ಕಿನಾರೆ ಹಾಡು ನೋಡಿ ಪುನೀತ್ ಫಿದಾ..!

ಇರುವೆಯಾ ಇರುವೆಯಾ ಸನಿಹವೇ ನೀನು... ಕಿನಾರೆ ಚಿತ್ರದ ಮೆಲೋಡಿಯಸ್ ಹಾಡು. ಚಿತ್ರದಲ್ಲಿ ನಾಯಕ ನಾಯಕಿಯ ನಡುವೆ ಮೂಡಿ ಬರೋ ಲವ್ ಸಾಂಗ್. ದೇವರಾಜ್ ಪೂಜಾರಿ ನಿರ್ದೇಶನದ ಕಿನಾರೆ ಚಿತ್ರಕ್ಕೆ ಬಿ.ಆರ್.ಸುರೇಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ. ಸುರೇಂದ್ರನಾಥ್ ರಾಗಕ್ಕೆ ಜಯಂತ್ ಕಾಯ್ಕಿಣಿ . ಇರುವೆಯಾ ಇರುವೆಯಾ ಸನಿಹವೇ ನೀನು ಅನ್ನೋ ರೊಮ್ಯಾಂಟಿಕ್ ಪದಗಳನ್ನ ಪೋಣಿಸಿದ್ದಾರೆ. ಸೋನುನಿಗಂ ಶ್ವೇತಾ ಪ್ರಭು ಹಾಡಿದ್ದಾರೆ.
ಕಿನಾರೆ ಚಿತ್ರದಲ್ಲಿ ಸತೀಶ್ ರಾಜ್ ನಾಯಕ ನಟನಾಗಿ ಕಾಣಿಸಿಕೊಂಡಿದ್ರೆ, ಗೌತಮಿ ಜಾದವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವ್ರ ಜೊತೆಗೆ ಸುಮಂತ್ ಶೆಟ್ಟಿ. ಅಪೇಕ್ಷಾ ಪುರೋಹಿತ್ ಪ್ರಮುಖಪಾತ್ರಗಳಲ್ಲಿ ಮಿಂಚಿದ್ದಾರೆ.
ಇರುವೆಯಾ ಇರುವೆಯಾ ನೀನು ಹಾಡನ್ನ ರಿಲೀಸ್ ಮಾಡಿದ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಕಿನಾರೆ ಚಿತ್ರದ ಟೀಸರ್ ಮತ್ತು ಸಾಂಗ್ನ ನೋಡಿ ಮೆಚ್ಚಿಕೊಂಡ ಅಪ್ಪು, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಮೊನ್ನೆಯಷ್ಟೇ ಧ್ರುವಾ ಸರ್ಜಾರಿಂದ ಕೋಳಿ ಹಾಡನ್ನ ರಿಲೀಸ್ ಮಾಡಿ, ಸುದ್ದಿ ಮಾಡಿದ್ದ ಚಿತ್ರತಂಡ ಅಂದಿನಿಂದ ವಾರದ ಗ್ಯಾಪ್ನಲ್ಲಿ ಒಬೊಬ್ಬ ಸ್ಟಾರ್ನಿಂದ ಒಂದು ಹಾಡನ್ನ ರಿಲೀಸ್ ಮಾಡೋದಾಗಿ ಹೇಳಿತ್ತು. ಅಂದ್ರಂತೆ, ಈಗ ಎರಡನೇ ಹಾಡನ್ನ ಪುನೀತ್ ರಾಜ್ಕುಮಾರ್ ಅವರಿಂದ ಬಿಡುಗಡೆ ಮಾಡಿಸಿದೆ.