Top

ರೈಸಿಂಗ್ ಕಾಶ್ಮೀರ ಸಂಪಾದಕನ ಮೇಲೆ ಗುಂಡಿನ ದಾಳಿ

ರೈಸಿಂಗ್ ಕಾಶ್ಮೀರ ಸಂಪಾದಕನ ಮೇಲೆ ಗುಂಡಿನ ದಾಳಿ
X

ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ರೈಸಿಂಗ್ ಕಾಶ್ಮೀರ ಪತ್ರಿಕೆ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಶುಜಾತ್ ಬುಕಾರಿ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಶುಜಾತ್ ಬುಕಾರಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

ಪ್ರೆಸ್ ಕಾಲೋನಿಯಲ್ಲಿರುವ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ತಲೆಗೆ ಗುಂಡು ಹೊಕ್ಕಿರುವುದರಿಂದ ಶುಜಾತ್ ಬುಕಾರಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.

ಬುಕಾರಿ ಸುಮಾರು 2 ದಶಕದಿಂದ ರೈಸಿಂಗ್ ಕಾಶ್ಮೀರದ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಬುಕಾರಿ ಅವರ ಸೋದರ ಸೈಯದ್ ಬಸರತ್ ಬುಕಾರಿ ಮುಫ್ತಿ ಸರಕಾರದಲ್ಲಿ ಕಾನೂನು ಸಚಿವರಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರ ಹತ್ಯೆಗಳಾಗಿವೆ. 2 ದಶಕಗಳಲ್ಲಿ ಸುಮಾರು 77 ಪತ್ರಕರ್ತರ ಹತ್ಯೆಗಳಾಗಿವೆ.

Next Story

RELATED STORIES