Top

ನಲಪಾಡ್‌ಗೆ ಸಿಕ್ತು ರಂಜಾನ್ ಗಿಫ್ಟ್

ನಲಪಾಡ್‌ಗೆ ಸಿಕ್ತು ರಂಜಾನ್ ಗಿಫ್ಟ್
X

[story-lines]

ಬೆಂಗಳೂರು : 116ದಿನ ಅನುಭವಿಸಿದ ಮೊಹಮ್ಮದ್ ನಲಪಾಡ್ ಸೆರೆವಾಸ ಇಂದಿಗೆ ಅಂತ್ಯವಾಗಿದ್ದು, ಈ ಮೂಲಕ ನಲಪಾಡ್ ಗೆ ಬಿಗ್ ರಿಲೀಫ್ ದೊರೆತಿದೆ. ನ್ಯಾಯಮೂರ್ತಿ ಜಾನ್ ಮೈಕಲ್ ಡಿ‌ ಕುನ್ಹಾ ಅವರು ಆದೇಶ ನೀಡಿದ್ದು, ಹೈಕೋರ್ಟ್ ಏಕಸದಸ್ಯ ಪೀಠದಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.

ನಲಪಾಡ್ ಗೆ ಷರತ್ತು ವಿಧಿಸಿದ್ದು, ಎರಡು ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷ್ಯ ನಾಶಪಡಿಸದಿರುವುದು, ಅಗತ್ಯವಿದ್ದರೆ ಕಡ್ಡಾಯವಾಗಿ ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಲಾಗಿದೆ.ಈ ಮೂಲಕ ನಲಪಾಡ್ ಗೆ ರಂಜಾನ್ ಹಬ್ಬದ ಗಿಫ್ಟ್ ದೊರೆತಿದ್ದು, ಕುಟುಂಬದೊಂದಿಗೆ ರಂಜಾನ್ ಹಬ್ಬ ಸೆಲೆಬ್ರೇಟ್ ಮಾಡಲು ಹೈಕೋರ್ಟ್ ಅಸ್ತು ಎಂದಿದೆ.

