Top

ಅತೃಪ್ತರ ಸಭೆ ರದ್ದು: ವೇಣುಗೋಪಾಲ ಸಂಧಾನ ಯಶಸ್ವಿ

ಅತೃಪ್ತರ ಸಭೆ ರದ್ದು: ವೇಣುಗೋಪಾಲ ಸಂಧಾನ ಯಶಸ್ವಿ
X

ಸಚಿವ ಸ್ಥಾನ ಸಿಗದೇ ಕಡೆಗಣಿಸಿದ್ದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಎಂ.ಬಿ. ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಸಮಾಧಾನಪಡಿಸುವಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ವೇಣುಗೋಪಾಲ್ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ನಾಳೆ ನಡೆಯಬೇಕಿದ್ದ ಅತೃಪ್ತರ ಸಭೆ ರದ್ದುಗೊಂಡಿದೆ.

ಗುರುವಾರ ಅತೃಪ್ತರ ಸಭೆ ನಡೆಸಿದ ವೇಣುಗೋಪಾಲ್​, ಅತೃಪ್ತರ ಜೊತೆ ಯಶಸ್ವಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಭೆಯ ನಂತರ ಎಂ.ಬಿ. ಪಾಟೀಲ್ ಮತ್ತು ಜಾರಕಿಹೊಳಿ ಒಂದೇ ಕಾರಿನಲ್ಲಿ ಮರಳಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್​, ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನಗೊಂಡಿದ್ದರು. ಇಬ್ಬರನ್ನೂ ಸಮಾಧಾನಪಡಿಸಿದ್ದೇವೆ. ಸಚಿವ ಸ್ಥಾನವನ್ನು ಸೂಕ್ತ ಸಮಯದಲ್ಲಿ ಭರ್ತಿ ಮಾಡಲಿದ್ದೇವೆ. ಯಾವುದೇ ಪ್ರತ್ಯೇಕ ಸಭೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ ಎಂದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂತಾದವರ ನೇತೃತ್ವದಲ್ಲಿ ನಡೆದ ಮೈತ್ರಿ ಸರಕಾರದ ಸಮನ್ವಯ ಸಮಿತಿ ಸಭೆಯ ವಿವರ ಬಹಿರಂಗಪಡಿಸಲು ನಿರಾಕರಿಸಿದರು. ಇದು ಸರಕಾರದ ಆಂತರಿಕ ವಿಷಯ ಎಂದರು.

Next Story

RELATED STORIES