆ ಜೊತೆ ಕಿರುತೆರೆಯಲ್ಲೂ ಡಿಮ್ಯಾಂಡ್

ಪ್ರತೀ ದಿನ ಶೂಟಿಂಗ್ ಡಬ್ಬಿಂಗ್ ಅಂತ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರೋ ರಚಿತಾ ರಾಮ್, ಕಿರುತೆರೆಯಲ್ಲೂ ಬೇಜಾನ್ ಬ್ಯುಸಿ ಆಗಿದ್ದಾರೆ. "ಕಿಕ್"ಅನ್ನೋ ಡ್ಯಾನ್ಸ್ ಶೋ ಮುಗಿಸಿದ ರಚಿತಾ, ಇದೀಗ "ಮಜಾಭಾರತ"ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ.

ಮಹಿಳಾ ಪ್ರಧಾನ ಚಿತ್ರಕ್ಕೆ ರಚಿತಾ ಗ್ರೀನ್ ಸಿಗ್ನಲ್

ಅಷ್ಟೇ ಅಲ್ಲ, ಸದ್ಯದಲ್ಲೇ ಮತ್ತೆರಡು ಸಿನಿಮಾಗಳನ್ನ ಅನೌನ್ಸ್ ಮಾಡಲಿದ್ದಾರಂತೆ. ಇನ್ನೂ ಹೆಸರಿಡದ ಈ ಎರಡು ಹೊಸ ಸಿನಿಮಾಗಳಿಗೆ ಈಗಾಗ್ಲೇ ಅಡ್ವಾನ್ಸ್ ಕೂಡ ಪಡೆದು, ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಅಂದಹಾಗೆ ಅವು "ವುಮನ್ ಸೆಂಟ್ರಿಕ್"ಸಿನಿಮಾಗಳಾಗಿದ್ದು, ಇದೇ ಮೊದಲ ಬಾರಿ ರಚಿತಾ ಮಹಿಳಾ ಪ್ರಧಾನ ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರಂತೆ.

ಗುಳಿಕೆನ್ನೆ ಚೆಲುವೆ ಇದ್ರೆ ಸಿನಿಮಾ ಸೂಪರ್ ಹಿಟ್

ಬಾಲಿವುಡ್​ನ ಕ್ವೀನ್ ರೀತಿಯ ಸಿನಿಮಾಗಳನ್ನ ಮಾಡೋ ಕನಸು ಕಂಡಿದ್ದ ರಚಿತಾ, ಇದೀಗ ಗ್ಲಾಮರ್ ಬಿಟ್ಟು, ಎಕ್ಸ್​ಪೆರಿಮೆಂಟಲ್ ಸಿನಿಮಾಗಳಿಗೂ ಕೈಹಾಕಿರೋದು ವಿಶೇಷ. ಭಿನ್ನ ವಿಭಿನ್ನ ಪಾತ್ರಗಳಲ್ಲಿ ಗುರ್ತಿಸಿಕೊಳ್ಳೋ ಮೂಲಕ ವರ್ಸಟೈಲ್ ಕ್ಟ್ರೆಸ್ ಅನಿಸಿಕೊಳ್ತಿದ್ದಾರೆ ಡಿಂಪಲ್ ಕ್ವೀನ್. ಬಹುಶಃ ವರ್ಷಪೂರ ಈ ರೀತಿ ಬ್ಯುಸಿ ಇರೋ ಓನ್ಲಿ ಕನ್ನಡ ನಟಿ ಅನ್ನೋ ಹೆಗ್ಗಳಿಕೆ ಕೂಡ ರಚಿತಾಗಿದೆ. ಸದ್ಯ ರಿಲೀಸ್​ಗೆ ಸಜ್ಜಾಗ್ತಿರೋ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಸಾಲಿಗೆ ಸೇರಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮಂ ಬ್ಯೂರೋ ಚೀಫ್, ಟಿವಿ5 ಬೆಂಗಳೂರು

Next Story

RELATED STORIES