ಇನ್ನು ನಲಪಾಡ್ ಪ್ರಕರಣದ ಬಗ್ಗೆ ನೋಡೋದಾದ್ರೆ,

 • ಫೆ.17, 2018 : ಮೊಹಮದ್ ನಲಪಾಡ್ ಹ್ಯಾರಿಸ್ ಅಂಡ್ ಟೀಂನಿಂದ ಫರ್ಜಿ ಕಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ.
 • ಫೆ.18, 2018 : ಬೆಂಗಳೂರು ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಲಪಾಡ್ ವಜಾ.
 • ಫೆ.19, 2018 : ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ನಲಪಾಡ್ ಶರಣಾಗತಿ. ಎರಡು ದಿನಗಳ ಕಾಲ ಪೊಲೀಸ್ ವಶದಲ್ಲಿ ವಿಚಾರಣೆ.
 • ಫೆ.21, 2018 : 14 ದಿನಗಳ ನ್ಯಾಯಾಂಗ ಬಂಧನಕ್ಕೆ ನಲಪಾಡ್, ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೊರೆ.
 • ಫೆ.22, 2018 : ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ಕುಟುಂಬದ ಜೊತೆ ರಾಜಿ ಸಂಧಾನಕ್ಕೆ ಶಾಸಕ ಹ್ಯಾರಿಸ್ ಯತ್ನ, ವಿಫಲ.
 • ಫೆ.23, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ, ಆಕ್ಷೇಪಣೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿಕೆ.
 • ಫೆ.27, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ಮಾರ್ಚ್ 2 ಕ್ಕೆ ತೀರ್ಪು ಕಾಯ್ದಿರಿಸಿದ ಸೆಷನ್ಸ್ ಕೋರ್ಟ್.
 • ಮಾ.02, 2018 : ನಲಪಾಡ್ ಮತ್ತು 6 ಜನ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಸೆಷನ್ಸ್ ಕೋರ್ಟ್.
 • ಮಾ.05, 2018 : ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಲಪಾಡ್ ರಿಂದ ಹೈಕೋರ್ಟ್ಗೆ ಮೇಲ್ಮನವಿ.
 • ಮಾ.07, 2018 : ಶೀಘ್ರ ಅರ್ಜಿ ಕೈಗೆತ್ತಿಕೊಳ್ಳುವಂತೆ ಮನವಿ. ಮನವಿ ತಳ್ಳಿ ಹಾಕಿದ ನ್ಯಾ.ಶ್ರೀನಿವಾಸ್​ ಹರೀಶ್​ ಕುಮಾರ್​. ಲಿಸ್ಟ್​ ಪ್ರಕಾರ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ. ಅಲ್ಲಿವರೆಗೆ ಕಾಯಿರಿ ಎಂದ ನ್ಯಾಯಮೂರ್ತಿ.
 • ಮಾ.09, 2018 : ಸುದೀರ್ಘ ಮೂರು ಗಂಟೆಗಳ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್.
 • ಮಾ.12, 2018 : ವಾದ ಪ್ರತಿವಾದ ಆಲಿಸಿ ನಲಪಾಡ್ ಜಾಮೀನು ಅರ್ಜಿ ವಿವಾರಣೆ ಪೂರ್ಣಗೊಳಿಸಿ ಮಾರ್ಚ್ 14ಕ್ಕೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್.
 • ಮಾ.14, 2018 : ಮೇಲ್ನೋಟಕ್ಕೆ ನಲಪಾಡ್ ಕ್ರೂರತೆ ಸಾಬೀತು, ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ಏಕಸದಸ್ಯ ಪೀಠ.
 • ಸೆಷನ್ಸ್ ಕೋರ್ಟ್, ಹೈಕೋರ್ಟ್ ಆದೇಶ ಪ್ರಶ್ನಿಸಲು ಅವಕಾಶವಿದ್ರೂ ತಮ್ಮ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿದ್ದ ಹಿನ್ನಲೆ ಸುಪ್ರೀಂ ಕದ ತಟ್ಟದಿರಲು ನಿರ್ಧರಿಸಿದ ಶಾಸಕ ಹ್ಯಾರಿಸ್.
 • ಮೇ.01, 2018 : ನಲಪಾಡ್ ಅಂಡ್ ಟೀಂ ವಿರುದ್ಧ ನ್ಯಾಯಾಲಯಕ್ಕೆ 600ಕ್ಕೂ‌ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ ಪೊಲೀಸರು.
 • ಮೇ.16, 2018 : ಮತ್ತೆ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ನಲಪಾಡ್ ರಿಂದ ಅರ್ಜಿ. ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಸರ್ಕಾರಕ್ಕೆ ನೋಟಿಸ್.
 • ಮೇ.19, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ, ನಲಪಾಡ್ ಪರ ವಕೀಲರ ವಾದ ಮಂಡನೆ.
 • ಮೇ.24, 2018 : ನಲಪಾಡ್ ಜಾಮೀನು ಅರ್ಜಿಗೆ 396 ಪುಟಗಳ ಆಕ್ಷೇಪಣೆ ಸಲ್ಲಿಸಿದ SPP ಎಂ.ಎಸ್. ಶ್ಯಾಂ ಸುಂದರ್.
 • ಮೇ.28, 2018 : ನಲಪಾಡ್ ಪರ ವಕೀಲ ಉಸ್ಮಾನ್ ರಿಂದ ವಾದ, SPP ಎಂ.ಎಸ್. ಶ್ಯಾಂ ಸುಂದರ್ ರಿಂದ ಪ್ರತಿವಾದ.
 • ಮೇ.29, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ. ಅಂತಿಮ ತೀರ್ಪನ್ನು ಮೇ 30 ಮಧ್ಯಾಹ್ನ 2.30ಕ್ಕೆ ಕಾಯ್ದಿರಿಸಿದ ನ್ಯಾ.ಪರಮೇಶ್ವರ ಪ್ರಸನ್ನ.ಬಿ.
 • ಮೇ.30, 2018 : ನಲಪಾಡ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ 63ನೇ ಸಿಟಿ ಸಿವಿಲ್ ಕೋರ್ಟ್.
 • ಜೂ.01,2018 : ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ.
 • ಜೂ.06,2018 : ಹೈಕೋರ್ಟ್ ನಲ್ಲಿ ನಲಪಾಡ್ ಅರ್ಜಿ ವಿಚಾರಣೆ ಆರಂಭ. SPPಗೆ ನೋಟಿಸ್.
 • ಜೂ.13,2018 : SPPಯಿಂದ ಆಕ್ಷೇಪಣೆ ಸಲ್ಲಿಕೆ. ವಾದ ಪ್ರತಿವಾದ ಮುಕ್ತಾಯ.
 • ಜೂನ್ 14ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದ್ದ ಹೈಕೋರ್ಟ್.

ಅಂತೂ ಇಂತು ಕಳೆದ 116 ದಿನಗಳಿಂದ ಜೈಲಿನಲ್ಲಿ ಬಂಧಿಯಾಗಿದ್ದ, ಮಹ್ಮದ್‌ ನಲಪಾಡ್‌, ಶನಿವಾರದಂದು ಆಚರಣೆಗೊಳ್ಳಿರುವ ರಂಜಾನ್‌ ಹಬ್ಬದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಈ ಮೂಲಕ ಜೈಲ ಹಕ್ಕಿ ಈಗ ಬಿಡುಗಡೆಯ ಸ್ವತಂತ್ರ ಹಕ್ಕಿಯಾಗಿ ಹೊರಬಂದಿದೆ.

Next Story

RELATED STORIES